ಎಸ್‌ಡಿಸಿ ಲೋಕಾಯುಕ್ತ ಬಲೆಗೆ
ಬಳ್ಳಾರಿ: ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ನಿವೇಶನ ನೋಂದಣಿ ಮಾಡಿಸಲು 17 ಸಾವಿರ ಲಂಚ ಪಡೆಯುತ್ತಿರುವಾಗ ಬುಡಾದ ದ್ವಿತೀಯ ದರ್ಜೆಯ ಗುಮಾಸ್ತ (ಎಸ್‌ಡಿಸಿ) ನಾಗರಾಜ್ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ.
ಬಳ್ಳಾರಿಯ ವೆಂಕಟೇಶ್ ಎನ್ನುವವರು ತಮ್ಮ ತಾಯಿ ಹೆಸರಿನಲ್ಲಿದ್ದ 20್ಢ30 ನಿವೇಶನವನ್ನು ತನ್ನ ಹೆಸರಿಗೆ ನೋಂದಣಿ ಮಾಡಿಸುವಂತೆ ಕೇಳಿದಾಗ, 50 ಸಾವಿರ ಲಂಚವನ್ನು ನಾಗರಾಜ್ ಕೇಳಿದ್ದಾರೆ. 30 ಸಾವಿರ ಕೊಡುವುದಾಗಿ ಹೇಳಿದಾಗ ಅದಕ್ಕೆ ಎಸ್‌ಡಿಸಿ ನಾಗರಾಜ್ ಒಪ್ಪಿದ್ದಾನೆ. ಕೆಲವು ದಿನಗಳ ಹಿಂದೆ 10 ಸಾವಿರವನ್ನು ವೆಂಕಟೇಶ್ ನೀಡಿದ್ದಾನೆ. ಈ ಕುರಿತಾಗಿ ವೆಂಕಟೇಶ್ ಲೋಕಾಯುಕ್ತರಿಗೆ ದೂರು ನೀಡಿದ್ದಾನೆ. ಗುರುವಾರ ಇನ್ನುಳಿದ 20 ಸಾವಿರದಲ್ಲಿ 17 ಸಾವಿರ ನೀಡುತ್ತಿರುವಾಗ ಲೋಕಾಯುಕ್ತ ಇನ್ಸ್‌ಪೆಕ್ಟರ್ ರಮೇಶ್ ಹಾಗೂ ಸಿಬ್ಬಂದಿ ದಾಳಿ ಮಾಡಿ ನಾಗರಾಜನನ್ನು ಬಂಧಿಸಿ, ಆತನಿಂದ ರು. 17 ಸಾವಿರ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಲಾಗಿದೆ.