ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಅಪಘಾತ: ಮಕ್ಕಳು ಸೇರಿ ನಾಲ್ವರ ಸಾವು

Srinivasa Murthy VN
Updated On : 24 Aug 2013, 10:21 am

ಬಳ್ಳಾರಿ: ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ವಾಹನಕ್ಕೆ ಸಾರಿಗೆ ಸಂಸ್ಥೆ ಬಸ್‌ವೊಂದು ಡಿಕ್ಕಿ ಹೊಡೆದ ಪರಿಣಾಮ ಮೂವರು ವಿದ್ಯಾರ್ಥಿಗಳು, ಡ್ರೈವರ್ ಸೇರಿದಂತೆ ನಾಲ್ವರು ಮೃತ ಪಟ್ಟಿದ್ದು, 12 ಮಕ್ಕಳು ಗಾಯಗೊಂಡ ಘಟನೆ ತಾಲೂಕಿನ ಕುಡಿತಿನಿ ಸಮೀಪದ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಶನಿವಾರ ನಡೆದಿದೆ. ಕುಡಿತಿನಿ  ಮದರ್ ತೆರೆಸಾ ಶಾಲೆಯ ಸುಲ್ತಾನ್‌ಪುರದ ವಿದ್ಯಾರ್ಥಿ ಶ್ಯಾಂಸುಂದರ್ (6), ಕುಡಿತಿನಿಯ ಶ್ರೀ ರಾಘವೇಂದ್ರ ಶಾಲೆಯ ನಿರಂಜನ (5), ಕಾವ್ಯ (6), ಮಾದಪುರ ಗ್ರಾಮದ ಮಲ್ಲಿಕಾರ್ಜುನ (32) ಮೃತಪಟ್ಟವರು. ಚಾಲಕ ಮಲ್ಲಿಕಾರ್ಜುನ ಹಾಗೂ ಯುಕೆಜಿ ವಿದ್ಯಾರ್ಥಿ ಶ್ಯಾಂಸುಂದರ್ ಸ್ಥಳದಲ್ಲಿಯೇ ಮೃತ ಪಟ್ಟರೆ, ನಿರಂಜನ ಆಸ್ಪತ್ರೆಗೆ ಹೋಗುತ್ತಿದ್ದ ಮಾರ್ಗದಲ್ಲಿ ಅಸುನೀಗಿದ್ದಾನೆ. ಇನ್ನು ಗಂಭೀರವಾಗಿ ಗಾಯಗೊಂಡಿದ್ದ ಕಾವ್ಯ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಗಾಯಗೊಂಡ 13 ಮಕ್ಕಳು ವಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ.

ಹಿರಿಯೂರು ಬಳಿ ನಾಲ್ವರ ಸಾವು
ಹಿರಿಯೂರು: ತಾಲೂಕಿನ ಹಿಂಡಸಕಟ್ಟೆ ಬಳಿ ಶನಿವಾರ ಟಾಟಾ ಏಸ್ ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಮೃತರನ್ನು ಚಳ್ಳಿಕಟ್ಟೆಯ ಗುರುಪ್ರಸಾದ್, ಹಿಂಡಸಕಟ್ಟೆಯ ರಘು, ಬಾಲಕೃಷ್ಣ ಎಂದು ಗುರುತಿಸಲಾಗಿದ್ದು ಮತ್ತೊಂದು ಮೃತ ದೇಹದ ಗುರುತು ತಿಳಿದುಬಂದಿಲ್ಲ. ಶನಿವಾರ ರಾತ್ರಿ 7.15ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಇವರೆಲ್ಲಾ ಸ್ಥಳೀಯ ಪ್ರಯಾಣಿಕರೆನ್ನಲಾಗಿದೆ. ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement