ಮನಸ್ಸು ಮುದಗೊಳಿಸುವ ಶಿಕ್ಷಣ ಅಗತ್ಯ: ಮಂಜುನಾಥ
ಕೂಡ್ಲಿಗಿ: ಬಾಲ್ಯಾವಸ್ಥೆಯಲ್ಲಿರುವ ಮುಗ್ದ ಮನಸ್ಸಿನ ವಿರ್ದ್ಯ್ಙಾಗಳನ್ನು ಮುದಗೊಳಿಸುವ ಶಿಕ್ಷಣ ಇಂದು ಅಗತ್ಯವಿದ್ದು, ಕಲಿಕೆಗೆ ಮನಸ್ಸನ್ನು ಕೇಂದ್ರಿಕರಿಸಲು ನಲಿ-ಕಲಿ ಯೋಜನೆ ಉಪಯುಕ್ತವಾಗಿದೆ ಎಂದು ಬಿಇಓ ಎಂ.ಆರ್. ಮಂಜುನಾಥ ಹಿಳಿದರು.
ಶನಿವಾರ ತಾಲೂಕಿನ ಗಾಣಗಟ್ಟೆ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ನಲಿ-ಕಲಿ ಶಿಕ್ಷಕರ ಸಮಾವೇಶ ಹಾಗೂ ಶಿಕ್ಷಕರ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಕ್ಕಳೊಂದಿಗೆ ಶಿಕ್ಷಕರು ನಲಿಯುತ್ತಾ ಶಿಕ್ಷಣ ನೀಡುವ ಯೋಜನೆ ಮಕ್ಕಳಿಗೆ ಬಹು ಪ್ರಿಯವಾಗಿದೆ. ಪಠ್ಯದೊಂದಿಗೆ ಆಟಿಕೆಗಳೊಂದಿಗೆ ಮಕ್ಕಳ ಮನಸ್ಸು ಅರಳುತ್ತಿದೆ ಎಂದರು.
ಕ್ಷೇತ್ರ ಶಿಕ್ಷಣ ಸಮಸ್ವಯಾಧಿಕಾರಿ ಮೈಲೇಶ್ ಬೇವೂರ್ ಪ್ರಾಸ್ತಾವಿಕ ಮಾತನಾಡಿ, ತಾಲೂಕಿನ ಎಲ್ಲ ಶಾಲೆಗಳಲ್ಲಿ ಬಹುತೇಕ ನಲಿ-ಕಲಿ ಶಿಕ್ಷಕರು ತಮ್ಮ ಸಾಮರ್ಥ್ಯ ಮೀರಿ ಪಠ್ಯ ಚಟುವಟಿಕೆಯಿಂದ ಮಕ್ಕಳ ಕಲಿಕೆಗೆ ಶ್ರಮಿಸುತ್ತಿದ್ದಾರೆ ಎಂದರು.
ನಲಿ-ಕಲಿ ಶಿಕ್ಷಕರು ಸಂವಾದ ನಡೆಸುವ ಮೂಲಕ ಶೈಕ್ಷಣಿಕ ಯೋಜನೆಯ ಸಾಧಕ, ಬಾಧಕಗಳನ್ನು ಚರ್ಚಿಸಲಾಯಿತು. ತಾಲೂಕಿನ ಎಲ್ಲ ಶಾಲೆಗಳಲ್ಲಿ ತಯಾರಿಸಿದ ಶೈಕ್ಷಣಿಕ ಪರಿಕರಗಳ ಪ್ರದರ್ಶನ ಎಲ್ಲರ ಗಮನಸೆಳೆಯಿತು. ಬಿಸಿಯೂಟ ಸಹಾಯಕ ನಿರ್ದೇಶಕ ಕುಮಾರ್, ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ್, ಬಿಇಓ ಕಚೇರಿ ವ್ಯವಸ್ಥಾಪಕ ವಿಶ್ವನಾಥ ಹಿರೇಮಠ, ಗುರುಸಿದ್ಧಯ್ಯ, ತಳವಾರ ಶರಣಪ್ಪ, ಶಾಂತಮ್ಮ, ಚಾಂದ್ಪೀರ್, ಎಂ.ಎಂ. ಚನ್ನಯ್ಯ, ಪಿ.ವಿ. ಕೊತ್ಲಪ್ಪ, ಜಿ.ಟಿ. ಸಿದ್ದೇಶ್ವರ, ಪಾಲಾಕ್ಷಿ, ಮಾನಾಚಾರಿ, ಕೆ. ಲಿಂಗಪ್ಪ, ಕೊಂಬಿಹಳ್ಳಿ ಸಿದ್ದಪ್ಪ, ಹಾಲೇಶ್, ಗುರುಪಾಲಯ್ಯ, ಜ್ಞಾನೇಶ್ವರಿ, ರೆಡ್ಡಿ ಮಹಾಂತೇಶ್, ಅಂಗಡಿ ಮಹಾಂತೇಶ್ ಸೇರಿದಂತೆ ಅನೇಕರು ಇದ್ದರು.
ಶಿಕ್ಷಕ ಸಿ. ಹನುಮಂತಪ್ಪ ಪ್ರಾರ್ಥಿಸಿದರು, ತಳವಾರ ಶರಣಪ್ಪ ಸ್ವಾಗತಿಸಿ, ವಂದಿಸಿದರು, ಶಿಕ್ಷಕ ಶಿವಾನಂದ ನಿರೂಪಿಸಿದರು.