ಬಳ್ಳಾರಿ

ಮತ ಮಾರಾಟ ಮಾಡಬೇಡಿ

ಬಳ್ಳಾರಿ: ಮತದಾನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ಬದ್ಧ, ಅತ್ಯಂತ ಮೌಲ್ಯಯುತ ಹಕ್ಕಾಗಿದ್ದು, ಇಂತಹ ಅಮೂಲ್ಯವಾದ ಮತವನ್ನು ಯಾರಿಗೂ ಮಾರಾಟ ಮಾಡಬೇಡಿ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎನ್. ಸೂರ್ಯನಾರಾಯಣ ರೆಡ್ಡಿ ಮತದಾರರಿಗೆ ಮನವಿ ಮಾಡಿದರು.
ಮಹಾನಗರ ಪಾಲಿಕೆ ವ್ಯಾಪ್ತಿಯ 22ನೇ ವಾರ್ಡಿನಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಿ, ಕಳೆದ ಬಾರಿ ಮತದಾನ ಮಾಡಿಸಿ ಗೆಲವು ಸಾಧಿಸಿದ ಸದಸ್ಯರು ಕೇವಲ ಅಭಿವೃದ್ಧಿಯ ಭರವಸೆಯನ್ನು ನೀಡಿ, ಮತದಾರರಿಗೆ ಮೋಸ ಮಾಡಿದ್ದಾರೆ. ಯಾವುದೇ ಆಸೆ ಆಮಿಷಗಳಿಗೆ ಒಳಗಾಗಬೇಡಿ, ತಾತ್ಕಾಲಿಕ ಆಸೆ ಆಮಿಷದಿಂದ ನಗರದ ಅಭಿವೃದ್ಧಿ ಆಗುವುದಿಲ್ಲ. ಸಾಮಾಜಿಕ, ಜನರಪರ ಕಾಳಜಿ ಇರುವ ಜೆಡಿಎಸ್ ಪಕ್ಷವನ್ನು ಬೆಂಬಲಿಸಬೇಕು. ಜೆಡಿಎಸ್ ಪಕ್ಷ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜಯಗಳಿಸಿ ಅಧಿಕಾರಕ್ಕೆ ಬರುವುದು ಖಚಿತವೆಂದು ಸೂರ್ಯನಾರಾಯಣ ರೆಡ್ಡಿ ಭವಿಷ್ಯ ನುಡಿದರು.
ಮತ ಯಾಚನೆ: ಪಕ್ಷದ ಯುವ ಮುಖಂಡ ನಾರಾ ಭರತ ರೆಡ್ಡಿ ನಗರದ ಹಲವೆಡೆ ಜೆಡಿಎಸ್ ಪರವಾಗಿ ಚುನಾವಣೆಯ ಪ್ರಚಾರ ನಡೆಸಿದರು. ನಗರದ 9, 11, 13 ಮತ್ತು 14ನೇ ವಾರ್ಡಿನಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಮತಯಾಚನೆ ಮಾಡಿದರು.
ಸೂರ್ಯನಾರಾಯಣ ರೆಡ್ಡಿ ನಗರದ ಕೌಲ್ ಬಜಾರ್, ದೊಡ್ಡ ಮಾರುಕಟ್ಟೆ, ಸಣ್ಣ ಮಾರುಕಟ್ಟೆ, ಬೆಂಗಳೂರು ರಸ್ತೆ, ಕಾಳಮ್ಮ ಬೀದಿಯಲ್ಲಿ ಸಂಚರಿಸಿ ನಗರದ ಅಭಿವೃದ್ಧಿಗಾಗಿ ಜನಪರ ಕಾರ್ಯಕ್ರಮ ರೂಪಿಸಿರುವ ಜೆಡಿಎಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿಕೊಂಡರು. ಜೆಡಿಎಸ್ ಪಕ್ಷದ ಅಭ್ಯರ್ಥಿಗಳಾದ 2ನೇ ವಾರ್ಡ್‌ನ ಪಿ. ಪೆಂಚಲಯ್ಯ, 6ನೇ ವಾರ್ಡ್ ಇಮಾಮ್‌ಬೀ, 11ನೇ ವಾರ್ಡ್‌ನ ಮಹಮ್ಮದ್ ಫಾರೂಖ್, 24ನೇ ವಾರ್ಡ್‌ನ ಸಜ್ಜಾದ್ ಅಲಿ, 25ನೇ ವಾರ್ಡ್‌ನ ಮೋತಿ ಪರ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಮುಂಡ್ರಿಗಿ ನಾಗರಾಜ, ನೆಕ್ಕಂಟ್ಟಿ ಶ್ರೀನಿವಾಸ್, ವದ್ದಟ್ಟಿ ಸತ್ಯಬಾಬು, ವಿಘ್ನೇಶ್, ಜಗದೀಶ್ವರ ರೆಡ್ಡಿ, ಮಲಾರೆಡ್ಡಿ ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯರ ಸಾಮೂಹಿಕೆ ಹತ್ಯೆಗೆ ಸಂಚು: ರೈಫಲ್ ಹಿಡಿದು ಅಮೆರಿಕದ ಹಿಂದೂ ದೇವಸ್ಥಾನಕ್ಕೆ ನುಗ್ಗಿದ್ದ ಶೂಟರ್; ಕೊನೆ ಕ್ಷಣದಲ್ಲಿ ಗನ್ ಜಾಮ್, ಆರೋಪಿ ಬಂಧನ..!

ಶೃಂಗೇರಿ ಮತ ಎಣಿಕೆ Video ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ..!

ಕೇರಳಂ: ಮಿನಿ ಕೂಪರ್ ಕಾರು ಅಪಘಾತದಲ್ಲಿ ಮೂವರ ಸಾವು, ತಡರಾತ್ರಿಯಲ್ಲಿ ಹಿಂದೂ ಯುವತಿಯರು ಹೊರಗೆ ಹೋಗಿದ್ಯಾಕೆ? ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ

ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಆದಾಯ ಹಂಚಿಕೆ: GST ಮಂಡಳಿಗೆ ರಾಜ್ಯ ಸರ್ಕಾರ ಪ್ರಸ್ತಾವನೆ

ಸ್ಟಿಂಗ್‌ ಆಪರೇಷನ್‌ ಬಗ್ಗೆ ಬೇರೆಯವರು ಮಾತನಾಡುವ ಆಗಿಲ್ಲ ಎನ್ನಲು ನೀವೇನು ಸರ್ವಾಧಿಕಾರಿಯೇ ಪ್ರಿಯಾಂಕ್‌ ಖರ್ಗೆ..?