ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಡಿಎಂಎಸ್ ಕಂಪನಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ

Srinivasa Murthy VN
Updated On : 11 Sept 2013, 11:26 am

ಬಳ್ಳಾರಿ: ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿರುವ ಡೆಕ್ಕನ್ ಮೈನಿಂಗ್ ಸಿಂಡಿಕೇಟ್ (ಡಿಎಂಎಸ್)ಗೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು 20 ಪುಟಗಳ ದೋಷಾರೋಪಣ ಪಟ್ಟಿಯನ್ನು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಆಗಸ್ಟ್‌ನಲ್ಲಿ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಏಳು ಜನ ಆರೋಪಿಗಳನ್ನು ಗುರುತಿಸಿದ್ದು ಈಗಾಗಲೇ ಅವರೆಲ್ಲರನ್ನೂ ಬಂಧಿಸಲಾಗಿದೆ. ಡಿಎಂಎಸ್ ಕಂಪನಿ ಮಾಲೀಕ ರಾಜೇಂದ್ರಕುಮಾರ್ ಜೈನ್, ಸಿಇಒ ರಿತೇಶಚಂದ್ರ ಜೈನ್, ನಿವೃತ್ತ ಐಎಎಸ್ ಅಧಿಕಾರಿ ಶಮೀಮ್ ಭಾನು, ಎನ್. ವಿಶ್ವನಾಥ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಎಸ್.ಪಿ. ರಾಜು, ಇನ್ಸ್‌ಪೆಕ್ಟರ್ ರಮಾನಾಥ ವೈ. ಹುಲ್ಲೂರು ಬಂಧಿತರು.
104 ಸಾಕ್ಷಿಗಳ ವಿಚಾರಣೆ ನಡೆಸಲಾಗಿದ್ದು, 86 ದಾಖಲೆಗಳನ್ನು ಸಂಗ್ರಹ ಮಾಡಲಾಗಿದೆ. ಡಿಎಂಎಸ್ ಕಂಪನಿ 30 ವರ್ಷಗಳಿಂದಲೂ ಗಣಿಗಾರಿಕೆ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ. ಮೋಸ, ಅದಿರು ಕಳ್ಳತನ, ಅತಿಕ್ರಮಣ, ಗಡಿಗಳ ಬದಲಾವಣೆ ಮತ್ತಿತರ ಆರೋಪಗಳು ಡಿಎಂಎಸ್ ಕಂಪನಿ ಮೇಲಿದೆ. ಸುಮಾರು 1232.39 ಕೋಟಿ ವ್ಯವಹಾರ ನಡೆದಿದೆ ಎಂದು ಚಾಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement