ನಂದಿನಿ ಹಾಲು ಎಟಿಎಂ ಪಾರ್ಲರ್ ಉದ್ಘಾಟನೆ
ಬಳ್ಳಾರಿ: ಕೆಎಂಎಫ್‌ನ ರಾಯಚೂರು, ಬಳ್ಳಾರಿ, ಕೊಪ್ಪಳ ಒಕ್ಕೂಟದ ವತಿಯಿಂದ ನಂದಿನಿ ಹಾಲಿನ ಎಟಿಎಂ (ಎನಿ ಟೈಮ್ ಮಿಲ್ಕ್) ಪಾರ್ಲರ್ ಶಾಖೆಯನ್ನು ಬಳ್ಳಾರಿಯ ಕೌಲ್‌ಬಜಾರ್‌ನಲ್ಲಿ ಕೆಎಂಎಫ್ ಅಧ್ಯಕ್ಷ ಜಿ. ಸೋಮಶೇಖರರೆಡ್ಡಿ ಉದ್ಘಾಟಿಸಿದರು. ನಂತರ ಮಾತನಾಡಿದ ಸೋಮಶೇಖರ ರೆಡ್ಡಿ ಅವರು, ಈ ಸೌಲಭ್ಯದಿಂದ ಎಲ್ಲ ನಂದಿನಿ ಹಾಲಿನ ಬಳಕೆದಾರರಿಗೆ ಉತ್ತಮ ಸೇವೆ ಸಲ್ಲಿಸಲು ಕೆಎಂಎಫ್ ಸಂಸ್ಥೆ ನಿರ್ಧರಿಸಿದೆ. ಹಾಲಿನ ಜೊತೆಗೆ ಮೊಸರು ಹಾಗೂ ಹಾಲಿನ ಉತ್ಪಾದನೆಗಳನ್ನು ಸಿಹಿ ಪದಾರ್ಥಗಳು ಹಾಗೂ ಹಾಲಿನ ಪೌಡರ್, ಗುಡ್‌ಲೈಫ್ ಸೇರಿದಂತೆ 24 ವಿವಿಧ ರೀತಿಯ ಉತ್ಪಾದನೆಗಳನ್ನು ಈ ಶಾಖೆಯಲ್ಲಿ ಮಾರಲಾಗುವುದು. ವಿತರಕರು ಮಾರುವ ದರದಲ್ಲಿಯೇ ಎಲ್ಲ ನಾಗರಿಕರಿಗೆ 24 ಗಂಟೆ ಈ ಸೌಲಭ್ಯ ಸಿಗುತ್ತದೆ ಎಂದು ತಿಳಿಸಿದರು. ನಗರದ ಕೆಎಂಎಫ್ ಆವರಣ, ಗಾಂಧಿನಗರ ಸಂಗನಕಲ್ಲು ರಸ್ತೆ, ಕೌಲ್‌ಬಜಾರ್‌ನಲ್ಲಿ ಮತ್ತು ಹೊಸ ಬಸ್ ನಿಲ್ದಾಣದಲ್ಲಿ ಎಟಿಎಂಗಳನ್ನು ತೆರೆಯಲಾಗಿದೆ. ನಾಗರಿಕರು ಈ ಸೌಲಭ್ಯವನ್ನು ಉಪಯೋಗಿಸಿ ಕೊಳ್ಳಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಕೆ.ಎಂ.ಎಫ್. ಮಾರ್ಕೆಟಿಂಗ್ ಅಧಿಕಾರಿಗಳು ಹಾಗೂ ಪಾಲಿಕೆ ಸದಸ್ಯರಾದ ಗೋವಿಂದರಾಜುಲು, ಶಂಕರಪ್ಪ, ಚಂದ್ರು ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು.