ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬದುಕಿಗೆ ಶಿಕ್ಷಣ ಮುಖ್ಯ: ಉಜ್ಜಿನಿಶ್ರೀ

Srinivasa Murthy VN
Updated On : 3 Feb 2014, 11:50 am

ಬಳ್ಳಾರಿ: ಹಸಿವನ್ನು ನೀಗಿಸಲು ಆಹಾರ ಎಷ್ಟು ಮುಖ್ಯವೊ ಸುಂದರ, ಸಾರ್ಥಕ ಬದುಕನ್ನು ಕಟ್ಟಿಕೊಳ್ಳಲು ಶಿಕ್ಷಣ ಬಹಳ ಮುಖ್ಯ ಎಂದು ಉಜ್ಜಿನಿ ಪೀಠದ ಸಿದ್ಧಲಿಂಗರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಕುಡಿತಿನಿ ಗ್ರಾಮದಲ್ಲಿ ಹರಗಿನಡೋಣಿ ಬಸವನಗೌಡ ಸಂಯುಕ್ತ ಪದವಿಪೂರ್ವ ಕಾಲೇಜಿನ ಸುವರ್ಣ ಮಹೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಆಹಾರದೊಡನೆ ಅಕ್ಷರ ಬೆರೆತಾಗ ಜೀವನಕ್ಕೆ ಸಾರ್ಥಕತೆ ಬರುತ್ತದೆ. ಅನ್ನದಿಂದ ಕ್ಷಣಿಕ ಸುಖ ದೊರೆತರೆ, ವಿದ್ಯೆಯಿಂದ ಶಾಶ್ವತ ಸುಖ ದೊರೆಯುವುದು ಎಂದರು.
ವೀವಿ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವೀರಶೈವ ವಿದ್ಯಾವರ್ಧಕ ಸಂಘದ ಆರಂಭಕ್ಕೆ ಕಾರಣಕರ್ತರಾದ ಉಜ್ಜಿನಿ ಪೀಠದ ಸಿದ್ಧಲಿಂಗ ಶಿವಾಚಾರ್ಯರ ಪುಣ್ಯಸ್ಮರಣೆಯನ್ನು ಭಕ್ತಿ, ಶ್ರದ್ಧೆಗಳಿಂದ ಆಚರಿಸಲಾಗುವುದು ಎಂದು ಘೋಷಿಸಿದರು.
ವಿಪ ಸದಸ್ಯ ಮೃತ್ಯುಂಜಯ ಜಿನಗಾ ಸುವರ್ಣ ಜ್ಯೋತಿ ಹೆಸರಿನ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಎಮ್ಮಿಗನೂರಿನ ಹಂಪಿ ಸಾವಿರ ದೇವರ ಮಠದ ವಾಮದೇವ ಶಿವಾಚಾರ್ಯರು, ಹರಗಿನಡೋಣಿಯ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮ ನಡೆಯಿತು. ವೀವಿ ಸಂಘದ ಉಪಾಧ್ಯಕ್ಷ ಕೆ.ಎಂ. ಮಹೇಶ್ವರಸ್ವಾಮಿ, ಸಹ ಕಾರ್ಯದರ್ಶಿ ಜೆ. ನೇಪಾಕ್ಷಪ್ಪ, ಆಡಳಿತ ಮಂಡಳಿ ಸದಸ್ಯ ಎಚ್.ಎಂ. ಪಂಪಾಪತಿ, ಎಂ.ಜಿ. ದೇವೇಂದ್ರಪ್ಪ, ಪಪೂ ಕಾಲೇಜು ಪ್ರಾಚಾರ್ಯ ಸಿ. ಮಲ್ಲಿಕಾರ್ಜುನ, ಮಾಜಿ ಸಂಸದ ಕೋಳೂರು ಬಸವನಗೌಡ, ಅಲ್ಲಂ ದೊಡ್ಡಪ್ಪ, ಜೆಎಸ್‌ಡಬ್ಲ್ಯೂ ಎಚ್‌ಆರ್ ವಿಭಾಗದ ಅನಿಲ್ ಸಿಂಗ್, ಗಾಪಂ ಅಧ್ಯಕ್ಷ ವೈ. ಹುಲುಗಪ್ಪ, ಸದಸ್ಯ ಹನುಮಣ್ಣ, ತಾಪಂ ಸದಸ್ಯೆ ಪಿ. ಹುಚ್ಚಮ್ಮ ಭಾಗವಹಿಸಿದ್ದರು.
ಎಚ್.ಎಂ. ಗುರುಸಿದ್ದಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ದೊಡ್ಡ ಬಸವಾರ್ಯ ಗವಾಯಿ ಪ್ರಾರ್ಥಿಸಿದರು. ಟಿ. ವಿರೂಪಾಕ್ಷಗೌಡ ಸ್ವಾಗತಿಸಿದರು, ಎಚ್.ಎಂ. ವೀರಭದ್ರ ಶರ್ಮ ನಿರೂಪಿಸಿದರು. ಆರ್. ಬಸವರಾಜ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement