ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸಂಭ್ರಮದ ವೆಂಕಟೇಶ್ವರ ರಥೋತ್ಸವ

Srinivasa Murthy VN
Updated On : 5 Feb 2014, 12:34 pm

ಹಗರಿಬೊಮ್ಮನಹಳ್ಳಿ: ರಾಮನಗರದ ಆರಾಧ್ಯ ದೈವ ಶ್ರೀ ವೆಂಕಟೇಶ್ವರ ಸ್ವಾಮಿಯ 57ನೇ ರಥೋತ್ಸವ ಮಂಗಳವಾರ ಸಂಜೆ ಅತ್ಯಂತ ಸಡಗರ, ಸಂಭ್ರಮದೊಂದಿಗೆ ನೇರವೇರಿತು. ಪಟ್ಟಣ ಸೇರಿದಂತೆ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ರಥಬೀದಿಯಲ್ಲಿ ರಾಜ ಗಂಭೀರವಾಗಿ ಸಾಗಿದ ವೆಂಕಟೇಶ್ವರ ರಥಕ್ಕೆ ಹೂ, ಹಣ್ಣು, ಉತ್ತುತ್ತಿ ತೂರಿ ತಮ್ಮ ಭಕ್ತಿ ಸಮರ್ಪಿಸಿದರು. ಸಂಜೆ ಐದು ಗಂಟೆಗೆ ಆರಂಭವಾದ ರಥ ಅರ್ಧ ಕಿ.ಮೀ. ದೂರದ ಪಾದಗಟ್ಟಿಗೆ ಮುಟ್ಟಿ ಮತ್ತೆ ಸ್ವಸ್ಥಾನಕ್ಕೆ ಮರಳಿತು. ರಾಮನಗರದ ಮಾರುತಿ ಗರಡಿ ಮನೆಯಿಂದ ನೂರಾರು ಪೈಲ್ವಾನರು ಮೆರವಣಿಗೆಯಲ್ಲಿ ಹೊತ್ತುತಂದ ಎರಡು ಬೃಹತ್ ಸನ್ನೆಗಳನ್ನು ರಥದ ಗಾಲಿಗೆ ಹಾಕುತ್ತಿದ್ದಂತೆಯೆ ಇತ್ತ ರಥದ ಮುಂದೆ ನೆರೆದಿದ್ದ ಭಕ್ತ ಸಮೂಹ ಏಕಕಾಲಕ್ಕೆ ಶ್ರೀ ವೆಂಕಟೇಶ್ವರ ಮಹಾರಾಜಕಿ ಜೈ, ವೆಂಕಟರಮಣ ಗೋವಿಂದ, ಗೋವಿಂದ ಎಂಬ ಘೋಷಣೆಯೊಂದಿಗೆ ರಥೋತ್ಸವ ನಡೆಯಿತು.
ಶಾಸಕ ಎಸ್. ಭೀಮಾನಾಯ್ಕ, ಗಂಗಾವತಿ ವಿಜಯಕುಮಾರ, ನಾಣ್ಯಾಪುರ ಕೃಷ್ಣಮೂರ್ತಿ,  ಜಿಪಂ ಸದಸ್ಯರಾದ ರೋಗಾಣಿ ಹುಲುಗಪ್ಪ, ಕರಿಬಸವನಗೌಡ್ರ ರತ್ನಮ್ಮ, ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಪೂರ್ಯನಾಯ್ಕ, ಸದಸ್ಯರಾದ ಉಪ್ಪಾರ ಬಾಲಪ್ಪ, ಬೆಣಕಲ್ ಪ್ರಕಾಶ, ಕಡ್ಲಬಾಳು ಗ್ರಾಪಂ ಅಧ್ಯಕ್ಷೆ ಬಡಲಡಿಕಿ ಮಂಜುಳಾ, ಚಿಂತ್ರಪಳ್ಳಿ ಗ್ರಾಪಂ ಅಧ್ಯಕ್ಷ ಎಂ. ಆನಂದ್, ಉಪಾಧ್ಯಕ್ಷೆ ಸಾವಿತ್ರಿಬಾಯಿ, ಸದಸ್ಯರಾದ ಡಿಶ್ ಮಂಜುನಾಥ, ಬಾರಿಕರ ನಿಂಗಪ್ಪ, ದಾದಮ್ಮನವರ ರಾಜಪ್ಪ, ಎಣ್ಣಿ ಬಾಷಾ, ಅಲಬೂರು ರಾಮಣ್ಣ ಸೇರಿದಂತೆ ಹಲವರು ರಥೋತ್ಸವ ಸಂದರ್ಭ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement