ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಮಾನವ ಧರ್ಮದಿಂದಲೇ ಶಾಂತಿ ಎಂದ ರೇಣುಕರು

Srinivasa Murthy VN
Updated On : 17 Mar 2014, 11:12 am

ಕಂಪ್ಲಿ: ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಜಗದ್ಗುರು ರೇಣುಕಾಚಾರ್ಯರು ಸಾರಿ ಹೇಳಿದ್ದಾರೆ ಎಂದು ಸಿಂಧನೂರು ತಾಲೂಕು ರೌಡಕುಂದಾ ಸಂಸ್ಥಾನ ಮಠದ ಮರಿಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಇಲ್ಲಿನ ಕಲ್ಯಾಣ ಚೌಕಿ ಮಠದಲ್ಲಿ ಹಮ್ಮಿಕೊಂಡಿದ್ದ ಶ್ರೀ ಜ. ರೇಣುಕಾಚಾರ್ಯರ ಜಯಂತ್ಯುತ್ಸವ, ಶ್ರೀಗುರು ದೊಡ್ಡಬಸವೇಶ್ವರ ಗುರುಕುಲ ಮಾದರಿ ವೈದಿಕ, ಜ್ಯೋತಿಷ್ಯ ಪಾಠಶಾಲೆಯ 3ನೇ ವಾರ್ಷಿಕೋತ್ಸವ, ಶ್ರೀದುರ್ಗಾ ಪರಮೇಶ್ವರಿ ನೂತನ ಪಂಚಲೋಹ ಮೂರ್ತಿ ಸ್ಥಾಪನೆ ಸಮಾರೋಪ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದರು. ವೀರಶೈವರು ಲಿಂಗ ಪೂಜೆ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಬೇಕು. ಹೆತ್ತವರು ಮಕ್ಕಳಲ್ಲಿ ಧರ್ಮ ಜಾಗೃತಿ ಮೂಡಿಸಬೇಕು ಎಂದರು.
ಕಂಪ್ಲಿ ಹೊಸಮಠ ಅಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ ಮಾತನಾಡಿ, ಧಾರ್ಮಿಕ ಕಾರ್ಯಗಳಿಂದ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ ಎಂದು ಹೇಳಿದರು. ಕಲ್ಯಾಣ ಚೌಕಿ ಮಠದ ಒಡೆಯರಾದ ವೇದಮೂರ್ತಿ ಕೆ.ಎಂ. ಚನ್ನಮಲ್ಲಯ್ಯಶಾಸ್ತ್ರಿ ಮಾತನಾಡಿ, ಸರ್ವರ ಸಹಕಾರದಿಂದ ನವ ಚಂಡಿಯಾಗ ಮುಂತಾದ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿದ್ದೇವೆ ಎಂದರು.
ಶ್ರೀಗುರು ದೊಡ್ಡ ಬಸವೇಶ್ವರ ಗುರುಕುಲ ಮಾದರಿ ವೈದಿಕ, ಜ್ಯೋತಿಷ್ಯ ಪಾಠ ಶಾಲೆ ಪ್ರಾಚಾರ್ಯ ಕೆ.ಎಂ.ಬಸವರಾಜ ಶಾಸ್ತ್ರಿಗಳು, ಸಾಂಗತ್ರಯ ಸಂಸ್ಕೃತ ಪಾಠ ಶಾಲೆ ಅಧ್ಯಕ್ಷ ಜವಳಿ ಚನ್ನಬಸಪ್ಪ, ಪೇಟೆ ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಡಿ. ವೀರಪ್ಪ, ಜೆ. ಹೊಸಳ್ಳಿ ಶ್ರೀಗುರು ಪಟ್ಟದ ಸ್ವಾಮಿ ಮಠದ ಶಂಭುಲಿಂಗ ದೇವರು, ಹೂಗಾರ ಸಮಾಜ ಅಧ್ಯಕ್ಷ ಹೂಗಾರ್ ರಮೇಶ್ ಉಪಸ್ಥಿತರಿದ್ದರು. ಜೆ.ಎಂ. ಸಿದ್ರಾಮಯ್ಯ ಶಾಸ್ತ್ರಿಗಳು ನಿರೂಪಿಸಿದರು. ವಿದ್ಯಾಶಂಕರ, ಎಸ್. ದೊಡ್ಡಬಸವರಾಜ, ಮಲ್ಲಿಕಾರ್ಜುನಗೌಡ, ಕೆ.ಎಂ. ರುದ್ರಮುನಿಸ್ವಾಮಿ, ವೀರಭದ್ರಪ್ಪ, ರಾಘು ಇದ್ದರು.
ಮೆರವಣಿಗೆ: ಕಾರ್ಯಕ್ರಮಕ್ಕೂ ಮೊದಲು ಕೋಟೆ ಪಂಪಾಪತಿ ದೇವಸ್ಥಾನದಿಂದ ಕಲ್ಯಾಣ ಚೌಕಿ ಮಠದವರೆಗೆ ಶ್ರೀ ಜಗದ್ಗುರು ರೇಣುಕಾರ್ಯರ ಹಾಗೂ ಶ್ರೀದುರ್ಗಾ ಪರಮೇಶ್ವರಿ ಪಂಚಲೋಹದ ಮೂರ್ತಿ ಮೆರವಣಿಗೆ ಮಾಡಲಾಯಿತು. ಗಂಗಾವತಿ ತಾಲೂಕು ಹೆಬ್ಬಾಳು ಬೋಳೋಡಿ ಬಸವೇಶ್ವರ ಸಂಸ್ಥಾನ ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಸುಮಂಗಲೆಯರು, ವಾದ್ಯ ಮೇಳ ಹಾಗೂ ಭಕ್ತರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement