ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬಿಜೆಪಿಗೆ ಹೆಚ್ಚು ಸ್ಥಾನ

Srinivasa Murthy VN
Updated On : 22 Mar 2014, 11:52 am

ಹೊಸಪೇಟೆ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅತ್ಯಧಿಕ ಸ್ಥಾನ ಗೆದ್ದು ಮೋದಿಯನ್ನು ಪ್ರಧಾನಮಂತ್ರಿಯನ್ನಾಗಿಸುವುದೇ ಬಿಜೆಪಿ ಕಾರ್ಯಕರ್ತರ ಮುಖ್ಯಗುರಿಎಂದು ಪಕ್ಷದ ಜಿಲ್ಲಾ ಉಪಾಧ್ಯಕ್ಷ ಪಂತರ್ ಜಯಂತ್ ಹೇಳಿದರು. ತಾಲೂಕಿನ ಗಾದಿಗನೂರಲ್ಲಿ ಮನೆ ಮನೆಗೆ ಬಿಜೆಪಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಈ ಬಾರಿ ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೇರಿಸುವುದು ಎಲ್ಲರ ಆಸೆ. ಬಿಜೆಪಿ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿಯನ್ನು ಕ್ಷೇತ್ರದಲ್ಲಿ ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚಾಯ್ ಪೆ ಚರ್ಚಾ ವೀಕ್ಷಣೆ
ಸಿರುಗುಪ್ಪ: ದೇಶದ ರೈತರೊಂದಿಗೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ನಡೆಸಿದ ವಿಡಿಯೋ ಕಾನ್ಫರೆನ್ಸ್‌ನ ಹಲವು ಝಲಕ್‌ಗಳ ಪಟ್ಟಣದ ನರಸಿಂಹಮೂರ್ತಿ ಆವರಣದಲ್ಲಿ ಗುರುವಾರ ಸಂಜೆ ಬಿಜೆಪಿ ನಗರ ಘಟಕ ಆಯೋಜಿಸಿದ್ದ ಚಾಯ್ ಪೆ ಚರ್ಚಾ ಕಾರ್ಯಕ್ರಮಕ್ಕೆ ಮಾಜಿ ಶಾಸಕ ಎಂ.ಎಸ್. ಸೋಮಲಿಂಗಪ್ಪ ಚಾಲನೆ ನೀಡಿದರು. ಎಚ್.ಎಂ. ಶಾಂತಮೂರ್ತಿಸ್ವಾಮಿ, ಕುಂಟ್ನಾಳ್ ಮಲ್ಲಿಕಾರ್ಜುನ, ಕೊಡ್ಲೆ ಮಲ್ಲಿಕಾರ್ಜುನ, ಅಶೋಕ್ ಜೈನ್, ಪಿ. ಮಾರೆಪ್ಪ,  ವೈ. ವೆಂಕಟೇಶ ಇತರರಿದ್ದರು.

ಮತದಾನ ಜಾಗೃತಿ...
ಸಿರುಗುಪ್ಪ: ಚುನಾವಣಾ ಆಯೋಗ ಹಾಗೂ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಮಕ್ಕಳ ಮೂಲಕ ಪಾಲಕರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ವಿದ್ಯಾರ್ಥಿಗಳಿಗಾಗಿ ರಂಗೋಲಿ ಹಾಗೂ ಚಿತ್ರಕಲಾ ಸ್ಪರ್ಧೆಯನ್ನು ಪಟ್ಟಣದಲ್ಲಿ ಗುರುವಾರ ಏರ್ಪಡಿಸಲಾಗಿತ್ತು. ವಿದ್ಯಾರ್ಥಿನಿ ಪುಶ್ವಿತಾ, ಪವಿತ್ರಾ, ನಾಗವೇಣಿ ಮತದಾನದ ಕುರಿತು ರಂಗೋಲಿ ಬಿಡಿಸಿ ಎಲ್ಲರ ಗಮನ ಸೆಳೆದರು. ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಫಿಲೋಮಿನಾ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement