ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಸರ್ಕಾರದ ನೀತಿಗೆ ಖಂಡನೆ

Srinivasa Murthy VN
Updated On : 22 Mar 2014, 11:52 am

ಕನ್ನಡಪ್ರಭ ವಾರ್ತೆ, ಸಿರುಗುಪ್ಪ, ಮಾ. 21
ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿಯ ರಾಜ್ಯ ಸರ್ಕಾರದ ಪಡಿತರ ವಿತರಕರ ಬಗ್ಗೆ ಸರ್ಕಾರದ ವಿರೋಧಿ ನೀತಿ ಖಂಡಿಸಿ ಸರ್ಕಾರಿ ಪಡಿತರ ವಿತರಕರ ಸಂಘದ ತಾಲೂಕು ಸಮಿತಿ ವತಿಯಿಂದ ಮೌನ ಪ್ರತಿಭಟನೆ ನಡೆಸಲಾಯಿತು.
ಸಂಘದ ತಾಲೂಕು ಅಧ್ಯಕ್ಷ ಕೊಡ್ಲೆ ಮಲ್ಲಿಕಾರ್ಜುನ ಮಾತನಾಡಿ, ರಾಜ್ಯ ಸರ್ಕಾರ ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಪಡಿತರ ವಿತರಕರ ವಿರೋಧಿ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ ಮಾ. 11ರಂದು ರಾಜ್ಯ ಸಮಿತಿ ಬೆಂಗಳೂರಿನಲ್ಲಿ ಏಪ್ರಿಲ್ ತಿಂಗಳ ಪಡಿತರ ಎತ್ತುವಳಿಯನ್ನು ನಿಲ್ಲಿಸಲು ತೀರ್ಮಾನ ಕೈಗೊಂಡಿದೆ. ನ್ಯಾಯಬೆಲೆ ಅಂಗಡಿ ಮಾಲೀಕರು ಮತ್ತು ಸೀಮೆಎಣ್ಣೆ ವಿತರಣೆ ಅಂಗಡಿ ಮಾಲೀಕರು ಬೆಳಗ್ಗೆ 8ರಿಂದ ರಾತ್ರಿ 8 ಗಂಟೆ ವರೆಗೆ ಅಂಗಡಿಗಳನ್ನು ತೆರೆದು ಪಡಿತರ ವಿತರಿಸಬೇಕು. ಸೀಮೆಎಣ್ಣೆ ದಾಸ್ತನು ಮಾಡಲು ಪ್ರತ್ಯೇಕ ಗೋದಾಮು ಹೊಂದಿರಬೇಕು. ಬಿಪಿಎಲ್ ಕಾರ್ಡ್‌ದಾರರು ಶೇ. 60ರಷ್ಟು ಷೇರುದಾರರಾಗಿದ್ದಲ್ಲಿ ಸಹಕಾರ ಸಂಘ ಸಂಸ್ಥೆಗಳ ಪ್ರಾಧಿಕಾರ ನವೀಕರಿಸುವಂತಿಲ್ಲ. ಗ್ರಾಮ ಪಂಚಾಯಿತಿ ಕೇಂದ್ರಕ್ಕೆ ಒಂದರಂತೆ ಸೀಮೆಎಣ್ಣೆ ವಿತರಣಾ ಕೇಂದ್ರವನ್ನು ತೆರೆಯಲು ತೀರ್ಮಾನಿಸಿರುವುದು ಅವೈಜ್ಞಾನಿಕ ಎಂದು ಖಂಡಿಸಿದರು.
ಪ್ರತಿಭಟನಾಕಾರರು ಮೌನ ಮೆರವಣಿಗೆಯ ಮೂಲಕ ತೆರಳಿ ತಹಸೀಲ್ದಾರ್ ವೆಂಕನಗೌಡ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಎಚ್. ಹುಸೇನಪ್ಪ, ಕಾರ್ಯದರ್ಶಿ ಪಿ. ಸಿದ್ಧಪ್ಪ, ಟಿ. ಶಂಕರಗೌಡ, ಎನ್. ರಾಮನಗೌಡ, ಡಿ. ಶೇಕಪ್ಪ, ಎಚ್.ಜೆ. ನಾಗನಗೌಡ, ಕುರುಮನಗೌಡ, ಎನ್. ಚನ್ನಬಸವನಗೌಡ, ವಿ. ಮೂಕಣ್ಣ, ಬಿ. ಲಿಂಗಣ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement