ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಎನ್ನೆಸ್ಸೆಸ್ ನಾಯಕತ್ವ ಗುಣ ಬೆಳೆಯಲು ವೇದಿಕೆ

Srinivasa Murthy VN
Updated On : 25 Mar 2014, 10:46 am

ಸಿರುಗುಪ್ಪ: ವಿದ್ಯಾರ್ಥಿಗಳಲ್ಲಿರುವ ಸೇವಾ ಮನೋಭಾವನೆ, ನಾಯಕತ್ವ ಗುಣಗಳು ಹೊರಹೊಮ್ಮಲು ರಾಷ್ಟ್ರೀಯ ಸೇವಾ ಯೋಜನೆ ಸೂಕ್ತ ವೇದಿಕೆಯಾಗಿದೆ ಎಂದು ವಿಕೆಜೆ ಪಿಯು ಕಾಲೇಜಿನ ಪ್ರಾಚಾರ್ಯ ಎಚ್. ಕನಕದಾಸ ಅಭಿಪ್ರಾಯಪಟ್ಟರು.
ತಾಲೂಕಿನ ಹಳೆಕೋಟೆ ಗ್ರಾಮದ ಸಿದ್ದಪ್ಪ ನಗರದಲ್ಲಿ ಗುರುವಾರ ಆಯೋಜಿಸಿದ್ದ ಬಿ. ಹನುಮಂತಮ್ಮ ಮೆಮೋರಿಯಲ್ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಎನ್ನೆಸ್ಸೆಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವಕರು ಸಮಾಜ ಸೇವೆಯಿಂದ ಏಳಿಗೆ ಕಾಣಬಹದು. ಗ್ರಾಮಗಳ ಉದ್ಧಾರವೆ ದೇಶದ ಉದ್ಧಾರ ಎನ್ನುವುದು ಮಹಾತ್ಮ ಗಾಂಧಿಯವರ ಕನಸಾಗಿತ್ತು. ಯುವ ಜನತೆ ಗ್ರಾಮೀಣ ಜನರ ಜೀವನಮಟ್ಟ, ಪರಿಸರ ಕಂಡು ಅವರಲ್ಲಿ ಪರಿವರ್ತನೆ ಮೂಡಿಸಲು ಮುಂದೆ ಬರಬೇಕೆಂದು ಯುವಕರಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ವಿಶ್ವನಾಥ, ಪ್ರಾಚಾರ್ಯ ಎಚ್.ಕೆ. ಮಲ್ಲಿಕಾರ್ಜುನ ಶೆಟ್ಟಿ, ಡಾ.ಬಿ. ವೀರೇಶ್, ಜಿ. ಬಸವನಗೌಡ, ದಾಕ್ಷಾಯಿಣಿ, ಹಾಜಿಬಾಬು, ಗಿರಿಯಪ್ಪ, ರುದ್ರಪ್ಪ, ಫಯಾಜ್, ರಮೇಶ್ ರಾಥೋಡ್, ಮಂಜುನಾಥ, ಚಂದ್ರು, ಪವನ್, ಸಂತೋಷ, ಶ್ರೀನಿವಾಸಮೂರ್ತಿ ಇನ್ನಿತರರು ಉಪಸ್ಥಿತರಿದ್ದರು.

ಬಳ್ಳಾರಿ: ಹುತಾತ್ಮರ ದಿನಾಚರಣೆ
ಬಳ್ಳಾರಿ: ಅಖಿಲ ಭಾರತ ಯುವಜನ ಫೆಡರೇಷನ್ ಜಿಲ್ಲಾ ಘಟಕದಿಂದ ಭಾನುವಾರ ನಗರದಲ್ಲಿ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಯಿತು.
ಎಐವೈಎಫ್ ಜಿಲ್ಲಾ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಹಿದ್ ಭಗತ್‌ಸಿಂಗ್‌ರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಗೌರವ ಸಲ್ಲಿಸಲಾಯಿತು. ಎಐವೈಎಫ್ ಜಿಲ್ಲಾಧ್ಯಕ್ಷ ಸಂಗನಕಲ್ಲು ಕಟ್ಟೆಬಸಪ್ಪ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ವೀರಮರಣ ಹೊಂದಿದ ಭಗತ್‌ಸಿಂಗ್, ರಾಜಗುರು, ಸುಖದೇವ್ ಅವರಂತಹ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಇಂದಿನ ಯುವಜನತೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಐವೈಎಫ್ ತಾಲೂಕು ಅಧ್ಯಕ್ಷ ಕೊಳಗಲ್ಲು ಎರ್ರಿಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಬ್ಯಾಲಚಿಂತೆ ಎಸ್. ಪರಶುರಾಮ, ಕೊಳಗಲ್ಲು ಮಲ್ಲ, ಸೋಮಸಮುದ್ರ ಗುರುಸ್ವಾಮಿ, ಪಾನಿಪುರಿ ಪ್ರೇಮ್, ಕಗ್ಗಲ್ ಬೈಲಾ ಹನುಮ, ಅಸುಂಡಿ ಮೋಹನ್, ಹೊನ್ನೂರಸ್ವಾಮಿ, ಮಲ್ಲಿ, ಅಶೋಕ್, ಓಬಳೇಶ್ ಸಂಘಟನೆಯ ಪದಾಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement