ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕಪ್ಪುಚುಕ್ಕೆಯಿಲ್ಲದೆ ರಾಜಕೀಯ

Srinivasa Murthy VN
Updated On : 27 Mar 2014, 10:36 am

ಸಂಡೂರು: ಶಾಸಕ, ಸಚಿವನಾಗಿ, ಪ್ರಾದೇಶಿಕ ಪಕ್ಷವೊಂದರ ಸಂಸ್ಥಾಪಕನಾಗಿ ಎರಡು ದಶಕಗಳಿಂದ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ರಾಜಕೀಯ ಮತ್ತು ಸಾರ್ವಜನಿಕ ಸೇವೆ ಮಾಡುತ್ತಾ ಬಂದಿದ್ದೇನೆ ಎಂದು ಬಿಜೆಪಿ ಲೋಕಸಭಾ ಅಭ್ಯರ್ಥಿ ಬಿ. ಶ್ರೀರಾಮುಲು ಹೇಳಿದರು.
ಪಟ್ಟಣದ ಪಕ್ಷದ ಕಚೇರಿ ಆವರಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಯುಪಿಎ ಸರ್ಕಾರದ ಭ್ರಷ್ಟಾಚಾರ, ಜನವಿರೋಧಿ ನೀತಿಗಳಿಂದ ದೇಶದಲ್ಲಿ ಬಡತನ ತಾಂಡವವಾಡುತ್ತಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಿದೆ. ಒಂದೆಡೆ, ಚೀನಾ, ಪಾಕಿಸ್ತಾನಗಳಿಂದ ಗಡಿ ಸಮಸ್ಯೆ ಉಲ್ಬಣಿಸಿದೆ. ಸೈನಿಕರ ಪ್ರಾಣಕ್ಕೆ ಬೆಲೆ ಇಲ್ಲದಂತಾಗಿದೆ. ನರೇಂದ್ರ ಮೋದಿ ಮುಂದಿನ ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ನೇಮಿರಾಜ ನಾಯ್ಕ್ ಮಾತನಾಡಿ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಗ್ಗದ ಯೋಜನೆಗಳ ಮೂಲಕ ಜನರಿಗೆ ಮಂಕುಬೂದಿ ಎರಚುತ್ತಾ ಮತ್ತೊಂದೆಡೆ ತಮ್ಮ ಹಿಂಬಾಲಕರ ಜೇಬು ತುಂಬಿಸುವ ಕೆಲಸದಲ್ಲಿ ಮುಳುಗಿದೆ ಎಂದರು. ಬಿಎಸ್ಸಾರ್‌ನಿಂದ ಪುರಸಭಾ ಸದಸ್ಯರಾಗಿ ಆಯ್ಕೆಯಾಗಿದ್ದ ವಿಜಯರಾಣಿ, ಕಾವೇರಿ, ಗೌಳೇರ್ ಕುಮಾರಸ್ವಾಮಿ, ಪ್ರಶಾಂತ್, ಗೋವಿಂದಪ್ಪ, ಮೂರ್ತಿ, ರವಿ, ಪಿ. ಕುಮಾರಸ್ವಾಮಿ, ತಿಪ್ಪೇಸ್ವಾಮಿ ಇತರರು ಬಿಜೆಪಿ ಸೇರಿದರು. ಪಕ್ಷದ ತಾಲೂಕು ಕಾರ್ಯದರ್ಶಿ ಗೆಣತಿಕಟ್ಟೆ ಬಾಲಸುಬ್ರಹ್ಮಣಿ ಪ್ರಾಸ್ತಾವಿಕ ಮಾತನಾಡಿದರು.
ವಿಪ ಸದಸ್ಯ ಮೃತ್ಯುಂಜಯ ಜಿನಗಾ, ಸಂಸದರಾದ ಜೆ. ಶಾಂತಾ, ಸಣ್ಣ ಫಕ್ಕೀರಪ್ಪ, ಅನಂತ ಪದ್ಮನಾಭಸ್ವಾಮಿ, ಗೋನಾಳ್ ರಾಜಶೇಖರಗೌಡ, ಪಂತರ್ ಜಯಂತ್, ಅನಿಲ್ ನಾಯ್ಡು, ಮುರಾರಿಗೌಡ, ಎಫ್. ಕುಮಾರನಾಯ್ಕ, ಶ್ರೀಕಾಂತ್ ಗೊಂದಿ, ಕೆಂಚಪ್ಪ, ದೇವೇಂದ್ರನಾಯಕ, ಬಳ್ಳಿಕಟ್ಟೆ ಪಾರ್ವತಮ್ಮ, ಬಿ. ಕುಮಾರಸ್ವಾಮಿ, ಅಂಬರೀಷ್, ಷಣ್ಮುಖಪ್ಪ, ಷೆಣ್ಮುಕ, ಸ್ವಾಮಿಹಳ್ಳಿ ಯರಿಸ್ವಾಮಿರೆಡ್ಡಿ, ಬಿ. ರವಿಪ್ರಕಾಶ್, ವಿಶ್ವನಾಥರೆಡ್ಡಿ, ಕೃಷ್ಣಾನಾಯ್ಕ, ನವಾಬ್ ಸಾಬ್, ವಿರೂಪಾಕ್ಷಿ ಇದ್ದರು.

ಲೋಕಾಯುಕ್ತ ವರದಿಯಲ್ಲಿ ನನ್ನ ಹೆಸರು ಬಂದ ಕಾರಣಕ್ಕೆ ರಾಜಿನಾಮೆ ನೀಡಿ ಉಪಚುನಾವಣೆಯಲ್ಲಿ ಗೆದ್ದು ಬಂದೆ ಎಂದ ಅವರು, ನಾನು ಮಖ ಮುಚ್ಚಿಕೊಂಡು ಓಡಾಡುವವನಲ್ಲ ರಾಜ್ಯದ ಜನತೆಗೆ ನಾನು ಎಂಥವನು ಎಂಬುದು ಗೊತ್ತು. ಸ್ವಾಭಿಮಾನಿ ಮತ್ತು ಸದೃಢ ಭಾರತ ಕಟ್ಟಲು ಮೋದಿ ಪ್ರದಾನಿ ಮಾಡುವ ಸಲುವಾಗಿ ಮರಳಿ ಬಿಜೆಪಿ ಸೇರಿ ಮತಯಾಚನೆಗೆ ಬಂದಿದ್ದೇನೆ. ಸಂಸದನಾಗಿ ಆಯ್ಕೆ ಮಾಡಿದರೆ ಪ್ರಾಮಾಣಿಕ ಸೇವೆ ಮೂಲಕ ಮತದಾರರ ಋಣ ತೀರಿಸುವೆ.
- ಬಿ. ಶ್ರೀರಾಮುಲು,
ಲೋಕಸಭಾ ಬಿಜೆಪಿ ಅಭ್ಯರ್ಥಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement