ಬೀದರ್

ಮಾ.9ರಂದು ಸುರಭಿ ಅವಾರ್ಡ್-2012

ಬೀದರ್: ಬೀದರ್‌ನ ಸುರಭಿ ಎನ್‌ಜಿಒ ವೆಲ್‌ಫರ್ ಆರ್ಗನೈಸೇಷನ್ ವತಿಯಿಂದ ಪ್ರತಿಷ್ಠಿತ ಬೀದರ್ ಸುರಭಿ ಅವಾರ್ಡ್-2012ರ ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್ 9ರಂದು ಹಮ್ಮಿಕೊಳ್ಳಲಾಗಿದೆ ಎಂದು ಆಯ್ಕೆ ಸಮಿತಿಯ ಅಧ್ಯಕ್ಷ ಪ್ರೊ.ಎಸ್‌ಜಿ ಪಾಟೀಲ್ ತಿಳಿಸಿದರು.
ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುವುದು ಸುರಭಿ ಅವಾರ್ಡ್ ಮೂಲ ಉದ್ದೇಶವಾಗಿದೆ. ಈಗಾಗಲೇ ನಾಲ್ಕು ವರ್ಷ ಸುರಭಿ ಅವಾರ್ಡ್ ನೀಡಲಾಗಿದೆ. ಕಳೆದ ಎರಡು ವರ್ಷಗಳಿಂದ ಬರಗಾಲ ಹಾಗೂ ಮತ್ತಿತರರ ಕಾರಣದಿಂದ ಪ್ರಶಸ್ತಿ ನೀಡಲಾಗಿಲ್ಲ. ಆದರೆ ಈ ಕಾರ್ಯಕ್ರಮದೊಂದಿಗೆ ಪ್ರತಿ ವರ್ಷ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ ಎಂದರು.
ಉತ್ತೇಜನದ ಉದ್ದೇಶ: ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲು 10-12 ಜನರ ಸಭೆ ಕರೆದು ಚರ್ಚಿಸಿ ವಿವಿಧ ಕ್ಷೇತ್ರದ ಸುಮಾರು 25 ಜನ ಸಾಧಕರಿಗೆ ಪ್ರಶಸ್ತಿ ನೀಡುವುದರೊಂದಿಗೆ ದಿ. ಪ್ರಯಾಗಬಾಯಿ ಏರೋಳಕರ್ ಅವರ ಸ್ಮರಣಾರ್ಥ 'ಪ್ರಯಾಗ ದಿ ವೈಸ್ ಆಫ್ ಬೀದರ್‌' (ಸುರ್ ಸಂಗ್ರಾಮ) ವಿಶೇಷ ಪ್ರಶಸ್ತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಇದನ್ನು ಸ್ಥಳೀಯ ಉದಯೋನ್ಮುಖ ಗಾಯಕರಿಗೆ ಉತ್ತೇಜನ ನೀಡುವುದೇ ಇದರ ಉದ್ದೇಶವಾಗಿದೆ. ಇದರಲ್ಲಿ ವಿಜೇತರಾದವರಿಗೆ ರು. 15 ಸಾವಿರ ಪ್ರಥಮ, ರು. 10 ಸಾವಿರ ದ್ವಿತೀಯ ಹಾಗೂ ವೈಲ್ಡ್ ಕಾರ್ಡ್ ಎಂಟ್ರಿ ಪಡೆದವರಿಗೆ ರು. 5 ಸಾವಿರ ಬಹುಮಾನ ನೀಡಿ ಪುರಸ್ಕರಿಸಲಾಗುವುದು.
ಗಾಯಕರ ಆಯ್ಕೆ ಅಂದೇ ಮುಖ್ಯ ವೇದಿಕೆಯಲ್ಲಿ ನಡೆಯಲಿದ್ದು, ಇದಕ್ಕಾಗಿ 5 ಜನ ತಿರ್ಪುಗಾರರನ್ನು ನೇಮಿಸಲಾಗಿದೆ.  ರಾಜೇಂದ್ರಸಿಂಗ್ ಪವಾರ, ಶಿವಕುಮಾರ ಪಾಂಚಾಳ, ರಾಮಲು ಗಾದಗಿ, ಕವಿತಾ ಮಠಪತಿ ಹಾಗೂ ರವಿ ಮೋಜಸ್ ತೀರ್ಪುಗಾರರ ಸಮಿತಿಯಲ್ಲಿದ್ದಾರೆ ಎಂದರು.
ವಿವಿಧ ಪ್ರಶಸ್ತಿ: ಸುರಭಿ ಅವಾರ್ಡ್‌ನ್ನು ವರ್ಷದ ವ್ಯಕ್ತಿ, ಪ್ರಗತಿ ಪರ ರೈತ, ವ್ಯಾಪಾರ, ಉದ್ಯಮಿ, ವೈದ್ಯ, ಎಂಜಿನಿಯರ್, ಕಲಾವಿದರು, ಮಾಧ್ಯಮ, ಶಿಕ್ಷಣ, ಯಶಸ್ವಿ ಎನ್‌ಜಿಒ, ಎಸ್‌ಎಚ್‌ಜಿ, ಶಿಕ್ಷಣ ಸಂಸ್ಥೆ, ಕ್ರೀಡೆ, ಅಧಿಕಾರಿ, ಮಹಿಳಾ ಪ್ರತಿನಿಧಿ, ಅನಿವಾಸಿ ಬೀದರ್‌ನ ಯಶಸ್ವಿ ವ್ಯಕ್ತಿ, ಸಾಹಿತ್ಯ, ದೈಹಿಕ ವಿಕಲಚೇತನ, ಜಾನಪದ, ವಿಶೇಷ ಪ್ರತಿಭೆ, ಯುವ ಪ್ರತಿಭೆ, ಬಾಲ ಪ್ರತಿಭೆ ಸೇರಿದಂತೆ ವಿವಿಧ ಪ್ರಶಸ್ತಿ ನೀಡಲಾಗುವುದು.
ವಿವಿಧ ಕ್ಷೇತ್ರಗಳಲ್ಲಿನ ಸಾಧಕರಿಗೆ ಸುರಭಿ ಅವಾರ್ಡ್-2012 ಸಂಬಂಧ ಅರ್ಜಿ ಆಹ್ವಾನಿಸಲಾಗಿದ್ದು, ಫೆ.15ರ ಒಳಗಾಗಿ ಅರ್ಜಿ ಸಲ್ಲಿಸಬಹುದು. ಅರ್ಹರ ಆಯ್ಕೆ ಪಾರದರ್ಶಕವಾಗಿ ನಡೆಸಲಾಗುವುದು. ಇದರಲ್ಲಿ ಹಿರಿಯರೊಬ್ಬರಿಗೆ ಜೀವನ ಶ್ರೇಷ್ಠ ಸಾಧನೆ ಪ್ರಶಸ್ತಿ ನೀಡಲಾಗುವುದು. ಅಲ್ಲದೇ 371 ಕಲಂ ಜಾರಿ ಹಿನ್ನಲೆಯಲ್ಲಿ ಪ್ರಮುಖ ಹೋರಾಟಗಾರರೊಬ್ಬರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲು ನಿರ್ಧರಿಸಲಾಗಿದೆ.
ಪ್ರಶಸ್ತಿಗಾಗಿ ಅರ್ಜಿಗಳನ್ನು ಆಯ್ಕೆ ಸಮಿತಿ ಅಧ್ಯಕ್ಷರು, ಬೀದರ್ ಸುರಭಿ ಅವಾರ್ಡ್-2012, ಸುರಭಿ ಸಿಟಿ ಕಮ್ಯೂನಿಕೇಷನ್ ಸಿಸ್ಟಮ್, ಮಿನಾಕ್ಷಿ ಕಾಂಪ್ಲೆಕ್ಸ್ ಕಾರ್ಗಿಲ್ ಬಜಾರ್, ಉದಗೀರ ರಸ್ತೆ, ಬೀದರ್ ವಿಳಾಸಕ್ಕೆ ಅರ್ಜಿಗಳನ್ನು ಸ್ವತಃ ಅಥವಾ ಬೇರೆಯವರಿಂದ ಅನುಮೋದಿಸಿ ಸಲ್ಲಿಸಬಹುದು ಎಂದು ತಿಳಿಸಿದರು. ಆಯ್ಕೆ ಸಮಿತಿಯ ಗೌರವಾಧ್ಯಕ್ಷ ಪ್ರೊ. ಬಿಆರ್ ಕೊಂಡಾ, ಸದಸ್ಯರಾದ ಶೇಖ ಮುಶ್ತಾಖ ಅಲಿ, ಸದಾನಂದ ಜೋಶಿ ಹಾಗೂ ಅನುಪಮಾ ಏರೋಳಕರ್ ಇದ್ದರು.
-
ಮೊರಾರ್ಜಿ ವಸತಿ ಶಾಲೆಗೆ ಅರ್ಜಿ
ಬೀದರ್‌ನ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಗೆ 2013- 14ನೇ ಶೈಕ್ಷಣಿಕ ಸಾಲಿನ 6ನೇ ತರಗತಿಗೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಅರ್ಜಿಗಳು ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣಾಧಿಕಾರಿಗಳು, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಹಾಗೂ ಆಯಾ ತಾಲೂಕಿನ ತಾಲೂಕು ವಿಸ್ತರ್ಣಾಧಿಕಾರಿ, ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಗಳಲ್ಲಿ ಉಚಿತವಾಗಿ ಪಡೆದು 2 ಭಾವಚಿತ್ರದೊಂದಿಗೆ ಫೆ.25ರೊಳಗಾಗಿ ಆಯಾ ತಾಲೂಕಿನ ಕಲ್ಯಾಣಾಧಿಕಾರಿಗಳಿಗೆ ಸಲ್ಲಿಸಿ ಪರೀಕ್ಷಾ ಪ್ರವೇಶ ಪತ್ರ ಪಡೆಯಬಹುದು. ಮಾ.24ರ ಬೆ.11ರಿಂದ ಮ.1.30ರ ವರೆಗೆ ತಾಲೂಕು ಕೇಂದ್ರಗಳಲ್ಲಿ ಪ್ರವೇಶ ಪರೀಕ್ಷೆಗಳು ನಡೆಯುತ್ತವೆ ಎಂದು ಪ್ರಾಚಾರ್ಯರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CJP ಪ್ರತಿಭಟನೆಯಲ್ಲಿ ಭಾಗಿ: ನಟ Imran Khanಗೆ ಮುಂಬೈ ಪೊಲೀಸರಿಂದ 'Leave India' ನೋಟಿಸ್, ಅ.28ರೊಳಗೆ ಭಾರತ ತೊರೆಯುವಂತೆ ಗಡುವು..!

ಜಿಯೋ - ಸ್ಟಾರ್‌ಲಿಂಕ್‌, ಸ್ಟಾರ್ ವಾರ್ ಹಿಂದಿನ ಆರ್ಥಿಕತೆ! (ಹಣಕ್ಲಾಸು)

ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಂಡರೆ ಮೀಸಲಾತಿ ಸೌಲಭ್ಯ ಸಿಗಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

ಭಾರತೀಯರ ಸಾಮೂಹಿಕೆ ಹತ್ಯೆಗೆ ಸಂಚು: ರೈಫಲ್ ಹಿಡಿದು ಅಮೆರಿಕದ ಹಿಂದೂ ದೇವಸ್ಥಾನಕ್ಕೆ ನುಗ್ಗಿದ್ದ ಶೂಟರ್; ಕೊನೆ ಕ್ಷಣದಲ್ಲಿ ಗನ್ ಜಾಮ್, ಆರೋಪಿ ಬಂಧನ..!

ಶೃಂಗೇರಿ ಮತ ಎಣಿಕೆ Video ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ..!