ಬೀದರ್

ಕೆಬಿಜೆಎನ್ನೆಲ್ ಅಧಿಕಾರಿಗಳಿಗೆ ರೈತರಿಂದ ಘೇರಾವ್

ಯಾದಗಿರಿ: ಶಹಾಪುರ ತಾಲೂಕಿನ ಕಾಲುವೆ ಕೊನೆಭಾಗದ ಗ್ರಾಮಗಳಾದ ವಡಗೇರಾ, ಉಳ್ಳೆಸುಗೂರ, ಕುರುಕುಂದಾ, ಕಾಡಂಗೇರಾ, ತೇಕರಾಳ ಇನ್ನೂ ಮುಂತಾದ ಗ್ರಾಮಗಳ ನೂರಾರು ರೈತರು ವಡಗೇರಾ ಕೆಬಿಜೆಎನ್ನೆಲ್ ಅಧಿಕಾರಿಗಳ ವಾಹನಕ್ಕೆ ಘೇರಾವ್ ಹಾಕಿ ಪ್ರತಿಭಟಿಸಿದರು.
ಈಗಾಗಲೇ ಕಾಲುವೆಗೆ ನೀರು ಹರಿಸಲು ಕೆಬಿಜೆಎನ್ನೆಲ್ ಸಜ್ಜಾಗಿದೆ. ಉಪಕಾಲುವೆಗಳು ಜಾಲಿಗಿಡಗಳಿಂದ, ಹೂಳಿನಿಂದ ಆವೃತವಾಗಿದ್ದು, ಸಂಪೂರ್ಣ ಹಾಳಾಗಿವೆ. ಆದರೂ ದುರಸ್ತಿ ಕಾಮಗಾರಿ ಕೈಗೊಂಡಿಲ್ಲ ಎಂದು ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತರು ಕಂಗೆಟ್ಟಿದ್ದಾರೆ. ಕಾಲುವೆಗಳ ನೀರು ಸದ್ಬಳಕೆ ಮಾಡಿಕೊಳ್ಳಬೇಕೆಂದರೆ ಉಪಕಾಲುವೆಗಳು ಸಂಪೂರ್ಣ ಹಾಳಾಗಿವೆ. ಈಗಾಗಲೇ ಸರ್ಕಾರ 500 ಕೋಟಿ ಖರ್ಚು ಮಾಡಿ ಕಾಲುವೆ ನವೀಕರಣಗೊಳಿಸಲಾಗಿದೆ. ಕಾಲುವೆಗೆ ಸರಾಗವಾಗಿ ನೀರು ಹರಿಯುವ ಭರವಸೆಯನ್ನು ರೈತರು ಹೊಂದಿದ್ದಾರೆ. ಆದರೆ ಉಪ ಕಾಲುವೆಗಳ ದುರಸ್ತಿ ಮಾಡದ ಕಾರಣ ನೀರು ಪೋಲಾಗುವ ಸಾಧ್ಯತೆಯಿದೆ ಎಂದು ಕಿಡಿಕಾರಿದರು.
ಅಧಿಕಾರಿಗಳಿಗೆ ತರಾಟೆ: ಬಿಡಿ 21ರ ಕುರುಕುಂದ 5 ಕಿಮೀ ಕಾಲುವೆ ಮತ್ತು ರಸ್ತೆ, ಡಿ21ರ ವ್ಯಾಪ್ತಿಯ ತೇಕರಾಳ, ಉಳ್ಳೆಸುಗೂರ, ವಡಗೇರಾ, ಕಂದಳ್ಳಿ, ಹಾಲಗೇರಾ ಇನ್ನೂ ಅನೇಕ ಕಾಲುವೆ ಕೊನೆಭಾಗದ ಉಪ ಕಾಲುವೆಗಳು ಜಾಲಿಗಿಡಗಳಿಂದ ಆವೃತಗೊಂಡಿವೆ. ಕಾಲುವೆಗಳಲ್ಲಿ ಮಣ್ಣು ಹೂಳು ತುಂಬಿ ಹಾಳಾಗಿವೆ ಎಂದು ರೈತರಾದ ಶರಣಬಸಪ್ಪ ಬಿರಾದಾರ್, ಗುರಣ್ಣಗೌಡ ವನಸಾನಿ, ಮರಿಲಿಂಗಪ್ಪ, ಜೈರೆಡ್ಡಿ ಸೇರಿದಂತೆ ರೈತರು ಕೆಬಿಜೆಎನ್ನೆಲ್ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.

--

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ED ದಾಳಿ ಅಂತ್ಯ: 3 ಕೋಟಿ ರೂ ನಗದು, ಅಪಾರ ಪ್ರಮಾಣದ ಚಿನ್ನ, ಬೆಳ್ಳಿ ಪತ್ತೆ; ಆ ಹಣ ನಮ್ಮದೇ ಎಂದ ಸತೀಶ್ ಜಾರಕಿಹೊಳಿ

Asia Cup 2026: ಮೊದಲ ಸೆಮಿಸ್‌ನಲ್ಲಿ ಬಾಂಗ್ಲಾವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ ಭಾರತ!

'ವಂದೇ ಮಾತರಂ' ಕಾನೂನಾಗಿದೆ; ತಾಕತ್ತಿದ್ದರೆ ಅಧಿಕಾರಕ್ಕೆ ಬಂದು ಬದಲಾಯಿಸಿ, ನನ್ನ ಅಭ್ಯಂತರವಿಲ್ಲ: ಕಾಂಗ್ರೆಸ್‌ಗೆ ಒಮರ್ ಅಬ್ದುಲ್ಲಾ ತಿರುಗೇಟು!

ಹಿಂಸೆ ಫ್ಯಾಷನ್ ಆಗಿಬಿಟ್ಟಿದೆ: ಮಣಿಪುರಿ ಸಂಗೀತಗಾರನ ಹತ್ಯೆಗೆ ನ್ಯಾಯ ಒದಗಿಸುವುದಾಗಿ ರಾಹುಲ್ ಗಾಂಧಿ ಪ್ರತಿಜ್ಞೆ! Video

ಇದನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ: ಕಿರಿಯ CJP ಕಾರ್ಯಕರ್ತೆಗೆ ಕಿರುಕುಳ, ಬೆದರಿಕೆ ಹಾಕಿದ್ದಕ್ಕೆ ಸುಪ್ರೀಂ ಕೋರ್ಟ್ ಗರಂ!