ಅಕ್ಷರ ಜಾತ್ರೆಗೆ ಸಜ್ಜುಗೊಳ್ಳುತ್ತಿರುವ ಬೃಹತ್ ವೇದಿಕೆ
ಬಿಜಾಪುರ: ನಗರದಲ್ಲಿ ನಡೆಯುವ ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನದ ದಿನ ಹತ್ತಿರವಾಗುತ್ತಿದಂತೆ ನಗರದಲ್ಲಿನ ಸೈನಿಕ ಶಾಲೆಯ ಆವರಣದಲ್ಲಿ ಪೆಂಡಾಲ್ ಹಾಗೂ ಮುಖ್ಯ ವೇದಿಕೆಯ ಸಿದ್ಧತೆ ಕಾಮಗಾರಿ ಭರದಿಂದ ಸಾಗಿದೆ.
ಕಳೆದೊಂದು ವಾರದಿಂದ ಪೆಂಡಾಲ್ ನಿರ್ಮಾಣಕ್ಕೆ ಹಗಲಿರುಳು 120 ಕಾರ್ಮಿಕರು ಶ್ರಮಿಸುತ್ತಿದ್ದು, ಸುಮಾರು 40 ಎಕರೆ ವಿಸ್ತೀರ್ಣದಲ್ಲಿ ಬೃಹತ್ ವೇದಿಕೆ ಸಜ್ಜುಗೊಳ್ಳುತ್ತಿದೆ. ಈಗಾಗಲೇ ಪೆಂಡಾಲ್ಗೆ ಪತ್ರಾಸ ಹಾಕುವ ಕೆಲಸ ನಡೆದಿದೆ. ಮುಖ್ಯ ವೇದಿಕೆಯ ಪೆಂಡಾಲ್ಗೆ 9,000 ಹಾಗೂ ಮಾಧ್ಯಮ ಕೋಣೆಗೆ 500 ಪತ್ರಾಸ ಹಾಕಲಾಗುತ್ತಿದೆ.
300್ಢ600 ಅಡಿ ವಿಶಾಲವಾದ ಪೆಂಡಾಲ್ ನಿರ್ಮಿಸಲಾಗುತ್ತಿದ್ದು, 50್ಢ100 ಅಡಿ ಜಾಗೆಯಲ್ಲಿ ಮುಖ್ಯ ವೇದಿಕೆ ಸಿದ್ಧಗೊಳ್ಳುತ್ತಿದೆ. ವೇದಿಕೆಯ ಪೆಂಡಾಲ್ಗೆ ವಾಟರ್ ಪ್ರೂಫ್ ಹೊದಿಕೆ ಹಾಕಲಾಗುತ್ತಿದೆ. ಈ ಪೆಂಡಾಲ್ನಲ್ಲಿ 15,000 ಜನರು ಏಕ ಕಾಲಕ್ಕೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗುತ್ತಿದೆ. ಮುಖ್ಯ ವೇದಿಕೆಯಲ್ಲಿ 200 ಮಂದಿ ಕುಳಿತುಕೊಳ್ಳುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಮುಖ್ಯ ವೇದಿಕೆಯ ಪಕ್ಕದಲ್ಲಿಯೇ 50್ಢ100 ಅಡಿ ಮಾಧ್ಯಮದವರಿಗೆ ವಾಟರ್ ಪ್ರೂಫ್ ಹವಾನಿಯಂತ್ರಿತ ಕೋಣೆಗಳನ್ನು ಸಜ್ಜುಗೊಳಿಸಲಾಗುತ್ತಿದೆ. 100್ಢ500 ಅಡಿ ಜಾಗೆಯಲ್ಲಿ ಸಾರ್ವಜನಿಕರಿಗೆ ಊಟದ ಪೆಂಡಾಲ್ ನಿರ್ಮಿಸಲಾಗುತ್ತಿದೆ. 140್ಢ200 ಅಡಿ ಅಡುಗೆ ಕೋಣೆಯ ಪೆಂಡಾಲ್ ನಿರ್ಮಿಸಲಾಗುತ್ತಿದೆ. ಈ ಪೆಂಡಾಲ್ನಲ್ಲಿ 80 ಬಫೆ ಕೌಂಟರ್ ತೆರೆಯಲಾಗುವುದು. ಇನ್ನೊಂದು ಬದಿಯಲ್ಲಿ 10್ಢ10 ಅಳತೆಯ 600 ಪುಸ್ತಕ ಮಳಿಗೆ, 200 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ. ಬಿಜಾಪುರದ ಪ್ರಸಾದ ಗಾಯಿ ರುಕ್ಮಾಂಗದ ಮಂಟಪದವರು 39 ಲಕ್ಷಕ್ಕೆ ಪೆಂಡಾಲ್ ಗುತ್ತಿಗೆ ಪಡೆದಿದ್ದಾರೆ. ಈ ಹಿಂದೆ ನಡೆದ 78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 200್ಢ400 ಅಡಿ ಮಾತ್ರ ಮುಖ್ಯ ವೇದಿಕೆ ನಿರ್ಮಿಸಲಾಗಿತ್ತು. ಆದರೆ ಇದೇ ಪ್ರಪ್ರಥಮ ಬಾರಿಗೆ ಬಿಜಾಪುರದ ಸಮ್ಮೇಳನದಲ್ಲಿ 300್ಢ600 ಅಡಿ ಜಾಗೆಯಲ್ಲಿ ಬೃಹತ್ ವೇದಿಕೆ ನಿರ್ಮಿಸುವ ಕಾರ್ಯ ನಡೆದಿದೆ.
ಸೌಂಡ್ ಸಿಸ್ಟಮ್ಗೂ ತಯಾರಿ: ವೇದಿಕೆಯ ಕಾಮಗಾರಿ ಮುಗಿಯುತ್ತಿದ್ದಂತೆಯೇ ಬಿಜಾಪುರದ ಮಕಾನದಾರ ಸೌಂಡ್ ಆ್ಯಂಡ್ ಲೈಟ್ ಸಿಸ್ಟಮ್ನ 30 ಕಾರ್ಮಿಕರು ಹಗಲಿರುಳು ಕೆಲಸದಲ್ಲಿ ನಿರತರಾಗಿದ್ದಾರೆ. ಮುಖ್ಯ ವೇದಿಕೆಯಲ್ಲಿ 150 ಪಾರ್ ಲೈಟ್ ಈ ಪೈಕಿ 80 ಸಾವಿರ ಸಾದಾ ಪಾರ್ ಲೈಟ್, ಎಲ್ಇಡಿ 70 ಪಾರ್ ಲೈಟ್ಗಳನ್ನು ಅಳವಡಿಸಲಾಗುತ್ತಿದೆ. ಮುಖ್ಯ ವೇದಿಕೆಯಲ್ಲಿ 8 ಶಾರ್ಪ್ ಲೈಟ್, 4 ಮೂವಿಂಗ್ ಲೈಟ್, 50,000 ವ್ಯಾಟ್ ಲೈನೇರಿ ಸೌಂಡ್ ಸಿಸ್ಟಮ್ ಅಳವಡಿಸುವ ಕೆಲಸ ನಡೆದಿದೆ. 12್ಢ16 ಅಡಿ ಒಟ್ಟು 8 ಎಲ್ಸಿಡಿ ಸ್ಕ್ರೀನ್ ಅಳವಡಿಸಲಾಗುತ್ತಿದೆ. ಹೊರ ಬದಿಯಲ್ಲಿ ಸಾರ್ವಜನಿಕರಿಗೆ ವೀಕ್ಷಿಸಲು ಅನುಕೂಲವಾಗುವಂತೆ 4 ಎಲ್ಸಿಡಿ ಸ್ಕ್ರೀನ್ ಹಾಗೂ ಊಟ, ಪುಸ್ತಕ, ವಾಣಿಜ್ಯ ಮಳಿಗೆಯಲ್ಲಿ 4 ಎಲ್ಡಿ ಸ್ಕ್ರೀನ್ ಅಳವಡಿಸಲಾಗುವುದು. ಕಾರ್ಯಕ್ರಮದ ವೀಕ್ಷಣೆಗೆ ಜನರ ಅನುಕೂಲಕ್ಕಾಗಿ ಈ ವ್ಯವಸ್ಥೆ ಮಾಡಲಾಗುತ್ತಿದೆ. 40್ಢ2 ಇಂಚಿನ 10 ಪ್ಲಾಜಾ ಟಿವಿಗಳನ್ನು ಅಳವಡಿಸಲಾಗುತ್ತಿದೆ. ಎಲ್ಲ ಆವರಣದ ಬೆಳಕಿಗಾಗಿ 500 ಮೆಟಲ್ ಲೈಟ್, ಪೆಂಡಾಲ್ದಲ್ಲಿ ಫ್ಯಾನ್ ಅಳವಡಿಸಲಾಗುತ್ತಿದೆ. 125 ಕೆವಿ 8 ಜನರೇಟರ್ಗಳನ್ನು ಅಳವಡಿಸಲಾಗುತ್ತಿದೆ. ಪುಸ್ತಕ, ವಾಣಿಜ್ಯ ಮಳಿಗೆಗೆ 1,750 ಟ್ಯೂಬ್ಲೈಟ್ ಅಳವಡಿಸಲಾಗುತ್ತಿದೆ.
-ರುದ್ರಪ್ಪ ಆಸಂಗಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.