ತಾಲೂಕು ಕಸಾಪದಿಂದ 10 ಸಾವಿರ ರೊಟ್ಟಿ
ಬಿಜಾಪುರ: ನಗರದಲ್ಲಿ ನಡೆಯುತ್ತಿರುವ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಿಜಾಪುರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಬುಧವಾರ 10,000 ರೊಟ್ಟಿಗಳನ್ನು ದೇಣಿಗೆ ನೀಡಲಾಯಿತು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶ್ರೀಶೈಲ ಕರಡಿ ಅವರ ನೇತೃತ್ವದಲ್ಲಿ ಜಿಲ್ಲಾ ಕ.ಸಾ.ಪ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಅವರಿಗೆ ರೊಟ್ಟಿಗಳನ್ನು ಸಲ್ಲಿಸಲಾಯಿತು.
ಸಾಹಿತಿಗಳಾದ ಮಹಾಂತ ಗುಲಗಂಜಿ, ಬಸವರಾಜ ಮೇಲುಪ್ಪರಗಿಮಠ, ಪ್ರಮುಖರಾದ ಮಲ್ಲಿಕಾರ್ಜುನ ಅವಟಿ, ಪರುಶುರಾಮ ಕುಂಬಾರ, ಫಯಾಜ ಕಲಾದಗಿ, ಹೇಮಲತಾ ವಸ್ತ್ರದ ಚಂದ್ರಶೇಖರ ಮುಳವಾಡ, ಸುರೇಶ ವಿಜಾಪುರ, ಅನಂತ ದೇಸಾಯಿ, ಮೌನೇಶ ಬಡಿಗೇರ, ಉಮೇಶ ಕಲಗೊಂಡ ಆನಂದ ಕುಲಕರ್ಣಿ, ಬಸವರಾಜ ನಾವಿ, ಸೋಮಶೇಖರ ಜತ್ತಿ, ಸಾಯಬಣ್ಣ ಮಡಿವಾಳರ, ಶಾಂತಯ್ಯಾ ಹಿರೇಮಠ, ವಸಂತರಾವ ಕೊರ್ತಿ ಮತ್ತು ಆರ್.ಆರ್.ಹಂಚಿನಾಳ ಮುಂತಾದವರು ಉಪಸ್ಥಿತರಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.