ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಿಜಾಪುರ

ಹೊಸ ತಾಂತ್ರಿಕತೆಯ ಸುಸಜ್ಜಿತ ಮಾಧ್ಯಮ ಕೇಂದ್ರ

Lingaraj Badiger
Updated On : 7 Feb 2013, 12:33 pm

ಬಿಜಾಪುರ: ನಗರದಲ್ಲಿ ಫೆ. 9,10 ಹಾಗೂ 11ರಂದು ನಡೆಯಲಿರುವ ಅಖಿಲ ಭಾರತ 79ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಾಡಿನ ವಿವಿಧೆಡೆಯಿಂದ ಸುಮಾರು 500ಕ್ಕೂ ಹೆಚ್ಚು ಮಾಧ್ಯಮ ಪ್ರತಿನಿಧಿಗಳು ಆಗಮಿಸುವ ನಿರೀಕ್ಷೆ ಇದ್ದು, ಮುಖ್ಯ ವೇದಿಕೆಯ ಪಕ್ಕದಲ್ಲಿಯೇ ಸುಸಜ್ಜಿತ, ಅತ್ಯಾಧುನಿಕ ತಂತ್ರಜ್ಞಾನದ ಮಾಧ್ಯಮ ಕೇಂದ್ರ ತಲೆ ಎತ್ತಲಿದೆ. ಇಲ್ಲಿ ಅತ್ಯಾಧುನಿಕ ತಾಂತ್ರಿಕತೆಯ ಕಂಪ್ಯೂಟರ್, ಇಂಟರನೆಟ್, ವೈಫೈ ಸೌಲಭ್ಯ, ಪ್ರಿಂಟರ್, ಫ್ಯಾಕ್ಸ್ ಸೇರಿದಂತೆ ಎಲ್ಲ ವ್ಯವಸ್ಥೆ ಕಲ್ಪಿಸಲಾಗಿದೆ.
ಸಮ್ಮೇಳನದ ವೇದಿಕೆ ಪಕ್ಕದಲ್ಲಿ 50್ಢ100 ಅಡಿ ಮಾಧ್ಯಮ ಕೊಠಡಿ ನಿರ್ಮಿಸಲಾಗುತ್ತದೆ. ಈ ಮಾಧ್ಯಮ ಕೊಠಡಿಯಲ್ಲಿ 60 ಕಂಪ್ಯೂಟರ್ ಇಡಲಾಗುವುದು. ಮಾಧ್ಯಮ ಪ್ರತಿನಿಧಿಗಳು ತ್ವರಿತವಾಗಿ ಸುದ್ದಿ ಕಳುಹಿಸಲು ವೈಫೈ ಬ್ರಾಡ್‌ಬಾಂಡ್ ಇಂಟರ್‌ನೆಟ್ ಸೌಲಭ್ಯ ಕಲ್ಪಿಸಲಾಗುತ್ತಿದೆ. ಮಾಧ್ಯಮ ಕೊಠಡಿಯಲ್ಲಿಯೇ ಎಲ್‌ಸಿಡಿ ಪ್ರೊಜೆಕ್ಟರ್ ವ್ಯವಸ್ಥೆ ಮಾಡಲಾಗುತ್ತಿದೆ. ಮುಖ್ಯ ವೇದಿಕೆಯ ಕಾರ್ಯಕ್ರಮಗಳನ್ನು ನೇರವಾಗಿ ಮಾಧ್ಯಮ ಪ್ರತಿನಿಧಿಗಳು ಮಾಧ್ಯಮ ಕೊಠಡಿಯಲ್ಲಿಯೇ ವೀಕ್ಷಿಸಬಹುದಾಗಿದೆ. ಮಾಧ್ಯಮ ಕೊಠಡಿಯಲ್ಲಿ 1 ಝರಾಕ್ಸ್ ಕೇಂದ್ರ, 5 ಪ್ರಿಂಟರ್, 1 ಫ್ಯಾಕ್ಸ್ ಸೌಕರ್ಯ ಕಲ್ಪಿಸಲಾಗುವುದು.
ಮಾಧ್ಯಮ ಕೊಠಡಿಯಲ್ಲಿ ಹವಾನಿಯಂತ್ರಿತ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಅಗತ್ಯಕ್ಕಾಗಿ ಏರ್‌ಕೂಲರ್, ಫ್ಯಾನ್‌ಗಳನ್ನು ಅಳವಡಿಸಲಾಗುವುದು. ಮಾಧ್ಯಮ ಕೊಠಡಿಯ ಒಂದು ಬದಿಯಲ್ಲಿಯೇ ಪತ್ರಿಕಾಗೋಷ್ಠಿ ನಡೆಸಲು 10್ಢ10 ಅಡಿ ವೇದಿಕೆಯೊಂದನ್ನು ಸಿದ್ಧಪಡಿಸಲಾಗುತ್ತಿದೆ.
ಮಾಧ್ಯಮ ಕೊಠಡಿಯಿಂದ ನೇರವಾಗಿ ಮುಖ್ಯವೇದಿಕೆಗೆ ತೆರಳಲು ಪತ್ರಕರ್ತರಿಗೆ ಪ್ರತ್ಯೇಕ ಮಾರ್ಗ (ಜನಜಂಗುಳಿ ಇಲ್ಲದಂತೆ) ಮಾಡಲಾಗುತ್ತದೆ. ಮಾಧ್ಯಮ ಕೊಠಡಿ ಪಕ್ಕದಲ್ಲಿಯೇ ಪತ್ರಕರ್ತರಿಗಾಗಿಯೇ ಪ್ರತ್ಯೇಕವಾಗಿ ಊಟದ ಕೊಠಡಿ ನಿರ್ಮಿಸಲಾಗುತ್ತಿದೆ.
ಎರಡು ಖಾಸಗಿ ಚಾನಲ್‌ಗಳು ಸಮ್ಮೇಳನದ ನೇರ ಪ್ರಸಾರಕ್ಕೆ ಮುಂದೆ ಬಂದಿವೆ. ಕಾರ್ಯಕ್ರಮದ ಸುದ್ದಿಯನ್ನು ರೆಕಾರ್ಡ್ ಮಾಡಿ ಅದೇ ದಿನ ಆಕಾಶವಾಣಿ, ದೂರದರ್ಶನ ಕೇಂದ್ರಗಳಿಗೆ ಕಳುಹಿಸಿ ಅಂದೇ ಪ್ರಸಾರ ಮಾಡುವ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ಬಾಲಾಜಿ ಕಂಪನಿ ಎನ್‌ಐಸಿ ವೆಬ್‌ಸೈಟ್ ತೆರೆದಿದೆ. ಇದು ಸಮ್ಮೇಳನದ ಮಾಹಿತಿಯನ್ನು ಜಗತ್ತಿನಾದ್ಯಂತ ಬಿತ್ತರಿಸಲಿದೆ.
ವೇದಿಕೆಯ ಮುಂಭಾಗದಲ್ಲಿ ಮಾಧ್ಯಮದವರಿಗಾಗಿ 500 ಆಸನ ವ್ಯವಸ್ಥೆ ಮಾಡಲಾಗುತ್ತಿದೆ. ಸೈನಿಕ ಶಾಲೆಯ ಎರಡನೆ ಗೇಟ್‌ನಿಂದ ಮಾಧ್ಯಮದವರಿಗೆ ಪ್ರವೇಶ ನೀಡಲಾಗುವುದು. ಮಾಧ್ಯಮದವರ ವಾಹನ ಪ್ರವೇಶಕ್ಕೂ ಇಲ್ಲಿ ಅವಕಾಶವಿದೆ. ಪತ್ರಕರ್ತರ 200 ವಾಹನಗಳಿಗೆ ಪಾಸ್ ನೀಡಲಾಗುವುದು. 500 ಪತ್ರಕರ್ತರಿಗೆ ಸಮ್ಮೇಳನದ ಪ್ರವೇಶ ಪಾಸ್ ನೀಡಲಾಗುವುದು. ಗೇಟ್‌ನಲ್ಲಿ ಇರುವ ಪೊಲೀಸರಿಗೆ ಪಾಸ್ ತೋರಿಸಿ ಪತ್ರಕರ್ತರು ಸಮ್ಮೇಳನಕ್ಕೆ ತೆರಳಬೇಕು.  
ಮಾಧ್ಯಮ ಪ್ರತಿನಿಧಿಗಳಿಗೆ ನಗರದ ಗೋದಾವರಿ, ಇಂಟರ್‌ನ್ಯಾಶನಲ್ ನವರತ್ನ, ಪರ್ಲ್, ಗೋಲ್ಡನ್ ಹೈಟ್ಸ್ ಲಾಡ್ಜ್‌ಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.
ಬೆಂಗಳೂರು, ಬೆಳಗಾವಿ, ಕಾರವಾರ, ಬಳ್ಳಾರಿ, ಧಾರವಾಡ ಬಾಗಲಕೋಟೆಗಳಿಂದ ವಾರ್ತಾ ಇಲಾಖೆ ಹಿರಿಯ ಅಧಿಕಾರಿಗಳು ಸಮ್ಮೇಳನದ ಉಸ್ತುವಾರಿಗೆ ಬರಲಿದ್ದಾರೆ ಎಂದು ಸಮ್ಮೇಳನದ ಪ್ರಚಾರ ಸಮಿತಿ ಅಧ್ಯಕ್ಷ, ಜಿಲ್ಲಾ ವಾರ್ತಾಧಿಕಾರಿ ಡಾ.ಬಿ.ಆರ್. ರಂಗನಾಥ ಕುಳಗಟ್ಟೆ ಮನವಿ ಮಾಡಿಕೊಂಡಿದ್ದಾರೆ.
-ರುದ್ರಪ್ಪ ಆಸಂಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments