ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಿಜಾಪುರ

ಎಸ್ಪಿ ಜತೆ ಜಟಾಪಟಿ

Parashurama
Updated On : 10 Feb 2013, 12:13 pm

ಬಿಜಾಪುರ:  ಸಾಹಿತ್ಯ ಸಮ್ಮೇಳನ ಅಂದ ಮೇಲೆ ಸದ್ದು, ಗದ್ದಲ, ಜಗಳ, ವಿವಾದ ಇದ್ದಿದ್ದೆ. ಆದರೆ ಕೇಂದ್ರ ಸಾಹಿತ್ಯ ಪರಿಷತ್ ಹಾಲಿ ಅಧ್ಯಕ್ಷ ಮತ್ತು ಮಾಜಿ ಅಧ್ಯಕ್ಷರು ಸೇರಿ, ಎಸ್ಪಿ ಜತೆ ವೇದಿಕೆಯಲ್ಲೇ ಉದ್ಘಾಟನಾ ಕಾರ್ಯಕ್ರಮಕ್ಕಿಂತ ಕೆಲವೇ ಕ್ಷಣಗಳ ಮುಂಚೆ, ಸಮ್ಮೇಳನಾಧ್ಯಕ್ಷ ಕೊ.ಚೆನ್ನಬಸಪ್ಪ ಅವರ ಉಪಸ್ಥಿತಿಯಲ್ಲೇ ವಾಗ್ವಾದ ನಡೆದಿರುವುದಕ್ಕೆ ಸಾವಿರಾರು ಜನ ಸಾಕ್ಷಿಯಾದರು.
  ಸಮ್ನೇಳನದಲ್ಲಿ ಭಾಗವಹಿಸಿದ್ದ ಅನೇಕ ಜಿಲ್ಲಾಧ್ಯಕ್ಷರಿಗೆ ಬ್ಯಾಚ್ ನೀಡಿರಲಿಲ್ಲ. ಜಿಲ್ಲಾಧ್ಯಕ್ಷರು ಎಂದು ಹೇಳಿದವರನ್ನೆಲ್ಲ ವೇದಿಕೆಗೆ ಬಿಡಿ ಎಂದು ಮೈಕ್‌ನಲ್ಲೇ ಪೊಲೀಸರಿಗೆ ಸೂಚಿಸಲಾಗಿತ್ತು. ಆದರೆ ಯಾರು ಬೇಕಾದರೂ ಜಿಲ್ಲಾಧ್ಯಕ್ಷ ಎಂದು ಹೇಳಿಕೊಂಡು ಆಗಮಿಸುವ ಅಪಾಯವಿತ್ತು.
  ಆದ್ದರಿಂದ ಪೊಲೀಸರು ಬ್ಯಾಚ್ ಇಲ್ಲದವರನ್ನು ತಡೆಯುತ್ತಿದ್ದರು. ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ನಲ್ಲೂರು ಪ್ರಸಾದ್ ಅವರು ಬ್ಯಾಚ್ ಹಾಕಿರಲಿಲ್ಲ. ಆದ್ದರಿಂದ ಪೊಲೀಸರು ಅವರನ್ನು ವೇದಿಕೆ ಏರದಂತೆ ತಡೆದರು. ಇದು ವಾಗ್ಯುದ್ಧಕ್ಕೆ ಕಾರಣವಾಯಿತು. ವೇದಿಕೆ ಮೇಲೆಯೇ ಬಿಜಾಪುರ ಜಿಲ್ಲಾ ಎಸ್ಪಿ ಹಾಗೂ ನಲ್ಲೂರು ಪ್ರಸಾದ್ ಅವರು ನೆರೆದಿದ್ದ ಎಲ್ಲರಿಗೂ ಕಾಣುವಂತೆ ಜಗಳವಾಡಿದರು. ಅದಕ್ಕೆ ಹಾಲಿ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರೂ ಸೇರಿಕೊಂಡರು. ವೇದಿಕೆ ಸಾಹಿತ್ಯ ಸಮ್ಮೇಳನ ಉದ್ಘಾಟನೆಗೂ ಮುನ್ನ ಜಗಳದ ಉದ್ಘಾಟನೆಯಾಯಿತು.
ಗಬ್ಬೆದ್ದ ಶೌಚಾಲಯ
ಬಿಜಾಪುರ:  ಸೈನಿಕ ಶಾಲೆಯ ಆವರಣದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆಯ ಬದಿ ಮಾಧ್ಯಮ ಕೇಂದ್ರದಲ್ಲಿನ ಪತ್ರಕರ್ತರ ಅನುಕೂಲಕ್ಕಾಗಿ ಎರಡು ಶೌಚಾಲಯಗಳನ್ನು ನಿರ್ಮಿಸಲಾಗಿತ್ತು.ನೀರಿಲ್ಲದೆ ಅದು ಗಬ್ಬೆದು ದುರ್ವಾಸನೆ ಹೊಡೆಯುತ್ತಿತ್ತು.
ಸಾರ್ವಜನಿಕರು ಇದೇ ಶೌಚಾಲಯ ಬಳಸಿಕೊಂಡಿದ್ದರಿಂದಾಗಿ ಕ್ಯೂನಲ್ಲಿ ಶೌಚ ಮಾಡಬೇಕಾಯಿತು. ಕೆಲವರು ಶೌಚದಲ್ಲಿಯೇ ಕಕ್ಕಸ ಮಾಡಿದ್ದರಿಂದಾಗಿ ದುರ್ವಾಸನೆ ಹೊಡೆಯುತ್ತಿತ್ತು.ಇದನ್ನು ಕಂಡು ಕೆಲವರು ಹೊರ ಬದಿಯಲ್ಲಿಯೇ ಮೂತ್ರ ವಿಸರ್ಜನೆ ಮಾಡುತ್ತಿರುವುದು ಕಂಡು ಬಂತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments