ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಿಜಾಪುರ

ಅಕ್ಷರ ಜಾತ್ರೆಯಲ್ಲಿ ಗಮನ ಸೆಳೆದ ವ್ಯಂಗ್ಯಚಿತ್ರ ಪ್ರದರ್ಶನ

Parashurama
Updated On : 12 Feb 2013, 12:01 pm

ಬಿಜಾಪುರ: ಕೋಟಿ ಕೋಟಿ ರು.ಗಳ ಬಜೆಟ್ ಮಂಡನೆಯಾದರೂ ರಾಜ್ಯದ ಬೊಕ್ಕಸದಲ್ಲಿ ಕೇವಲ ರು. 1 ಇರುವುದು, ಕೆಜೆಪಿಗೆ ನಾಳೆ ಬರ್ತೀವಿ, ಪ್ಯಾರ್‌ಗೆ ಆಗ್ಬುಟೈತೆ ಎಂಬ ಕುರ್ಚಿ ಮೇಲಿನ ಮೋಹ, ನೀರು ಖಾಲಿಯಾದರೂ ಹೂಜಿಯಲ್ಲಿ ಜಯಲಲಿತ ರೂಪದ ಕಾಗೆ ಒಂದೊಂದು ಕಲ್ಲನ್ನೆಸೆದು ನೀರು ಹೀರುತ್ತಿರುವುದು, ಅಣ್ಣಾ ಹಜಾರೆಗೆ ಹಣದ ಆಮಿಷ... ಹೀಗೆ ವಿವಿಧ ವ್ಯಂಗ್ಯಚಿತ್ರಗಳು ಸಾಹಿತ್ಯಾಸಕ್ತರಲ್ಲಿ ಬೆರಗು ಮೂಡಿಸಿದವು.
ಇದು ನಗರದ ಸೈನಿಕ ಶಾಲೆಯ ಆವರಣದಲ್ಲಿ ಮೂರು ದಿನಗಳ ಕಾಲ ಜರುಗುತ್ತಿರುವ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಮ್ಮಿಕೊಂಡಿದ್ದ ವ್ಯಂಗ್ಯಚಿತ್ರಗಳ ಪ್ರದರ್ಶನದ ಮಳಿಗೆಯಲ್ಲಿ ಕಂಡು ಬಂದ ದೃಶ್ಯಗಳು. ಸಮಾಜದ ಅಂಕು ಡೊಂಕುಗಳನ್ನು ಸರಳ ರೇಖೆಯಲ್ಲಿ ಹಿಡಿದಿಟ್ಟು, ತಿಳಿ ಹಾಸ್ಯದಿಂದ ಜನರ ಮನ ಮುಟ್ಟುವ ಹಾಗೆ ಚಿತ್ರಿಸಿರುವ ವ್ಯಂಗ್ಯಚಿತ್ರಗಳು ಸಾಹಿತ್ಯಾಸಕ್ತರನ್ನು ಸೆಳೆಯುವಲ್ಲಿ ಯಶಸ್ವಿಯಾದವು.
ಖ್ಯಾತ ವ್ಯಂಗ್ಯ ಚಿತ್ರಕಲಾವಿದ ಎಸ್.ವಿ.ಪದ್ಮನಾಭ, ಭಾವು ಪತ್ತಾರ, ಗೊರವರ ಯಲ್ಲಪ್ಪ, ಯೋಗೀಶೆಟ್ಟಗಾರ, ಪರಮೇಶ, ಚಂದ್ರ ಗಂಗೊಳ್ಳಿ, ಯತಿ ಸಿದ್ದಕಟ್ಟಿ, ಅಶೋಕ ಜೋಶಿ, ಸುರೇಶ ವಗ್ಗ, ನರೇಂದ್ರ, ರಘುಪತಿ ಶೃಂಗೇರಿ, ಪಿ.ಜಿ. ನಾರಾಯಣ ಅವರು ರಚಿಸಿರುವ ವ್ಯಂಗ್ಯ ಚಿತ್ರಗಳು ಪ್ರದರ್ಶನದಲ್ಲಿ ಇದ್ದವು. ಜನರು ತಂಡೊಪ ತಂಡವಾಗಿ ಬಂದು ವ್ಯಂಗ್ಯಚಿತ್ರಗಳನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದರು. ಹವ್ಯಾಸಿ ವ್ಯಂಗ್ಯಚಿತ್ರ ಕಲಾವಿದ ವೆಂಕಟೇಶ ಇನಾಮದಾರ ತಮ್ಮ ಸ್ವರಚಿತ ಚಿತ್ರಗಳ ಜೊತೆ ವಿವಿಧ ವ್ಯಂಗ್ಯಚಿತ್ರಕಾರರ ಚಿತ್ರಗಳನ್ನು ಸೇರಿಸಿ ಪ್ರದರ್ಶನ ಮಾಡಿದರು.
ವೆಂಕಟೇಶ ಅವರು ಮೂಲತಃ ಬಾಗಲಕೋಟೆ ಜಿಲ್ಲೆಯ ಬದಾಮಿ ತಾಲೂಕಿನವರು. ಬಿಜಾಪುರ ನಗರದಲ್ಲಿ ನಡೆಯುತ್ತಿರುವ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ತಮ್ಮದೇಯಾದ ವಿಶಿಷ್ಟ ಕೊಡುಗೆ ನೀಡುವ ಉದ್ದೇಶದಿಂದ ಈ ವ್ಯಂಗ್ಯಚಿತ್ರ ಪ್ರದರ್ಶನ ಹಮ್ಮಿಕೊಂಡಿದ್ದರು.
ಅಂತರ್ಜಾಲದ ಮೂಲಕ ವಿವಿಧ ಪ್ರಮುಖ ವ್ಯಂಗ್ಯಚಿತ್ರ ಕಲಾವಿದರ ವ್ಯಂಗ್ಯ ಚಿತ್ರಗಳನ್ನು ಸಂಗ್ರಹಿಸಿ ಸ್ವಂತ ಖರ್ಚಿನಲ್ಲಿ ವ್ಯಂಗ್ಯಚಿತ್ರ ಪ್ರದರ್ಶನ ಏರ್ಪಡಿಸಿದ್ದರು.
ಸಮ್ಮೇಳನದಲ್ಲಿ ಚಿತ್ರಕಲಾ ಪ್ರದರ್ಶನಕ್ಕೆ ನೀಡುವಂತೆ ವ್ಯಂಗ್ಯಚಿತ್ರ ಕಲಾಪ್ರದರ್ಶನಕ್ಕೂ ಆದ್ಯತೆ ನೀಡಬೇಕು ಎಂದು ವೆಂಕಟೇಶ ಅಭಿಪ್ರಾಯಪಟ್ಟಿದ್ದಾರೆ.
-ಪರಶುರಾಮ ಶಿವಶರಣ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments