ಗ್ರಾಮೀಣ ರಸ್ತೆ ಸುಧಾರಣೆಗೆ ಹೆಚ್ಚಿನ ಅನುದಾನ
ಬಿಜಾಪುರ: ಬಬಲೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಗ್ರಾಮೀಣ ಸಂಪರ್ಕ ರಸ್ತೆಗಳ ಸುಧಾರಣೆಗೆ ಅತಿ ಹೆಚ್ಚಿನ ಅನುದಾನ ವಿನಿಯೋಗಿಸಲಾಗಿದೆ ಎಂದು ಶಾಸಕ ಎಂ.ಬಿ.ಪಾಟೀಲ ಹೇಳಿದರು.
ತಾಲೂಕಿನ ಅರಕೇರಿ ಗ್ರಾಮದಲ್ಲಿ ಕರಾಡದೊಡ್ಡಿ- ಅರಕೇರಿ ರು. 38.50ಲಕ್ಷ ವೆಚ್ಚದ ರಸ್ತೆ, ಮಾನೇನದೊಡ್ಡಿ- ಬಿಸೇನದೊಡ್ಡಿ, ಲೋನಾರ ತಾಂಡಾ ರು. 155.75 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗೆ ಹಾಗೂ ಎಸ್.ಟಿ ಕಾಲೋನಿಯಲ್ಲಿ ಕಾಂಕ್ರೀಟ್ ರಸ್ತೆ, ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಮುಖ್ಯ ರಸ್ತೆಗಳ ಬದಲಾಗಿ ಒಳಗಿನ ತೋಟದ ರಸ್ತೆಗಳನ್ನು ಈ ಭಾರಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ರು. 10.64 ಕೋಟಿ ಗಳನ್ನು ಖರ್ಚು ಮಾಡಲಾಗುತ್ತಿದ್ದು, ಬರುವ ಮಳೆಗಾಲದೊಳಗಾಗಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.
ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ರಸ್ತೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚಿನ ಅನುದಾನ ನೀಡುತ್ತಿದ್ದು, ಅದು ಸದ್ಬಳಕೆಯಾಗಬೇಕು. ಅರಕೇರಿ, ಸಿದ್ದಾಪುರ ಗ್ರಾಮಗಳ ಸುತ್ತ ಮುತ್ತಲಿನ ತಾಂಡಾ, ದೊಡ್ಡಿ, ವಸ್ತಿಗಳಿಗೆ ರು. 2 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣದಿಂದ ಈ ಭಾಗದ ಜನರಿಗೆ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅರ್ಜುನ ರಾಠೋಡ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಚನ್ನಪ್ಪ ದಳವಾಯಿ, ತುಕಾರಾಮ ರಾಠೋಡ, ಅಶೋಕ ದಳವಾಯಿ, ಪೀರಪಟೇಲ ಪಾಟೀಲ, ಸುರೇಶ ಭಂಡಾರಿ, ಪಾಂಡು ಜಾಧವ, ಮಲ್ಲಾರಿ ಮಾನವರ, ತಾಯಪ್ಪ ಸಿಂಧೆ, ರಾವಸಾಬ ಮಾನೆ, ಶಿವಾನಂದ ದಳವಾಯಿ, ಬಾಪುರಾಯ ಶೇಡಬಾಳ, ವಿಜು ಕಾಂಬಳೆ, ಪಿಎಂಜಿಎಸ್‌ವೈ ವಿಭಾಗ ಕಾರ್ಯ ನಿರ್ವಾಹಕ ಎಂಜಿನೀಯರ್ ರಮೇಶ ಕಟ್ಟಿಮನಿ, ಎನ್.ಜಿ. ಮಂಗಲಗಿ, ಗುತ್ತಿಗೆದಾರ ಬಿ.ಎಂ.ಬಿರಾದಾರ, ಶಿವರಾಜ ಪಾಟೀಲ ಕೋಳುರಗಿ ಮತ್ತಿತರರು ಉಪಸ್ಥಿತರಿದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.