ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಿಜಾಪುರ

ಇನ್ನೊಂದು ಕೋಟಿ ಮರೀಚಿಕೆ

Parashurama
Updated On : 30 Jan 2013, 10:26 am

ಬಿಜಾಪುರ: ಗಂಗಾವತಿ ಸಾಹಿತ್ಯ ಸಮ್ಮೇಳನಕ್ಕೆ ದೊರೆತಿದ್ದ ಸರ್ಕಾರದ 1 ಕೋಟಿ ಹೆಚ್ಚುವರಿ ಅನುದಾನ ಬಿಜಾಪುರ ಸಾಹಿತ್ಯ ಸಮ್ಮೇಳನಕ್ಕೆ ದೊರೆಯುವ ಅನುಮಾನ ಸಂಘಟಕರನ್ನು ಕಾಡುತ್ತಿದೆ.
'ಹೆಚ್ಚುವರಿ ಅನುದಾನ ದೊರಕಿಸಲು ಯತ್ನಿಸುತ್ತೇನೆ. ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳುತ್ತೇನೆ' ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ಭರವಸೆ ನೀಡಿದ್ದು, 15 ದಿನವಾದರೂ ಈ ದಿಸೆಯಲ್ಲಿ ಯಾವುದೇ ಪ್ರಕ್ರಿಯೆ ನಡೆದಿಲ್ಲ. ಇನ್ನು 10 ದಿನವಿರುವ ಸಮ್ಮೇಳನಕ್ಕೆ ಹಣ ಬಿಡುಗಡೆಯಾಗುವ ಸಾಧ್ಯತೆಯೂ ಕಾಣುತ್ತಿಲ್ಲ. ಇಲ್ಲಿನ ಸಮ್ಮೇಳನಕ್ಕೆ ಹೆಚ್ಚುವರಿ 1 ಕೋಟಿ ಅನುದಾನ ಬಿಡುಗಡೆಗೆ ಯಾವುದೇ ಪ್ರಯತ್ನವೂ ಇಲ್ಲಿ ನಡೆಯುತ್ತಿಲ್ಲ. ಇಲ್ಲಿಯ ಜನಪ್ರತಿನಿಧಿಗಳಲ್ಲಿ ಸಾಕಷ್ಟು ನಿರಾಸಕ್ತಿಯೂ ಕಂಡು ಬರುತ್ತಿದೆ. ಇದು ಸಮ್ಮೇಳನದ ಸಿದ್ಧತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
ಬಿಜಾಪುರ ಶಾಸಕ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರು ಮಾತ್ರ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಸದ್ಯದ ರಾಜಕೀಯ ಅಸ್ಥಿರತೆಯಲ್ಲಿ ಸರ್ಕಾರಕ್ಕೆ ಕಂಟಕ ಎದುರಾದರೆ ಹಣ ಬಿಡುಗಡೆಯಾಗುವುದೇ ಎಂಬ ಅನುಮಾನ ಎಲ್ಲರನ್ನೂ ಕಾಡುತ್ತಿದೆ.
ಸಮಿತಿ ಖಾತೆಯಲ್ಲಿ 1.45 ಕೋಟಿ: ಸಮ್ಮೇಳನದ ಸ್ವಾಗತ ಸಮಿತಿ ಜಂಟಿ ಖಾತೆಯಲ್ಲಿ ಸಧ್ಯ ರು. 1,45,76,000 ಇದೆ. ಈ ಪೈಕಿ ರು. 25 ಲಕ್ಷ ಸಾಹಿತ್ಯ ಪರಿಷತ್‌ಗೆ ಸಿದ್ಧತೆಗಾಗಿ ನೀಡಲಾಗಿದೆ. ಕೇಂದ್ರ ಸಾಹಿತ್ಯ ಪರಿಷತ್ 70 ಲಕ್ಷ ಬೇಡಿಕೆ ಇಟ್ಟಿದೆ.
ಸರ್ಕಾರಿ ನೌಕರರಿಂದ 1.20 ಕೋಟಿ, ಸರ್ಕಾರದಿಂದ 1 ಕೋಟಿ, ಜಿಪಂ, ತಾಪಂ ಅಧ್ಯಕ್ಷರು, ಸದಸ್ಯರಿಂದ 80 ಲಕ್ಷ, ಎಪಿಎಂಸಿ ಜಾಹೀರಾತು ಮೂಲದಿಂದ 50 ಲಕ್ಷ, ಹೆಸ್ಕಾಂ, ಮಹಿಳಾ ವಿವಿ ಹಾಗೂ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ 30 ಲಕ್ಷ, ಸಹಕಾರಿ ಸಂಘಗಳಿಂದ 25 ಲಕ್ಷ ದೇಣಿಗೆ ನಿರೀಕ್ಷಿಸಲಾಗಿದೆ. ಬಿಎಲ್‌ಡಿಇ ಸಂಸ್ಥೆಯಿಂದ 11 ಲಕ್ಷ ಹಾಗೂ ಮುದ್ದೇಬಿಹಾಳ, ಬಸವನ ಬಾಗೇವಾಡಿ ವ್ಯಾಪಾರಸ್ಥರು, ನೌಕರರಿಂದ ತಲಾ 2 ಲಕ್ಷ ದೇಣಿಗೆ ಬಂದಿದೆ. ಒಟ್ಟು ಸೇರಿ 4.20 ಕೋಟಿ ದೇಣಿಗೆ ಸಂಗ್ರಹವಾಗುತ್ತದೆ ಎಂದು ಅಂದಾಜಿಸಲಾಗಿದೆ. ಸಮ್ಮೇಳನದ ಖರ್ಚಿಗೆ ಸುಮಾರು 6 ಕೋಟಿ ವೆಚ್ಚ ಅಂದಾಜಿಸಲಾಗಿದೆ. ದಾನಿಗಳು ನೀಡಿದ ಚೆಕ್ ನಗದು ಮಾಡಿಸುವ ಜವಾಬ್ದಾರಿಯನ್ನು ಯಾರೂ ಹೊತ್ತಿಲ್ಲ. ಹೀಗಾಗಿ ಚೆಕ್ ನಗದು ಆಗದೆ ಸಮ್ಮೇಳನದ ಕೆಲಸ, ಕಾರ್ಯಗಳಿಗೆ ತೊಂದರೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments