ಕೈಗಾಡಿ ಚಹಾ ಅಂಗಡಿ ಮಾಲೀಕನ 'ಚಿನ್ನ'ದ ಮಗಳು
ಕ.ಪ್ರ. ವಾರ್ತೆ ಬಿಜಾಪುರ ಮಾ. 3
ಜಿಪಂ ಕಚೇರಿ ಮುಂಬದಿ ಬಯಲು ಜಾಗೆಯಲ್ಲಿ ತಳ್ಳುವ ಗಾಡಿಯಲ್ಲಿ ಚಹದ ಅಂಗಡಿ ಇಟ್ಟುಕೊಂಡಿರುವ ರತನ್ ಇಂಗಳೆ ಹಾಗೂ ಕಲಾವತಿ ಇಂಗಳೆ ದಂಪತಿ ಮಗಳು ರೂಪಾ ಕನ್ನಡ ಸ್ನಾತಕೋತ್ತರ ವಿಷಯದಲ್ಲಿ ಎರಡು ಚಿನ್ನದ ಪದಕ ಪಡೆದು ಸಾಧನೆ ಮೆರೆದಿದ್ದಾಳೆ.
ರೂಪಾ ಕಡು ಬಡ ಕುಟುಂಬದವಳು. ಅಪ್ಪ, ಅಮ್ಮ ಇಬ್ಬರೂ ಸೇರಿ ಬಿಜಾಪುರದ ಜಿಪಂ ಕಚೇರಿ ಮುಂಬದಿ ಬಯಲು ಜಾಗೆಯಲ್ಲಿ ತಳ್ಳುವ ಗಾಡಿಯಲ್ಲಿ ಚಹದ ಅಂಗಡಿ ಇಟ್ಟುಕೊಂಡು ಮಗಳನ್ನು ಓದಿಸುತ್ತಿದ್ದಾರೆ. ತಾಯಿ ಕಲಿತಿಲ್ಲ. ಆದರೆ ರೂಪಾಳ ತಂದೆ ರತನ ಪದವಿವರೆಗೂ ಓದಿದ್ದಾರೆ. ನಮ್ಮಂತೆ ಮಗಳು ಕೂಡ ಕಷ್ಟದಲ್ಲಿ ಬದುಕ ಬಾರದು. ಕಲಿತು ಒಳ್ಳೆಯ ಕೆಲಸ ಗಿಟ್ಟಿಸಿಕೊಂಡು ಸುಂದರವಾಗಿ ಬಾಳಬೇಕು ಎಂದು ಕಲಿಸಿದ್ದಾರೆ. ಈಗ ಅವರ ಕಷ್ಟಕ್ಕೆ 'ಚಿನ್ನ'ದಂಥ ಫಲ ದೊರೆತಿದೆ. ಅದಕ್ಕೆ ಅವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಡಬಲ್ ಚಿನ್ನದ ಪದಕ ಬಂದಿದ್ದಕ್ಕೆ ನನಗೆ ತುಂಬಾ ಖುಷಿ ಆಗಿದೆ. ನನ್ನ ಶ್ರೇಯಸ್ಸಿಗೆ ಮನೆಯಲ್ಲಿ ಅಪ್ಪ, ಅಮ್ಮಂದಿರು ನೀಡಿದ ಪ್ರೋತ್ಸಾಹ ಮುಖ್ಯ ಕಾರಣ. ಅವರ ಆಸೆ ಈಡೇರಿಸುತ್ತೇನೆ ಎನ್ನುತ್ತಾಳೆ ರೂಪಾ ಇಂಗಳೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.