ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಿಜಾಪುರ

ಕ್ರಿಕೆಟ್: ಇಂಡಿ ತಂಡಕ್ಕೆ ಜಯ

Parashurama
Updated On : 8 Mar 2013, 11:47 am

ಬಿಜಾಪುರ: ನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನ ಆಶ್ರಯದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 3ನೇ ವಲಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬುಧವಾರ ಜರುಗಿದ ಪಂದ್ಯದಲ್ಲಿ ನಾಯಕ ಆದಂ ಇಂಡಿಕರ ಅವರ ಉತ್ತಮ ಆಲರೌಂಡ್ ಆಟದ ನೆರವಿನಿಂದ ಇಂಡಿಯ ಜಿಆರ್‌ಜಿ ಕಾಲೇಜ್ ತಂಡ ರೋಚಕ ಒಂದು ಹುದ್ದರಿಯಿಂದ ದರಬಾರ ಬಿಬಿಎ ಕಾಲೇಜ್ ತಂಡವನ್ನು ಸೋಲಿಸಿತು. ಟಾಸ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ದರಬಾರ ಬಿಬಿಎ, ಬಿಸಿಎ ಕಾಲೇಜ್ ತಂಡ 22.5 ಒವರಿನಲ್ಲಿ ಕೇವಲ 120 ರನ್ ಗಳಿಸಿ ಆಲೌಟಾಯಿತು. ತಂಡದ ಪರವಾಗಿ ರಮೇಶ ಗೌಡನ್ನವರ 31, ದಯಾನಂದ ಪಾಟೀಲ 17, ರೋಹನ ಪಾಟನಕರ, ಪರಮಾನಂದ ಚಲವಾದಿ ತಲಾ 12 ರನ್ ಗಳಿಸಿದರು. ನಿಗದಿತ 25 ಒವರ್‌ನಲ್ಲಿ 121 ರನ್‌ಗಳ ಗುರಿಯೊಂದಿಗೆ ಬ್ಯಾಟಿಂಗ್‌ಗೆ ಇಳಿದ ಇಂಡಿಯ ಜಿಆರ್‌ಜಿ ಕಾಲೇಜ್ ತಂಡ ಎಡಗೈ ಸ್ಪಿನ್ ಬಾಲರ್ ಸಚಿನ್ ಅವರ ಮಾರಕ ಬೌಲಿಂಗ್ ದಾಳಿಗೆ ಸಿಲುಕಿ ಮೊದಲ ಒವರ್‌ನಲ್ಲಿಯೇ 4 ರನ್‌ಗಳಿಗೆ 2 ಹುದ್ದರಿ ಕಳೆದುಕೊಂಡಿತು. ನಂತರ 3ನೇ ಹುದ್ದರಿಗೆ ಪ್ರವೀಣ ಮತ್ತು ಭರತ 49 ರನ್ ಜೊತೆಯಾಟ, ಕೊನೆಯಲ್ಲಿ ಆದಂ ಇಂಡಿಕರ, ಪ್ರವೀಣ ಹೂಗಾರ ಹಾಗೂ ಬಸವರಾಜ ಅವರ ಬ್ಯಾಟಿಂಗ್‌ನಿಂದ 24.1 ಒವರ್‌ನಲ್ಲಿ 9 ಹುದ್ದರಿ ಕಳೆದು ಗೆಲವಿನ ಗುರಿ ಮುಟ್ಟಿತು.
ತಂಡದ ಪರವಾಗಿ ಪ್ರವೀಣ ಹೂಗಾರ 18, ಭರತ ಆಲಕುಂಟೆ 12, ಆದಂ ಇಂಡಿಕರ 14, ಬಸವರಾಜ ಶಿರನಾಳ 14 ರನ್‌ಗಳನ್ನು ಗಳಿಸಿದರು.
ಪ್ರೊ. ಬಿ. ಚಂದ್ರಕಾಂತ ಅವರು ಪಂದ್ಯ ಉದ್ಘಾಟಿಸಿದರು.
ಕಾಲೇಜ್ ಅಭಿವೃದ್ಧಿ ಸಮಿತಿ ಸದಸ್ಯ ಎಸ್.ಎಂ. ಗೌರಿ, ಪ್ರೊ. ಎಸ್.ಎಸ್. ಸಿದ್ದಾಪುರ, ಪ್ರೊ. ಪಿ.ಎಂ. ಪರಗೊಂಡ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments