ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಿಜಾಪುರ

ತಾಳಿಕೋಟೆ: ಪ್ರಚಾರ ಮಾಡದೇ ಗೆದ್ದ ಶಿಂಧೆ

Parashurama
Updated On : 12 Mar 2013, 11:24 am

ತಾಳಿಕೋಟೆ: ಈ ಹಿಂದೆ ತಾಳಿಕೋಟೆ ಪುರಸಭೆ ಮುಖ್ಯಾಧಿಕಾರಿಯಾಗಿದ್ದ ಬಾಬುರಾವ್ ಅಪ್ಪಾಜಿ ಶಿಂಧೆ ಇದೀಗ ನಡೆದ ಪುರಸಭೆ ಚುನಾವಣೆಯಲ್ಲಿ ಪ್ರಚಾರ ಮಾಡದೇ ಅತ್ಯಧಿಕ ಮತಗಳಿಂದ ಆಯ್ಕೆಗೊಂಡು ಇತಿಹಾಸ ನಿರ್ಮಿಸಿದ್ದಾರೆ.
ಪುರಸಭೆ 1ನೇ ವಾರ್ಡಿನಿಂದ ಬಾಬುರಾವ ಅಪ್ಪಾಜಿ ಶಿಂಧೆ 241 ಮತಗಳ ಅಂತರದಿಂದ ಗೆದ್ದಿದ್ದು, 298 ಮತಗಳನ್ನು ಪಡೆದಿದ್ದಾರೆ. ಅವರು ನಾಮ ಪತ್ರ ಸಲ್ಲಿಸುವ ದಿನದಿಂದ ಹಿಡಿದು ಮತದಾನವಾಗುವವರೆಗೂ ಒಂದು ದಿನವೂ ಪ್ರಚಾರ ಮಾಡಿಲ್ಲ ಆದರೂ ಆಯ್ಕೆಯಾಗಿದ್ದಾರೆ.
ಬಾಗಲಕೋಟೆ ನಗರಸಭೆ ಪೌರಾಯುಕ್ತರಾಗಿ ಕಾರ್ಯನಿರ್ವಹಿಸಿ ಇತ್ತೀಚೆಗಷ್ಟೇ ನಿವೃತ್ತರಾದ ಬಾಬುರಾವ ಅಪ್ಪಾಜಿ ಶಿಂಧೆ ಅವರು ತಾಳಿಕೋಟೆ ಪುರಸಭೆ ಮುಖ್ಯಾಧಿಕಾರಿಯಾಗಿಯೂ 12 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದರು. ಆ ಅವಧಿಯಲ್ಲಿ ಪಟ್ಟಣದ ಅಭಿವೃದ್ಧಿಗೆ ತೆಗೆದುಕೊಂಡ ದಿಟ್ಟ ಕ್ರಮಗಳೇ ಇದಕ್ಕೆ ಕಾರಣವಾಗಿವೆ.
ಅತೀ ಹಿಂದುಳಿದ ಆಶ್ರಯ ಕಾಲನಿಯನ್ನೇ ಹೊಂದಿರುವ 1 ವಾರ್ಡಿನ ಮತದಾರರೇ ಅವರನ್ನು ಒಪ್ಪಿಸಿ ಪಕ್ಷೇತರರಾಗಿ ಸ್ಪರ್ಧಿಸಲು ಕಣಕ್ಕಿಳಿಸಿದ್ದರು. ಅವಿರೋಧ ಆಯ್ಕೆ ಮಾಡಲು ಎಲ್ಲ ಪಕ್ಷಗಳ ಮುಖಂಡರು ಪ್ರಯತ್ನಿಸಿದರು. ಆದರೆ, ಪಕ್ಷೇತರರಾಗಿ ಶಿವರಾಜ ಮಲಕನಗೌಡ ಪಾಟೀಲ ಮತ್ತು ಮಠ ರಾಜೇಂದ್ರಕುಮಾರ ಶಿವಯ್ಯ ನಾಮಪತ್ರ ಸಲ್ಲಿಸಿದ್ದರಿಂದ ಇದು ವಿಫಲವಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments