ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಿಜಾಪುರ

18ರಂದು ಚನ್ನಬಸವಶ್ರೀ ಪ್ರಶಸ್ತಿ ಪ್ರದಾನ

Parashurama
Updated On : 17 Mar 2013, 12:28 pm

ಮುದ್ದೇಬಿಹಾಳ: ತಾಲೂಕಿನ ಹುಲ್ಲೂರ ಗ್ರಾಮದಲ್ಲಿ ಮಾ. 18ರಂದು ಸಂಜೆ 5.30 ಗಂಟೆಗೆ ಸಿಬಿಎಸ್ ಪ್ರಾಥಮಿಕ ಶಾಲೆ ಆವರಣದಲ್ಲಿ 2013ನೇ ಸಾಲಿನ ಚನ್ನಬಸವಶ್ರೀ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮತ್ತು ಸಿಬಿಎಸ್ ಶಾಲೆಯ ಪ್ರಥಮ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಎಂ.ಎಸ್. ಕೊಪ್ಪದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಭಿನವ ಕುಮಾರೇಶ್ವರ ವಿದ್ಯಾವರ್ಧಕ ಸಂಸ್ಥೆಯ ಆಶ್ರಯದಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಸಚಿವ ಎಸ್.ಕೆ. ಬೆಳ್ಳುಬ್ಬಿ ಉದ್ಘಾಟಿಸುವರು. ಆಲಮಟ್ಟಿ ಅರಣ್ಯ ಸಂರಕ್ಷಣಾಧಿಕಾರಿ ಎಂ.ಜಿ. ಕ್ಯಾತನ್ನವರ ಜ್ಯೋತಿ ಬೆಳಗಿಸುವರು. ಡಾ. ಚನ್ನಬಸವ ಮಹಾಸ್ವಾಮಿ, ಬಾಲತಪಸ್ವಿ ಸೋಮಲಿಂಗ ಮಹಾರಾಜ ಸಾನ್ನಿಧ್ಯ ವಹಿಸುವರು. ಜಿಪಂ ಶಿಕ್ಷಣ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಶಿವಾನಂದ ಅವಟಿ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಪ್ರಭುಗೌಡ ದೇಸಾಯಿ ಮುಖ್ಯ ಅತಿಥಿಯಾಗಿ ಆಗಮಿಸುವರು. ಉಪನ್ಯಾಸಕ ವಿ.ಎಸ್. ಹಂಚಲಿ ವಿಶೇಷ ಉಪನ್ಯಾಸ ನೀಡುವರು. ಗ್ರಾಪಂ ಅಧ್ಯಕ್ಷ ಎಸ್.ಎಸ್. ಕಡಿ ಅವರನ್ನು ಸನ್ಮಾನಿಸಲಾಗುತ್ತದೆ. ಶಾಂತಗೌಡ ಪಾಟೀಲ, ಸಂಗರಾಜ ದೇಸಾಯಿ, ಮುತ್ತಣ್ಣ ಹುಗ್ಗಿ, ಜುಮ್ಮನಗೌ ಡ ಬಿರಾದಾರ, ಎಂ.ಬಿ. ಪತ್ತಾರ, ಎಸ್.ಬಿ. ಸಾಲೋಟಗಿ, ಗಿರಿಯಪ್ಪ ತಳವಾರ, ಭೀಮಣ್ಣ ದಡ್ಡಿ, ಕರಿಯಪ್ಪ ಆಸಂಗಿ, ಸುರೇಶ ಹಳೇಮನಿ, ಆನಂದಗೌಡ ಗೌಡರ, ರವಿ ಅಂಬಿಗೇರ ಅತಿಥಿಗಳಾಗಿ ಆಗಮಿಸುವರು.
ಪ್ರಶಸ್ತಿ: ಸಚಿವ ಎಸ್.ಕೆ. ಬೆಳ್ಳುಬ್ಬಿ, ನಿವೃತ್ತ ಐಜಿಪಿ ಶಂಕರ ಬಿದರಿ, ಕೃಷ್ಣಾ ಕಾಡಾ ಅಧ್ಯಕ್ಷ ಬಸವರಾಜ ಕುಂಬಾರ, ಪೊಲೀಸ್ ಅಧಿಕಾರಿ ಸಿ.ಜಿ. ಖ್ಯಾತನ, ಬಸವಾನುಯಾಯಿ ಬಂಡೆಪ್ಪ ತೇಲಿ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಶಿವಾನಂದ ಕಲ್ಲೂರ, ಬಿಇಒ ಎನ್.ವಿ. ಹೊಸೂರ, ಶಿಕ್ಷಕ ಸುನೀಲ ಎಚ್.ಎಸ್. ದಾನಿ ಎಂ.ವಿ. ಕೂಚಬಾಳ, ಭರತನಾಟ್ಯ ಪ್ರವೀಣೆ ಕೃತಿಕಾ ದಯಾನಂದ ಮತ್ತು ಮಾಜಿ ಶಾಸಕ ಎಂ.ಎಂ. ಸಜ್ಜನ ಅವರಿಗೆ 2013ನೇ ಸಾಲಿನ                   ಚನ್ನಬಸವಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments