ನೀರಜ್ ಪಾಟೀಲ ಭೇಟಿ ಮಾಡಿದ ಕಲ್ಲೂರ
ಬಸವನಬಾಗೇವಾಡಿ: ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಅಧ್ಯಕ್ಷ ಶಿವಾನಂದ ಕಲ್ಲೂರ ಅವರು ಶನಿವಾರ ಬೆಂಗಳೂರಿನಲ್ಲಿ ಲಂಡನ್ನಿನ ಮಾಜಿ ಮಹಾಪೌರ ನೀರಜ್ ಪಾಟೀಲ ಅವರನ್ನು ಭೇಟಿ ಮಾಡಿ, ಲಂಡನ್ನಿನ ಸಾರಿಗೆ ವ್ಯವಸ್ಥೆ, ಅಲ್ಲಿ ಸ್ಥಾಪಿಸಬೇಕೆಂದಿರುವ ವಿಶ್ವಗುರು ಬಸವೇಶ್ವರ ಪ್ರತಿಮೆ ಕುರಿತು ಸುದೀಘವಾಗಿ ಚರ್ಚಿಸಿದರು.
ಲಂಡನ್ನಿನಲ್ಲಿ ಸ್ಥಾಪಿಸಬೇಕೆಂದಿರುವ ಬಸವೇಶ್ವರರ ಪ್ರತಿಮೆಯನ್ನು ಅವರ ಜನ್ಮ ಸ್ಥಳವಾದ ಬಸವನಬಾಗೇವಾಡಿಯಲ್ಲಿ ಪೂಜೆ ಮಾಡಿಸಲು ನೀರಜ್ ಪಾಟೀಲರಿಗೆ ತಿಳಿಸಲಾಗಿದೆ. ಈ ಕುರಿತು ಅವರ ಜೊತೆ ಇಂದಿನ ಭೇಟಿ ಸಂದರ್ಭದಲ್ಲಿ ಚರ್ಚಿಸಲಾಗಿದ್ದು, ಅದಕ್ಕೆ ಅವರು ಸ್ಪಂದಿಸಿದ್ದಾರೆ. ಬಸವೇಶ್ವರ ಪ್ರತಿಮೆಯನ್ನು ತುಮಕೂರಿನ ಸಿದ್ದಗಂಗಾ ಶಿವಕುಮಾರ ಸ್ವಾಮೀಜಿ ಅವರಿಂದ ಪೂಜೆ ಮಾಡಿಸಿ, ಲಂಡನ್ನಿಗೆ ತೆಗೆದುಕೊಂಡು ಹೋಗುವ ಅಪೇಕ್ಷೆ ಅವರದ್ದಾಗಿದೆ ಎಂದು ಶಿವಾನಂದ ಕಲ್ಲೂರ ಶನಿವಾರ ಪತ್ರಿಕೆಗೆ ದೂರವಾಣಿ ಮೂಲಕ ತಿಳಿಸಿದ್ದಾರೆ.
ಈ ಕಾರ್ಯಕ್ರಮಕ್ಕೆ ಬೇಕಾದ ಸಿದ್ಧತೆ, ಸಹಕಾರ ಇಲ್ಲಿನ ಬಸವ ಪ್ರತಿಷ್ಠಾನದಿಂದ, ಬಸವನಬಾಗೇವಾಡಿಯ ಸಮಸ್ತ ಜನರು ಮಾಡಲು ಸಿದ್ಧ ಎಂಬ ಭರವಸೆ ನೀಡಲಾಗಿದೆ. ಇದೇ ಸಂದರ್ಭದಲ್ಲಿ ಬಸವ ನಾಡಿನ ಪರವಾಗಿ ನೀರಜ್ ಪಾಟೀಲ ಅವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗುವುದು. ಇದಕ್ಕೆ ಅವರು ಆಗಮಿಸಲು ಒಪ್ಪಿದ್ದಾರೆ ಎಂದು ತಿಳಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.