ಪಿಎಸ್ಐ ವರ್ಗಾವಣೆ ಮಾಡದಂತೆ ಮನವಿ
ಚಡಚಣ: ಸ್ಥಳೀಂು ಪೊಲೀಸ್ ಠಾಣೆಂು ಪಿಎಸ್ಐ ಮಹಾದೇವ ಂುಲಿಗಾರ ವರ್ಗಾವಣೆ ಅವರನ್ನು ಮಾಡದಂತೆ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಸ್ಥಳೀಂು ವಿಶೇಷ ತಹಸೀಲ್ದಾರ ಕಛೇರಿಗೆ ತೆರಳಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎ.ಪಿ.ಎಮ್.ಸಿ. ನಿರ್ದೇಶಕ ಐ.ಎಚ್. ಮಕಾನದಾರ, ಪಟ್ಟಣಕ್ಕೆ ಮಹಾದೇವ ಂುಲಿಗಾರ ವರ್ಗವಾಗಿ ಬಂದಾಗಿನಿಂದ ಅಕ್ರಮ ಚಟುವಟಿಕೆಗಳು ಸಂಪೂರ್ಣವಾಗಿ ಹತೋಟಿಗೆ ಬಂದಿವೆ. ಪಟ್ಟಣ ಹಾಗೂ ಸುತ್ತ ಮುತ್ತಲಿನ ಗ್ರಾಮಗಳ ಸಾರ್ವಜನಿಕರು ನೆಮ್ಮದಿಂು ಜೀವನ ನಡೆಸುವಂತಾಗಿದೆ. ಕಾನೂನು ಬಾಹೀರ ಕೆಲಸದಲ್ಲಿ ಪಾಲ್ಗೊಂಡ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಈ ಅಧಿಕಾರಿಂು ಮೇಲೆ ಮತ್ತು ಸಿಬ್ಬಂದಿ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ, ಮೇಲಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಒತ್ತಡ ಹೇರುತ್ತಿದ್ದಾರೆ ಎಂದು ತಿಳಿಸಿದರು.
ತಹಸೀಲ್ದಾರ ಅನುಪಸ್ಥಿತಿಂುಲ್ಲಿ ಕಛೇರಿ ಸಿಬ್ಬಂದಿ ಬಸವರಾಜ ಹರಳಂ್ಯು ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ದೇವೆಂದ್ರಪ್ಪ ಪಾಟೀಲ, ಮಹಾದೇವ ಂುಂಕಂಚಿ, ರಾಜೂ ಕೋಳಿ, ತುಕಾರಾಮ ಆಲಕುಂಟೆ, ಮಹಾದೇವ ಕರ್ಲಮಳ, ಚಾಂದಸಾಬ ನದಾಫ್, ಚಂದ್ರಕಾಂತ ಶಿಂಧೆ, ಮುಖಂಡರಾದ ಶ್ರೀಶೈಲ ವಾಳಿಖಿಂಡಿ, ಉತ್ತಮ ಕಾರಬಾರಿ, ದಾನಪ್ಪ ಕರ್ಲಮಳ ಇತರರು ಉಪಸ್ಥಿತರಿದ್ದರು.
ಡಿವೈಎಸ್ಪಿಗೆ ಮನವಿ: ಇಂಡಿ ಡಿವೈಎಸ್ಪಿ ಮಹೇಶ್ವರಪ್ಪ ಅವರಿಗೆ ಇದೇ ಸಂದರ್ಭದಲ್ಲಿ ಪಿಎಸ್ಐ ಮಹಾದೇವ ಂುಲಿಗಾರ ಅವರನ್ನು ವರ್ಗಾವಣೆ ಮಾಡಬಾರದು ಎಂದು ಗ್ರಾಮಸ್ಥರು ಒತ್ತಾಯಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.