ಬನಹಟ್ಟಿಯ ಎಸ್.ಟಿ.ಸಿ. ಕಾಲೇಜು ಚಾಂಪಿಯನ್
ತಾಳಿಕೋಟೆ: ಪಟ್ಟಣದ ವೀವಿ ಸಂಘದ ಶ್ರೀ ಖಾಸ್ಗತೇಶ್ವರ ಕಲಾ ಹಾಗೂ ವಾಣಿಜ್ಯ ಕಾಲೇಜಿನಲ್ಲಿ 2 ದಿನಗಳಿಂದ ನಡೆದ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ 3ನೇ ವಲಯ ಹಾಗೂ ಅಂತರ ವಲಯ ಪಂದ್ಯಾವಳಿಯು ಶನಿವಾರ ಮುಕ್ತಾಯವಾಯಿತು.
ಪಂದ್ಯಾವಳಿಯಲ್ಲಿ ಚಿಕ್ಕೋಡಿ ವಲಯದ ಉಗಾರದ ಎಸ್.ಎಚ್.ವಿ ಕಾಲೇಜಿನ ತಂಡವು ಪುರಷ ಟೇಬಲ್ ಟೆನ್ನಿಸ್ ಚಾಂಪಿಯನ್ ಪಟ್ಟ ಅಲಂಕಿರಿಸಿದರೆ, ಮಹಿಳಾ ವಿಭಾಗದಲ್ಲಿ ಬಾಗಲಕೋಟೆ ವಲಯದ ಬನಹಟ್ಟಿಯ ಎಸ್.ಟಿ.ಸಿ. ಕಾಲೇಜಿನ ತಂಡವು ವಿಶ್ವವಿದ್ಯಾಲಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.
ಶನಿವಾರ ನಡೆದ ಅಂತರ ವಲಯ ಪಂದ್ಯಾವಳಿಯಲ್ಲಿ ಒಟ್ಟು ಪುರುಷರ ವಿಭಾಗದಲ್ಲಿ 6 ಹಾಗೂ ಮಹಿಳಾ ವಿಭಾಗದಲ್ಲಿ 6 ತಂಡಗಳು ಭಾಗವಹಿಸಿದ್ದವು. ಬೆಳಗಾವಿ ವಲಯದಿಂದ ಯಾವುದೇ ತಂಡಗಳು ಭಾಗವಹಿಸಿರಲಿಲ್ಲ.
ಪುರುಷರ ಫೈನಲ್ ಪಂದ್ಯದಲ್ಲಿ ಉಗಾರದ ಎಸ್.ಎಚ್.ವಿ ಕಾಲೇಜಿನ ತಂಡ, ಬನಹಟ್ಟಿಯ ಎಸ್.ಟಿ.ಸಿ.ಕಾಲೇಜಿನ ತಂಡದ ವಿರುದ್ಧ 3-2 ಅಂತರದಲ್ಲಿ ಗೆದ್ದಿತು. ಬನಹಟ್ಟಿಯ ಕಾಲೇಜು ತಂಡ ರನ್ನರ್ ಅಪ್ ಪ್ರಶಸ್ತಿ ಪಡೆಯಿತು.
ಮಹಿಳೆಯರ ವಿಭಾಗದಲ್ಲಿ ಬನಹಟ್ಟಿ ಎಸ್.ಟಿ.ಸಿ. ಕಾಲೇಜಿನ ತಂಡ ಉಗಾರದ ಎಸ್.ಎಚ್.ವಿ ಕಾಲೇಜಿನ ತಂಡದ ವಿರುದ್ಧದ ಫೈನಲ್ ಪಂದ್ಯದಲ್ಲಿ 3-2 ಅಂತರದಲ್ಲಿ ಗೆದ್ದಿತು.
ಸೋತ ಉಗಾರ ಕಾಲೇಜಿನ ಮಹಿಳಾ ತಂಡ ವಿಶ್ವವಿದ್ಯಾಲಯ ರನ್ನರ ಅಪ್ ಪ್ರಶಸ್ತಿ ಪಡೆಯಿತು.
ನಂತರ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಬಸವೇಶ್ವರ ಬ್ಯಾಂಕಿನ ಅಧ್ಯಕ್ಷ ಜಿ.ಎಸ್. ಕಶೆಟ್ಟಿ ಬಹುಮಾನ ವಿತರಿಸಿದರು. ಕಾಲೇಜಿನ ಅಧ್ಯಕ್ಷ ವಿ.ಸಿ. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.
ಕೆ.ಎಸ್. ಮುರಾಳ, ಎಮ್.ಎಸ್. ವೀರಕ್ತಮಠ, ಪ್ರಾಚಾರ್ಯ ಡಿ.ಎಸ್. ಹತಗುಂಡಿ, ದಯಾನಂದ ಮೂಗಡ್ಲಿಮಠ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.