ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಿಜಾಪುರ

ಮಾನಸಿಕ ಅಸ್ವಸ್ಥನಿಂದ ಇಬ್ಬರ ಕೊಲೆ, ನಾಲ್ವರಿಗೆ ಗಾಯ

Parashurama
Updated On : 27 Mar 2013, 10:41 am

ಕ.ಪ್ರ ವಾರ್ತೆ ಬಿಜಾಪುರ ಮಾ.27
ತಾಲೂಕಿನ ಕವಲಗಿ ಗ್ರಾಮದಲ್ಲಿ ಬುಧವಾರ ಬೆಳಗಿನ ಜಾವ ಮಾನಸಿಕ ಅಸ್ವಸ್ಥರೊಬ್ಬರು 5 ವರ್ಷದ ಬಾಲಕ ಸೇರಿದಂತೆ ಇಬ್ಬರನ್ನು ಭರ್ಚಿಯಿಂದ ಇರಿದು ಕೊಲೆ ಮಾಡಿ, ಇತರ ನಾಲ್ವರಿಗೆ ಗಾಯಗೊಳಿಸಿದ್ದಾನೆ. ನಂತರ ಅವನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಕವಲಗಿ ಗ್ರಾಮದಿಂದ 2 ಕಿ.ಮೀ. ದೂರವಿರುವ ತೋಟದ ಮನೆಯಲ್ಲಿ ವಾಸಿಸುತ್ತಿದ್ದ ಮಾನಸಿಕ ಅಸ್ವಸ್ಥ ಸಿದ್ದಪ್ಪ ಭೀಮರಾಯ ಹೆರಕಲ್ (40) ಎಂಬಾತ ಬುಧವಾರ ಮಧ್ಯರಾತ್ರಿ ನಂತರ ಮನೆಯಲ್ಲಿ ಮಲಗಿದ ತಂಗಿ ಶಾಂತವ್ವ ಸೋಮನಿಂಗ ಭವಾನೇರ (30), ಶಾಂತವ್ವಳ ಪುತ್ರ ಬೀರಪ್ಪ ಸೋಮನಿಂಗ ಭವಾನೇರ (5) ಎಂಬುವರ ಎದೆ, ಕತ್ತಿಗೆ ಭರ್ಜಿಯಿಂದ ಇರಿದು ಹತ್ಯೆ ಮಾಡಿದ್ದು, ತೀವ್ರವಾಗಿ ಗಾಯಗೊಂಡಿದ್ದ ಅವರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಇದೇ ಸಂದರ್ಭದಲ್ಲಿ ಸಿದ್ದಪ್ಪನ ಹೆಂಡತಿ ಬಾಯಕ್ಕ (32), ಪುತ್ರಿ ಗೌರಾಬಾಯಿ (12), ಪುತ್ರ ಅನಿಲ್ (3) ಹಾಗೂ ತಂಗಿಯ ಮಗಳಾದ ರೇಖಾ (6) ಅವರೆಲ್ಲರಿಗೂ ಭರ್ಚಿಯಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಾನೆ. ಅಲ್ಲದೆ ತಾನೂ ತನ್ನ ಕತ್ತಿಗೂ ಭರ್ಚಿಯಿಂದ ಇರಿದುಕೂಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸಿದ್ದಪ್ಪನ ಪುತ್ರನೊಬ್ಬ ತಂದೆಯ ಹುಚ್ಚಾಟದಿಂದ ಗಾಬರಿಯಾಗಿ ಕವಲಗಿ ಗ್ರಾಮಕ್ಕೆ ತೆರಳಿ ಗ್ರಾಮಸ್ಥರಿಗೆ ಸುದ್ದಿ ಮುಟ್ಟಿಸಿದ್ದಾನೆ. ಗಾಯಾಗಳುಗಳನ್ನು ಬಿಜಾಪುರ ಸರ್ಕಾರಿ ದವಾಖಾನೆಗೆ ಸೇರಿಸಲಾಗಿದೆ. ಆಸ್ಪತ್ರೆಯಲ್ಲಿ ಸಿದ್ದಪ್ಪನ ಕುತ್ತಿಗೆಯಲ್ಲಿದ್ದ ಭರ್ಚಿಯನ್ನು ಶಸ್ತ್ರಚಿಕಿತ್ಸೆ ಮಾಡಿ ತೆಗೆಯಲಾಗಿದೆ. ನಂತರ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಿದ್ಧಪ್ಪ, ಆತನ ಹೆಂಡತಿ ಭಾಯಕ್ಕ ಹಾಗೂ ಪುತ್ರಿ ಗೌರಕ್ಕಳ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕಳೆದ ವರ್ಷಗಳಿಂದ ತಲೆದೋರಿದ ದೈಹಿಕ ಸಮಸ್ಯೆಗಳಿಂದ ಸಿದ್ದಪ್ಪ ಕೆಲಸ ಮಾಡಲು ಅಶಕ್ತರಾಗಿದ್ದರು. ಆ ನಂತರ ಮಾನಸಿಕ ಸಮಸ್ಯೆಗಳೂ ಕಾಣಿಸಿಕೊಂಡಿದ್ದವು ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments