ಯಳಂದೂರು: ತಾಲೂಕಿನ ಸಹಿಪ್ರಾ ಶಾಲೆ ವೈ.ಕೆ. ಮೋಳೆ ಉಪ್ಪಾರ ಶಾಲೆಯಲ್ಲಿ ಮಕ್ಕಳಿಗೆ ಉಚಿತವಾಗಿ ಬೆಂಗಳೂರಿನ ಅವಿರತ ಬಳಗದ ವತಿಯಿಂದ ನೋಟ್ಬುಕ್ ವಿತರಿಸಲಾಯಿತು.
ಆರ್. ಹರೀಶ್ ಮಾತನಾಡಿ, ಪೋಷಕರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸುವಂತೆ ಅವರಿಗೆ ಉತ್ತಮ ಶಿಕ್ಷಣವನ್ನು ಕೊಡಿಸಿ, ಉತ್ತಮ ಪ್ರಜೆಯಾಗಿ ಮಾಡಲು ಪೋಷಕರು ಶ್ರಮಿಸುವಂತೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಸಿದ್ದರಾಜು ಮಾತನಾಡಿ, ಕಳೆದ 3 ವರ್ಷಗಳಿಂದ ನಮ್ಮ ಶಾಲೆ ಮತ್ತು ಕೃಷ್ಣಾಪುರ, ಉಪ್ಪಿನಮೋಳೆ, ಕೆ.ಹೊಸೂರು, ರಾಮಾಪುರ ಈ ಶಾಲೆಗಳಿಗೆ ಅವಿರತ ಬಳಗದವರು ವಿದ್ಯಾರ್ಥಿಗಳಿಗೆ ನೋಟ್ಬುಕ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಬಹಳ ಸಂತಸ ಎಂದರು. ಮುಖ್ಯಶಿಕ್ಷಕ ಮಾದೇವಿ, ವೈ.ಎಂ. ಮಂಜುನಾಥ್, ರಂಗಸ್ವಾಮಿ ಅವಿರತ ಬಳಗದ ಸಿಂಧೂ ರಂಗನಾಥ್, ವನಿತಾ ಮಂಜೇಶ್, ರಾಕೇಶ್, ರಘು, ಸಂತೋಷ್, ವಿನೋದ್, ಪ್ರಕಾಶ, ಶಾಲಾ ಶಿಕ್ಷಕರಾದ ಮಲ್ಲಿಕಾರ್ಜುನ, ಬಸವಣ್ಣ, ಮಂಗಳಮ್ಮ, ನೇತ್ರಾವತಿ, ಭಾಗ್ಯ, ಹಾಗೂ ಪೋಷಕರು ಇದ್ದರು.