ಚಿಕ್ಕಮಗಳೂರು: ಜಿಲ್ಲಾ ಕೈಗಾರಿಕಾ ಕೇಂದ್ರ, ಜಿಲ್ಲಾ ಪಂಚಾಯಿತಿ, ಗ್ರಾಮೀಣ ಕೈಗಾರಿಕೆಗಳ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಜ.23ರಂದು ಬೆಳಗ್ಗೆ 11 ಗಂಟೆಗೆ ಮೂಡಿಗೆರೆ ತಾಪಂ ಸಭಾಂಗಣದಲ್ಲಿ ಉದ್ಯಮಶೀಲತಾ ಪ್ರೇರಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.
ಶಾಸಕ ಎಂ.ಪಿ. ಕುಮಾರಸ್ವಾಮಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ತಾಪಂ ಅಧ್ಯಕ್ಷ ಎಂ.ವಿ. ಶೇಷಗಿರಿ ಅಧ್ಯಕ್ಷತೆ ವಹಿಸಲಿದ್ದಾರೆ.
ವಿಧಾನಪರಿಷತ್ ಸದಸ್ಯೆ ಮೋಟಮ್ಮ, ಕರ್ನಾಟಕ ರಾಜ್ಯ ಅರಣ್ಯ ವಸತಿ ಮತ್ತು ವಿಹಾರಧಾಮ ನಿಗಮದ ಅಧ್ಯಕ್ಷ ಎಂ.ಕೆ. ಪ್ರಾಣೇಶ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ವಿ.ಕೆ. ಶಿವೇಗೌಡ, ಅರೆಕುಡಿಗೆ ಶಿವಣ್ಣ, ಎಂ.ಎಸ್.ಅನಂತ್, ಜ್ಯೋತಿ ಹೇಮಶೇಖರ್, ಕವಿತ ಬಿ.ಚಂದ್ರು, ತಾಪಂ ಉಪಾಧ್ಯಕ್ಷೆ ಸುಮಾ ಸುರೇಶ್, ಕೆ.ಜೆ. ಸುರೇಶ್, ಬಿ.ಪಿ. ಶಿವಮೂರ್ತಿ, ಅರುಣ್ ಕುಲಕರ್ಣಿ, ಚನ್ನಬಸಪ್ಪ ಮೇಕಾಲೆ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
---