ದಾವಣಗೆರೆ

16, 17ರಂದು ಶೈಕ್ಷಣಿಕ ಸಮಾವೇಶ

ಹರಪನಹಳ್ಳಿ: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ವತಿಯಿಂದ ಮೈಸೂರು ಜಿಲ್ಲೆಯ ಕೆ.ಆರ್. ನಗರದಲ್ಲಿ ಫೆ.16 ಹಾಗೂ 17ರಂದು ಆಯೋಜಿಸಿರುವ ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶಕ್ಕೆ ಹೋಗಲು ಶಿಕ್ಷಕರಿಗೆ ಓಓಡಿ ( ಅನ್ಯಕಾರ್ಯನಿಮಿತ್ಯ) ಸೌಲಭ್ಯವನ್ನು ಒದಗಿಸಲಾಗಿದೆ.
ಈ ಸಮಾವೇಶಕ್ಕೆ ತೆರಳುವ ಪೂರ್ವಭಾವಿ ಸಭೆ ಕೆಜಿವಿಎಸ್ ತಾಲೂಕು ಘಟಕದ ಆಶ್ರಯದಲ್ಲಿ ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಶನಿವಾರ ಜರುಗಿದ್ದು, ಈ ಕುರಿತು ಚರ್ಚೆ ನಡೆಯಿತು. ಓಓಡಿ ಸೌಲಭ್ಯದ ಬಗ್ಗೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ನಿರ್ದೆಶಕರು ಹೊರಡಿಸದ ಸುತ್ತೊಲೆ ಓದಿದ ಕೆಜಿವಿಎಸ್ ತಾಲೂಕು ಕಾರ್ಯದರ್ಶಿ ಬಿ. ಸದಾಶಿವಪ್ಪ ಅವರು ಹೋಗಿ ಬರಲು ಪ್ರಯಾಣದಿನ ಎಂದು ಫೆ.15 ಹಾಗೂ 18 ಎರಡು ದಿನಗಳನ್ನು ಗಣನೆಗೆ ತೆಗೆದುಕೊಳ್ಳುವುದರಿಂದ ಒಟ್ಟು 4 ದಿನಗಳು ಅನ್ಯ ಕಾರ್ಯನಿಮಿತ್ಯ ಎಂದು ಪರಿಗಣಿಸುತ್ತಾರೆ ಎಂದು ಹೇಳಿದರು.
ಅಲ್ಲಿನ ಸಮಾವೇಶದಲ್ಲಿ ಶಿಕ್ಷಣ ಹಕ್ಕು ಕಾಯ್ದೆ, ಸಿಸಿಇ ವಿಜ್ಞಾನ ಶಿಕ್ಷಣ, ಗಣಿತದ ಚಟುವಟಿಕೆಗಳು, ವಿಜ್ಞಾನ ಸಂಘ ಇತ್ಯಾದಿ ವಿಷಯಗಳ ಬಗ್ಗೆ ಗೋಷ್ಠಿಗಳು ನಡೆಯಲಿದ್ದು, ಹರಪನಹಳ್ಳಿ ತಾಲೂಕಿನಿಂದ ಅಂದಾಜು 40 -50 ಪ್ರತಿನಿಧಿಗಳು ಸಮಾವೇಶಕ್ಕೆ ತೆರಳಲು ತೀರ್ಮಾನಿಸಲಾಯಿತು.
ಕಸಾಪ ಸಹಯೋಗದಲ್ಲಿ ಕಾರ್ಯಕ್ರಮ: ಸಮಾವೇಶದ ನಂತರ ವೈಚಾರಿಕತೆ, ವೈಜ್ಞಾನಿಕ ವಿಚಾರಗಳ ಬಿತ್ತುವ ಕಾರ್ಯಕ್ರಮಗಳನ್ನು ಕಸಾಪ ಸಹಯೋಗದಲ್ಲಿ ಆಯೋಜಿಸಲು ಸಭೆ ನಿರ್ಣಯ ಕೈಗೊಂಡಿತು. ಶಿಕ್ಷಕಿ ಶಕುಂತಲಾ ಬಂಡಸೋಡೆ ಹಾಗೂ ನಿರ್ಮಲಮ್ಮ ಅವರು ಮಹಿಳಾ ದಿನಾಚರಣೆ ದಿನದಂದು  ಮಹಿಳೆಯರಿಗಾಗಿ ಒಂದು ಉತ್ತಮ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ನೀಡಿದ ಸಲಹೆಗೆ ಸಭೆ ಒಪ್ಪಿಗೆ ಸೂಚಿಸಿತು.
ಕೆಜಿವಿಎಸ್ ತಾಲೂಕು ಘಟಕದ ಅದ್ಯಕ್ಷ ಇಸ್ಮಾಯಿಲ್ ಎಲಿಗಾರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಬಿ. ಸದಾಶಿವಪ್ಪ, ರಾಜ್ಯ ಸಮಿತಿ ಸದಸ್ಯ ಸಿ. ಗಂಗಾಧರ, ಜಿಲ್ಲಾ ಸಮಿತಿಯ ಎಸ್. ಬಸವರಾಜ, ಕಸಾಪ ಅಧ್ಯಕ್ಷ ಬಿ. ರಾಮಪ್ರಸಾದ್ ಗಾಂಧಿ, ಪತ್ರಕರ್ತ ಎಸ್.ಎನ್ ಕುಮಾರ, ಕೆ. ಅಂಜಿನಪ್ಪ, ಬಿ. ರಾಜಶೇಖರ, ಮಹಾಲಕ್ಷ್ಮಿ, ಜಿ. ಪದ್ಮಲತಾ, ಅರ್ಜುನ ಪರಸಪ್ಪ, ಸಾ. ದೇವ, ಪಾಂಡುಬಡಿಗೇರ, ನಿರ್ಮಲಮ್ಮ, ಶಕುಂತಲಾ ಬಂಡಸೋಡೆ, ಎಚ್. ಹೂವಣ್ಣ, ಬಿ. ಮಂಜುನಾಥ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯರ ಸಾಮೂಹಿಕೆ ಹತ್ಯೆಗೆ ಸಂಚು: ರೈಫಲ್ ಹಿಡಿದು ಅಮೆರಿಕದ ಹಿಂದೂ ದೇವಸ್ಥಾನಕ್ಕೆ ನುಗ್ಗಿದ್ದ ಶೂಟರ್; ಕೊನೆ ಕ್ಷಣದಲ್ಲಿ ಗನ್ ಜಾಮ್, ಆರೋಪಿ ಬಂಧನ..!

ಶೃಂಗೇರಿ ಮತ ಎಣಿಕೆ Video ನಾಪತ್ತೆ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ತರಾಟೆ..!

ಕೇರಳಂ: ಮಿನಿ ಕೂಪರ್ ಕಾರು ಅಪಘಾತದಲ್ಲಿ ಮೂವರ ಸಾವು, ತಡರಾತ್ರಿಯಲ್ಲಿ ಹಿಂದೂ ಯುವತಿಯರು ಹೊರಗೆ ಹೋಗಿದ್ಯಾಕೆ? ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ

ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಆದಾಯ ಹಂಚಿಕೆ: GST ಮಂಡಳಿಗೆ ರಾಜ್ಯ ಸರ್ಕಾರ ಪ್ರಸ್ತಾವನೆ

ಸ್ಟಿಂಗ್‌ ಆಪರೇಷನ್‌ ಬಗ್ಗೆ ಬೇರೆಯವರು ಮಾತನಾಡುವ ಆಗಿಲ್ಲ ಎನ್ನಲು ನೀವೇನು ಸರ್ವಾಧಿಕಾರಿಯೇ ಪ್ರಿಯಾಂಕ್‌ ಖರ್ಗೆ..?