ದಾವಣಗೆರೆ ತಾಲೂಕು 66- 11 ವಿದ್ಯುತ್ ವಿತರಣಾ ಕೇಂದ್ರದ ದುರ್ಗಾಂಬಿಕಾ ಫೀಡರ್ ಮಾರ್ಗದಲ್ಲಿ ಆರ್ಎಪಿಡಿಆರ್ಪಿ ಕಾಮಗಾರಿ ಹಿನ್ನೆಲೆಯಲ್ಲಿ ಫೆ.14ರಂದು ವಿದ್ಯುತ್ ಪೂರೈಕೆ ವ್ಯತ್ಯಯವಾಗಲಿದೆ. ಅಂದು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಹೊಂಡದ ಸರ್ಕಲ್, ದೊಡ್ಡಪೇಟೆ, ಕಾಳಿಕಾದೇವಿ ರಸ್ತೆ, ಮಹಾರಾಜಪೇಟೆ, ಗಾಂಧಿನಗರ, ಕಾಯಿಪೇಟೆ, ವಸಂತ ರಸ್ತೆ, ಎಂ.ಬಿ. ಕೇರಿ, ವಕ್ಕಲಿಗರಪೇಟೆ, ಚಲುವಾದಿ ಕೇರಿ, ತಾಲೂಕು ಕಚೇರಿ, ಬಸವ ನಗರ ಠಾಣೆ ಸುತ್ತಮುತ್ತ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಎಇಇ ಟಿ. ಶಿವಾಜಿರಾವ್ ತಿಳಿಸಿದ್ದಾರೆ.
ಕೆಜೆಪಿ ಪ್ರತಿಭಟನೆ
ಹದಗೆಟ್ಟ ರಸ್ತೆ, ಕಸ ವಿಲೇವಾರಿ ಸಮಸ್ಯೆ ಸೇರಿದಂತೆ ದಾವಣಗೆರೆ ಪಾಲಿಕೆ ಆಡಳಿತ ವೈಫಲ್ಯ ಖಂಡಿಸಿ ಫೆ.14ರಂದು ಕೆಜೆಪಿ ಜಿಲ್ಲಾ ಘಟಕ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ. ಅಂದು ಬೆಳಿಗ್ಗೆ 11ಕ್ಕೆ ಬೀರಲಿಂಗೇಶ್ವರ ದೇವಸ್ಥಾನದಿಂದ ಎವಿಕೆ ಕಾಲೇಜು, ಅಂಬೇಡ್ಕರ್ ವೃತ್ತದ ಮಾರ್ಗವಾಗಿ ತೆರಳಿ, ಪಾಲಿಕೆಗೆ ಮುತ್ತಿಗೆ ಹಾಕಲಾಗುವುದು. ಬಿ.ಎಸ್. ಜಗದೀಶ, ಬಿ.ಎಂ. ಷಣ್ಮುಖಯ್ಯ, ಕಕ್ಕರಗೊಳ್ಳ. ಕಲ್ಲಿಂಗಪ್ಪ, ಕೆ. ಹೇಮಂತ, ಪರಶುರಾಮನಾಯ್ಕ, ರೇಣುಕಾಸ್ವಾಮಿ, ನಿಟುವಳ್ಳಿ ಬಸವರಾಜ, ಮಟ್ಟಿಕಲ್ಲು ವೀರಭದ್ರಸ್ವಾಮಿ, ಸೈಯದ್ ಶಾಹೀನ್ ಇತರರು ನೇತೃತ್ವ ವಹಿಸುವರು.
ಸಾಧಕರಿಗೆ ಸನ್ಮಾನ
ಸೃಷ್ಟಿ ಪಬ್ಲಿಷರ್ಸ್ನ ನೂತನ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸಲು ನಿರ್ಧರಿಸಲಾಗಿದೆ. ಕಲೆ, ಕ್ರೀಡೆ, ಸಾಹಿತ್ಯ, ಸಾಂಸ್ಕೃತಿಕ, ಸಮಾಜಸೇವೆ, ವೃತ್ತಿ ರಂಗಭೂಮಿ, ವೈದ್ಯಕೀಯ, ಪತ್ರಿಕೋದ್ಯಮ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಮಾ.15ರ ಒಳಗಾಗಿ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಕೆ.ಸಿ. ವಾಗೀಶ, ಸೃಷ್ಟಿ ಪಬ್ಲಿಷರ್ಸ್, ನ.2723- 3, 2ನೇ ಮೇನ್, 3ನೇ ಕ್ರಾಸ್, ಎಂಸಿಸಿ ಬಿ ಬ್ಲಾಕ್, ದಾವಣಗೆರೆ (ಮೊ- 94494- 40090, 77600- 05909)ಗೆ ಸಂಪರ್ಕಿಸಲು ಕೆ.ಸಿ. ವಾಗೀಶ ಕೋರಿದ್ದಾರೆ.
ಸಂಘದ ಸೂಚನೆ
ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದಿಂದ ಪ್ರೌಢಶಾಲೆಗಳ ಚಿತ್ರಕಲಾ ಶಿಕ್ಷಕರ ಪ್ರಗತಿ ಪರಿಶೀಲನಾ ಕಾರ್ಯ ಮತ್ತು ಬೆಂಗಳೂರು ವಿಭಾಗದ ವಿಷಯ ಸಂಪದೀಕರಣಕ್ಕಾಗಿ ಹರಿಹರ ತಾ. ಮಲೆಬೆನ್ನೂರು ಗ್ರಾಮದ ಸರ್ಕಾರಿ ಪಿಯು ಕಾಲೇಜಿನಲ್ಲಿ ಫೆ.15ರಂದು ಸಭೆ ಕರೆಯಲಾಗಿದೆ. ಮಾಹಿತಿಗೆ ಮೊ- 99801- 10894, 99723- 42660ಗೆ ಸಂಪರ್ಕಿಸಲು ಕಾರ್ಯದರ್ಶಿ ಮೌನೇಶ್ವರ ರುದ್ರಪ್ಪ ಪತ್ತಾರಿ ಮನವಿ ಮಾಡಿದ್ದಾರೆ.