ದಾವಣಗೆರೆ

ಅನಧಿಕೃತ ಗಣಿಗಾರಿಕೆ ಮೊಕದ್ದಮೆ

ದಾವಣಗೆರೆ:  ದಾವಣಗೆರೆ, ಹರಪನಹಳ್ಳಿ ತಾಲೂಕಿನ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸುತ್ತಿದ್ದ ಪ್ರದೇಶಗಳ ಮೇಲೆ ದಾಳಿ ನಡೆಸಿ, ಒಟ್ಟು 26 ಜನರ ಮೇಲೆ ಹಿರಿಯ ಭೂ ರ್ವಿಜನಿಗಳು, ತಾಂತ್ರಿಕ ಅಧಿಕಾರಿಗಳು, ಕಂದಾಯ, ಪೊಲೀಸ್ ಅಧಿಕಾರಿಗಳ ತಂಡವು ಮೊಕದ್ದಮೆ ದಾಖಲಿಸಿದೆ.
ಗಣಿಗಾರಿಕೆ ನಡೆಸುತ್ತಿದ್ದ ಸ್ಥಳದ ಮೇಲೆ ಭೂ ವಿಜ್ಞಾನಿ ಮತ್ತು ತಾಂತ್ರಿಕ ಅಧಿಕಾರಿಗಳನ್ನು ಒಳಗೊಂಡ ವಿವಿಧ ಇಲಾಖೆ ತಂಡಗಳು ಕಾರ್ಯಾಚರಣೆ ನಡೆಸಿ, ನಿಯಮ ಉಲ್ಲಂಘಿಸಿ, ಗಣಿಗಾರಿಕೆಯಲ್ಲಿ ತೊಡಗಿದ್ದ ಹರಪನಹಳ್ಳಿ ತಾಲೂಕಿನ 14 ಜನ ಹಾಗೂ ದಾವಣಗೆರೆ ತಾಲೂಕಿನ 12 ಜನರ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ.
ಯಾವುದೇ ಅನಧಿಕೃತ ಅಥವಾ ನಿಯ ಮ ಬಾಹಿರ ಗಣಿಗಾರಿಕೆ ಕಾನೂನಿಗೆ ವಿರುದ್ಧವಾಗಿದ್ದು, ಜಿಲ್ಲೆಯ ಯಾವುದೇ ಪ್ರದೇಶದಲ್ಲಿ ನಿಯಮ ಬಾಹಿರವಾಗಿ ಕಲ್ಲು ಗಣಿಗಾರಿಕೆ ಯಲ್ಲಿ ತೊಡಗಿರುವುದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.
ಲೋಕಾಯುಕ್ತ ನ್ಯಾಯಮೂರ್ತಿ ಪ್ರವಾಸ: ಅರ್ಜಿ ಸ್ವೀಕಾರ
ದಾವಣಗೆರೆ: ಲೋಕಾಯುಕ್ತ ನ್ಯಾಯಮೂರ್ತಿ ಡಾ.ವೈ.ಭಾಸ್ಕರರಾವ್  22 ರಂದು ಬೆಳಗ್ಗೆ 10.30ಕ್ಕೆ ಜಿಲ್ಲೆಯ ವ್ಯಾಪ್ತಿಯ ಅರ್ಜಿಗಳು ಮತ್ತು ಸಾರ್ವಜನಿಕ ದೂರು ಅರ್ಜಿಗಳ ವಿಚಾರಣೆ ಕೈಗೊಳ್ಳಬೇಕಾದ ಕಾರ್ಯಗಳ ಬಗ್ಗೆ ಜಿಲ್ಲೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವರು. ಸಾರ್ವಜನಿಕರ ಅರ್ಜಿಗಳನ್ನು ಸ್ವೀಕರಿಸಿ, ವಿಲೆ ಮಾಡುವರು. ಲೋಕಾಯುಕ್ತ ಕಚೇರಿಯ ನಿಬಂಧಕ ಎಚ್.ಆರ್. ದೇಶಪಾಂಡೆ ಸಹ ಆಗಮಿಸುವರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೇರಳದಲ್ಲಿ ಖಾತೆ ಹಂಚಿಕೆ ಗೊಂದಲ: ಕಾಂಗ್ರೆಸ್ ಹೈಕಮಾಂಡ್ ಸಲಹೆ ತಿರಸ್ಕರಿಸಿದ CM ಸತೀಶನ್; ಭಿನ್ನಮತ ಸ್ಫೋಟ..!

WTCಯಲ್ಲಿ ಭಾರತಕ್ಕೆ ದೊಡ್ಡ ಹಿನ್ನಡೆ: ಪಾಕಿಸ್ತಾನವನ್ನು 2-0 ಅಂತರದಿಂದ ಸೋಲಿಸಿ Team Indiaನ ಹಿಂದಿಕ್ಕಿದ ಬಾಂಗ್ಲಾ!

ನಮ್ಮ ನೋವನ್ನು ಆನಂದಿಸುತ್ತೀರಾ: ನನಗೆ ವಯಸ್ಸಾಗಿದೆ, ಆದರೆ ಹೋರಾಡೋದು ಮರೆತಿಲ್ಲ; ಸಲ್ಮಾನ್ ಖಾನ್ ಎಚ್ಚರಿಕೆ!

ಆನೇಕಲ್‌ನಲ್ಲಿ ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ರೈತರು, KRS ತೀವ್ರ ವಿರೋಧ!

ನಿಜಕ್ಕೂ ನಮ್ಮದು F…Good Team: ಲೈವ್​ನಲ್ಲೇ 'ಅಶ್ಲೀಲ ಪದ' ಬಳಸಿದ ರಿಷಭ್ ಪಂತ್, ವ್ಯಾಪಕ ಟೀಕೆ, Video!

SCROLL FOR NEXT