ನಾಳೆ ಪುಣ್ಯಾರಾಧನೆ
ಗಜೇಂದ್ರಗಡ: ಸಮೀಪದ ಲಕ್ಕಲಕಟ್ಟಿ ಗ್ರಾಮದಲ್ಲಿ ಗುರು ವೀರಭದ್ರ ಸ್ವಾಮಿಗಳ 60ನೇ ಪುಣ್ಯಾರಾಧನೆ ಸಮಾರಂಭ ಅಭಿನವ ಗುರುಪ್ಪಯ್ಯ ಸ್ವಾಮೀಜಿ, ಚಿದಾನಂದ ಸ್ವಾಮೀಜಿ ಹಾಗೂ ಮುರನಾಳ ಮಠದ ಮಳೆರಾಜೇಂದ್ರ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಏ. 3ರಂದು ಆಯೋಜಿಸಲಾಗಿದೆ. ಪುಣ್ಯಾರಾಧನೆ ಪ್ರಯುಕ್ತ ವಿಶೇಷ ಪೂಜೆ ಹಾಗೂ ಕೀರ್ತನೆ ನಡೆಯಲಿದ್ದು, ಗ್ರಾಮದ ಗೆಳೆಯರ ಬಳಗ ವತಿಯಿಂದ ಮುಕ್ತ ವಾಲಿಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.