ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಪರೀಕ್ಷೆ ಸುವ್ಯವಸ್ಥಿತ

Vishwanath S
Updated On : 2 Apr 2013, 10:55 am

ನರೇಗಲ್ಲ: ಸ್ಥಳೀಯ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಪ್ರೌಢಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಸುವ್ಯವಸ್ಥಿತವಾಗಿ ಜರುಗಿವೆ ಎಂದು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಎಸ್.ಎಚ್. ಅಬ್ಬಿಗೇರಿ ತಿಳಿಸಿದರು. ಪಟ್ಟಣದ ಎರಡು ಪರೀಕ್ಷಾ ಕೇಂದ್ರಗಳಾದ ಅನ್ನದಾನ ವಿಜಯ ಬಾಲಕರ ಪ್ರೌಢಶಾಲೆ ಮತ್ತು ಅನ್ನದಾನ ವಿಜಯ ಬಾಲಕಿಯರ ಪ್ರೌಢಶಾಲೆಗಳಲ್ಲಿ 12 ಶಾಲೆಗಳ ಒಟ್ಟು 616 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ರೋಣ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಪಾಟೀಲ ಹಾಗೂ ಜಾಗೃತ ದಳದ ಸಿಬ್ಬಂದಿ ಹಾವೇರಿ ಡಯಟ್ ಉಪನ್ಯಾಸಕಿ ಎಸ್.ವೈ. ಅಂತರವಳ್ಳಿ ಹಾಜರಿದ್ದರು.

ಇಂದು ಸಮಾರೋಪ
ಗದಗ:
ಕನಕದಾಸ ಶಿಕ್ಷಣ ಸಮಿತಿಯ ಕೆಎಸ್.ಎಸ್ ಕಲಾ, ವಾಣಿಜ್ಯ, ವಿಜ್ಞಾನ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕೇಂದ್ರದ ಸಾಂಘಿಕ ಕ್ರೀಡಾ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಚಟುವಟಿಕೆ ಸಮಾರೋಪ ಸಮಾರಂಭ ಏ. 2ರಂದು ಬೆಳಗ್ಗೆ 11 ಗಂಟೆಗೆ ಜರುಗಲಿದೆ. ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ. ಬಿ.ಎಫ್. ದಂಡಿನ ವಹಿಸುವರು. ಅತಿಥಿಗಳಾಗಿ ಕವಿವಿ ಧಾರವಾಡದ ಮೌಲ್ಯಮಾಪನದ ಕುಲಸಚಿವ ಡಾ.  ಕೆ.ಆರ್. ದುರ್ಗಾದಾಸ್ ಆಗಮಿಸುವರು. ಜಿಪಂ ಮಾಜಿ ಉಪಾಧ್ಯಕ್ಷೆ ಶಕುಂತಲಾ ದಂಡಿನ ಪಾರಿತೋಷಕ ವಿತರಿಸುವರು ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಎಂ.ಎನ್. ಕಾಮನಹಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೀರು ಪೂರೈಕೆ ಮಾಹಿತಿ
ಗದಗ:
ನಗರದ ವಿಎನ್.ಟಿ ರಸ್ತೆ, ಜವುಳ ಭಾಗ, ಚವ್ಹಾಣ ಲೈನ್, ಕಾಗದಗೇರಿ ಓಣಿ, ಹಂಪಿನ ಗಲ್ಲಿ, ಎಲಿಗಾರ ಪ್ಲಾಟ್, ಶಿವಪ್ಪನ ಮಠ, ಬನ್ನಿಕಟ್ಟೆ ಲೈನ್, ಕೊಟ್ಟೂರ ಲೈನ್, ಹನುಮನ ಗರಡಿ, ವಿಭೂತಿ ಓಣಿ, ಪಲ್ಲೇದವರ ಓಣಿ, 2ನೇ ನಂ. ಶಾಲೆ, ನರಿಬಾವಿ ಓಣಿ, ಅರಸಿದ್ದಿಯವರ ಲೈನ್ ಈ ಭಾಗಗಳಲ್ಲಿ ಮಂಗಳವಾರ ತುಂಗಭದ್ರಾ ನದಿ ನೀರು ಪೂರೈಕೆ ಮಾಡಲಾಗುವುದು ಎಂದು ನಗರಸಭೆಯ ಪ್ರಕಟಣೆ ತಿಳಿಸಿದೆ.

ಅಕ್ರಮ ಸಾರಾಯಿ ವಶ
ನರಗುಂದ:
ತಾಲೂಕಿನ ಚಿಕ್ಕನರಗುಂದ ಗ್ರಾಮದ ಕೆರೆಯ ದಂಡೆ ಮೇಲೆ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಅನಿಲ್ ಮುನವಳ್ಳಿ ಮಾರಾಟ ಮಾಡಲು ತಂದ 111 ಬಾಟಲ್ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಶಿವಗಂಗಮ್ಮ ನಿಧನ
ನರೇಗಲ್ಲ:
ಪಟ್ಟಣದ ನಿವಾಸಿ ಶಿವಗಂಗಮ್ಮ ಕಳಕೊಣ್ಣವರ (69) ನಿಧನರಾಗಿದ್ದಾರೆ. ಅವರಿಗೆ ನಾಲ್ವರು ಗಂಡು ಮಕ್ಕಳು, ಓರ್ವ ಹೆಣ್ಣು ಮಗಳು ಹಾಗೂ ಅಪಾರ ಬಂಧುಗಳು ಇದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement