ನಾಳೆ ಅಹವಾಲು ಸ್ವೀಕಾರ
ಗದಗ: ಜಿಲ್ಲೆಯ ಮಾಜಿ ಸೈನಿಕರ, ಮಾಜಿ ಸೈನಿಕರ ಅವಲಂಬಿತರ ಕುಂದು ಕೊರತೆಗಳನ್ನು ವಿಚಾರಿಸಲು ಹಾಗೂ ಅರ್ಜಿ ಅಹವಾಲುಗಳನ್ನು ಸ್ವೀಕರಿಸಲು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಧಾರವಾಡದ ಸಿಬ್ಬಂದಿಗಳು ಏ. 4ರಂದು ನಗರದಲ್ಲಿರುವ ಪುನರ್ವಸತಿ ಇಲಾಖೆಗೆ ಭೇಟಿ ನೀಡಲಿದ್ದಾರೆ. ಆ ದಿನದಂದು ಮಾಜಿ ಸೈನಿಕರು, ಮಾಜಿ ಸೈನಿಕರ ಅವಲಂಬಿತರು ತಮ್ಮ ಮೂಲ ಸೇನಾ ದಾಖಲೆಗಳು ಹಾಗೂ ಈ ಇಲಾಖೆಯಿಂದ ನೀಡಿದ ಗುರುತಿನ ಚೀಟಿಯೊಂದಿಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5.30 ಗಂಟೆಯ ಒಳಗಾಗಿ ಭೇಟಿ ಆಗಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.