ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಮಹಿಳೆಯರು ದೃಢ ಸಂಕಲ್ಪ ಮಾಡಿ: ಶೀಲವೇರಿ

Vishwanath S
Updated On : 3 Apr 2013, 10:43 am

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಏ. 2
ದೃಢ ಸಂಕಲ್ಪದ ಜತೆಗೆ ಆತ್ಮಸ್ಥೈರ್ಯದಿಂದ ಸಂಘಟಿತರಾದಾಗ ಮಾತ್ರ ಸಮಾಜದಲ್ಲಿ ಮಹಿಳೆ ಪ್ರಗತಿಹೊಂದಲು ಸಾಧ್ಯ ಎಂದು ಪದ್ಮಾವತಿ ಮಹಿಳಾ ಮಂಡಳ ಅಧ್ಯಕ್ಷೆ ವಿಮಲಾ ಶೀಲವೇರಿ ಹೇಳಿದರು.  
ಈಚೆಗೆ ಅವರು ಸ್ಥಳೀಯ ಕೆಳಗಲ ಪೇಟೇಯ ಮಾರುತಿ ದೇವಸ್ಥಾನದಲ್ಲಿ ಪದ್ಮಶಾಲಿ ಸಮಾಜ ಹಾಗೂ ಪದ್ಮಾವತಿ ಮಹಿಳಾ ಮಂಡಳದಿಂದ ನಡೆದ ವಿಶ್ವ ಮಹಿಳಾ ದಿನಾಚರಣೆ ಮತ್ತು ಹಾಸ್ಯ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದು ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲರಾಗಲು ಹಲವಾರು ಅವಕಾಶಗಳಿವೆ. ಸಿಕ್ಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಮುನ್ನಡೆದಾಗ ಮಾತ್ರ ಮಹಿಳೆ ಅಭಿವೃದ್ಧಿ ಹೊಂದಲು ಸಾಧ್ಯ. ಈ ನಿಟ್ಟಿನಲ್ಲಿ ಮಹಿಳೆಯರು ಕೀಳುರಿಮೆ ತೊರೆದು ಸಮಾಜದ ಮುಖ್ಯ ವಾಹಿನಿಗೆ ಬರಲು ಯತ್ನಿಸಿ ಎಂದರು.
ಪುರಸಭೆ ಸದಸ್ಯೆ ಸುಜಾತಾ ಚುಂಚಾ ಮಾತನಾಡಿ, ಮಹಿಳೆ ಪುರುಷರಷ್ಟೇ ಸಮನಾಗಿ ಎಲ್ಲ ರಂಗದಲ್ಲಿ ಪ್ರಗತಿ ಸಾಧಿಸಿದ್ದಾಳೆ. ಆದರೆ, ಸಮಾಜ ಮಹಿಳೆಯ ಪ್ರತಿಭೆ ಗುರುತಿಸುವಲ್ಲಿ ಹಿಂದೇಟು ಹಾಕುತ್ತಿರುವುದು ವಿಷಾದನೀಯ. ಸಂವಿಧಾನ ಮಹಿಳೆಗೆ ಸಮಾನತೆ ಹಕ್ಕು ನೀಡಿದರೂ ವ್ಯವಸ್ಥೆಯ ಲೋಪದಿಂದಾಗಿ ಕಾರ್ಯರೂಪಕ್ಕೆ ಬರದಿರುವುದು ಮಹಿಳಾ ಸಮುದಾಯಕ್ಕೆ ಬೇಸರ ಮೂಡಿಸಿದೆ ಎಂದರು.
ಪ್ರಮೀಳಾ ಕೊಂಗಾರಿ, ಪದ್ಮಾವತಿ ಮಹಿಳಾ ಮಂಡಳದ ಕಾರ್ಯದರ್ಶಿ ಹೇಮಾ ಚಿಲಕಾ, ಶಿಕ್ಷಕಿ ಸಾವಿತ್ರಿ ನೀಲಿ, ನಾರಾಯಣಮ್ಮ ಬಡಗಲ್, ಸೀತಮ್ಮ ನರಾಲ, ಮೀನಾಕ್ಷಿ ಚುಂಚಾ, ಕೊಟ್ರೇಶ ಚಿಲಕಾ, ಶಿಕ್ಷಕ ಎಂ.ಎಂ. ಕೆಲೂರ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement