ರೋಣದಲ್ಲಿ ಲಿಂಗಾಯತರ ಪ್ರಾಬಲ್ಯ
ಕನ್ನಡಪ್ರಭ ವಾರ್ತೆ, ಗದಗ, ಏ. 2
ಜಿಲ್ಲೆಯಲ್ಲಿಯೇ ಅತ್ಯಂತ ದೊಡ್ಡ ಕ್ಷೇತ್ರ ಹಾಗೂ ಹೆಚ್ಚು ಮತದಾರರನ್ನು ಹೊಂದಿರುವ ಕ್ಷೇತ್ರವೆಂಬ ಹೆಗ್ಗಳಿಕೆಗೆ ರೋಣ ಪಾತ್ರವಾಗಿದೆ. ಕ್ಷೇತ್ರದಲ್ಲಿ ಅತ್ಯಂತ ಹೆಚ್ಚಿನ ಮತಗಳನ್ನು ಹೊಂದಿರುವವರು ಲಿಂಗಾಯತರು ಹಾಗಾಗಿ ಪ್ರತಿ ಚುನಾವಣೆಯಲ್ಲಿಯೂ ಇವರ ಮತಗಳೇ ನಿರ್ಣಾಯಕವಾಗಿವೆ.
2004 ಮತ್ತು 2008 ರಲ್ಲಿ ಇವುಗಳ ಆಧಾರದಲ್ಲಿಯೇ ಬಿಜೆಪಿಗೆ ಗೆಲವು ಲಭಿಸಿದ್ದು, ಈ ಬಾರಿಯೂ ಲಿಂಗಾಯಿತ ಮತದಾರರು ಯಾವ ಪಕ್ಷವನ್ನು ಬೆಂಬಲಿಸುತ್ತಾರೆ. ಆ ಪಕ್ಷ ಗೆಲುವಿನ ದಡ ಸೇರುವುದರಲ್ಲಿ ಯಾವುದೇ ಸಂಶಯವಿಲ್ಲ.
ರೋಣವು ಕರ್ನಾಟಕ ಏಕೀಕರಣಕ್ಕೆ ಚಾಲನೆ ನೀಡಿದ ಅಂದಾನಪ್ಪ ದೊಡ್ಡಮೇಟಿ ಅವರಂತಹ ನಾಯಕರನ್ನು ರಾಜ್ಯಕ್ಕೆ ಕೊಡುಗೆಯಾಗಿ ನೀಡಿದ ಕ್ಷೇತ್ರವಾಗಿದ್ದು, ಇಲ್ಲಿನ ಮತದಾರರು ರಾಜ್ಯದಲ್ಲಿ ಯಾವ ಸರ್ಕಾರ ಆಡಳಿತದಲ್ಲಿರುತ್ತದೆ ಅದೇ ಪಕ್ಷದವರನ್ನೇ ಶಾಸಕರನ್ನಾಗಿ ಮಾಡಿದ ಇತಿಹಾಸವನ್ನು ಹೊಂದಿದ್ದಾರೆ.
ಹಲವರ ಭವಿಷ್ಯಕ್ಕೆ ನಾಂದಿ: ಹಲವಾರು ಘಟನಾನುಘಟಿ ನಾಯಕರಿಗೆ ರಾಜಕೀಯ ನೆಲೆಯನ್ನು ಕಲ್ಪಿಸುವುದರ ಜತೆಗೆ ಅವರ ಭವಿಷ್ಯವನ್ನು ಬರೆದಿದ್ದು, ಅಧಿಕಾರಕ್ಕೆ ಬಂದವರು ಸಾರ್ವಜನಿಕರಿಂದ, ಅಭಿವೃದ್ಧಿ ಕಾಮಗಾರಿಗಳಿಂದ ದೂರವಾಗುತ್ತಿದ್ದಾರೆ ಎನ್ನುವ ಚಿತ್ರಣ ಕಂಡು ಬರುತ್ತಿದ್ದಂತೆ, ಚುನಾವಣೆಯಲ್ಲಿ ಅವರನ್ನು ಸೋಲಿಸಿ ಮನೆಗೆ ಕಳಿಸಿದ ಖ್ಯಾತಿ ಇಲ್ಲಿನ ಜನತೆಗಿದೆ.
ಲಿಂಗಾಯತರ ಪ್ರಾಬಲ್ಯ: ಈ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚಿನ ಮತಗಳನ್ನು ಹೊಂದಿರುವವರು ಲಿಂಗಾಯತರು ಹಾಗಾಗಿ ಪ್ರತಿ ಚುನಾವಣೆಯಲ್ಲಿಯೂ ಲಿಂಗಾಯಿತ ಮತಗಳೇ ನಿರ್ಣಾಯಕವಾಗಿವೆ. 2004 ಮತ್ತು 2008ರಲ್ಲಿ ಇವುಗಳ ಆಧಾರದಲ್ಲಿಯೇ ಬಿಜೆಪಿಗೆ ಗೆಲವು ಲಭಿಸಿದ್ದು, ಈ ಬಾರಿಯೂ ಲಿಂಗಾಯತ ಮತದಾರರು ಯಾವ ಪಕ್ಷವನ್ನು ಬೆಂಬಲಿಸುತ್ತಾರೆ. ಆ ಪಕ್ಷ ಗೆಲುವಿನ ದಡ ಸೇರುವುದರಲ್ಲಿ ಯಾವುದೇ ಸಂಶಯವಿಲ್ಲ.
ಜಾತಿವಾರು ಮತಗಳು...
ರೋಣ ವಿಧಾನಸಭಾ ಕ್ಷೇತ್ರದಲ್ಲಿ ಪಂಚಮಸಾಲಿ 53130, ಜಂಗಮ 3560, ಬಣಜಿಗ 14751, ರೆಡ್ಡಿ 12147, ಸಾದರ ಲಿಂಗಾಯಿತ 5102, ಗಾಣಿಗೇರ 17458, ಕುಡುಒಕ್ಕಲಿಗ 4310, ಕುರುಬ 32987, ಹಿಂದುಳಿದ ವರ್ಗ (ವಿವಿಧ ಒಳಪಂಗಡ ಸೇರಿ) 44120, ಎಸ್ಟಿ 17941, ಬ್ರಾಹ್ಮಣ 5120, ಮುಸ್ಲಿಂ 41871, ಕ್ರಿಶ್ಚಿಯನ್ 412, ಗಂಗಾಮತ 7910, ಗೊಲ್ಲರು, 591, ಉಡುಪಿ ಬ್ರಾಹ್ಮಣರು 4971, ಕುಂಬಾರ 5897, ವಿಶ್ವಕರ್ಮ 7410, ವೈಶ್ಯರು 810, ಹೀಗೆ ರೋಣ ಕ್ಷೇತ್ರದಲ್ಲಿ ಜಾತಿವಾರು ಮತಗಳಿದ್ದು, ಅಭ್ಯರ್ಥಿಗಳ ಜಾತಿಯೂ ಫಲಿತಾಂಶದ ಮೇಲೆ ನೇರ ಪರಿಣಾಮ ಬೀರಲಿದೆ ಎನ್ನುವ ಲೆಕ್ಕಚಾರವೂ ಕ್ಷೇತ್ರದಾದ್ಯಂತ ಬಿರುಸಿನ ರಾಜಕೀಯ ಚರ್ಚೆಗೆ ಕಾರಣವಾಗಿದೆ.
-ಶಿವಕುಮಾರ ಕುಷ್ಟಗಿ