ಪರಿಶ್ರಮದ ಪ್ರಯತ್ನವೇ ಪ್ರತಿಭೆ: ದುರ್ಗಾದಾಸ್
ಗದಗ: ನಮ್ಮ ಪರಿಸರದಲ್ಲಿ ಸಿಗುವ ಅವಕಾಶಗಳನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳುವ ಮೂಲಕ ಪರಿಶ್ರಮದಿಂದ ಕಲಿತಲ್ಲಿ ಅದುವೇ ಅವನ ಜೀವನದ ಸಾಧನೆಗೆ ಸಹಕಾರಿಯಾಗಲಿದೆ ಎಂದು ಕವಿವಿಯ ಮೌಲ್ಯಮಾಪನ ಕುಲಸಚಿವ ಡಾ.ಕೆ.ಆರ್. ದುರ್ಗಾದಾಸ್ ಹೇಳಿದರು. ಸ್ಥಳಿಯ ಕೆಎಸ್ಎಸ್ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಸಾಧನೆ ಮುಂದಿಟ್ಟುಕೊಂಡು ಗುರಿಗೆ ಸಂಕಲ್ಪ ಮಾಡಿಕೊಳ್ಳಬೇಕು. ಒಳ್ಳೆಯ ಸಾಧನೆ ಮಾಡಲು ನಮ್ಮ ಮಾತು, ಸ್ವಭಾವ, ವಿವೇಕ, ಸಂಸ್ಕಾರಗಳು ನಿರ್ದೇಶನ ಮಾಡುತ್ತವೆ ಎಂದರು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಬಿ.ಎಫ್. ದಂಡಿನ ಮಾತನಾಡಿದರು. ಪಿಎಚ್ಡಿ ಪದವಿ ಪಡೆದ ಡಾ.ಪಿ.ಬಿ. ಹಿರೇಮಠ, ಸಾಹಿತ್ಯಶ್ರೀ ಪ್ರಶಸ್ತಿ ಪಡೆದ ಡಾ.ವಿ.ಬಿ. ಹಿರೇಮಠ, ಸುವರ್ಣ ಪದಕ ಪಡೆದ ಪ್ರಸನ್ನ ತಳ್ಳಿ, ಪ್ರತಿಭಾವಂತ ವಿದ್ಯಾರ್ಥಿಗಳಾದ ಇಸ್ರಾರಬಾನು ಬಳ್ಳಾರಿ, ವಿ.ಡಿ. ಬೆಳ್ಳಿ, ಅಶೋಕ ತೋಟದ, ದಿಲೀಪ ಮುತಗಾರ, ಬಸವರಾಜ ಅಣ್ಣಿದಗೇರಿ, ಶಿವಾನಂದ ಬೇಲೇರಿ ಅವರನ್ನು ಸನ್ಮಾನಿಸಲಾಯಿತು. ಡಾ.ತಿವಾರಿ, ಎನ್ನೆಸ್ಸೆಸ್ ಅಧಿಕಾರಿ ಪ್ರೊ.ಎಂ.ಬಿ. ಹಳ್ಳಿ, ಡಾ.ಕೆ.ಎನ್. ಕಾರಬಾರಿ, ಎಚ್.ಎಂ. ಮುನಿಸೊನ್ನೆಗೌಡ, ಎಸ್.ಎನ್. ಜಾಲಿಹಾಳ, ಐ.ಎಸ್. ದೊಡ್ಡಮನಿ, ಕೆ.ಎನ್. ಬಳ್ಳಾರಿ ಇದ್ದರು. ಕಾಲೇಜಿನ ಪ್ರಾಚಾರ್ಯ ಎಂ.ಎನ್. ಕಾಮನಹಳ್ಳಿ ಸ್ವಾಗತಿಸಿದರು. ಪ್ರೊ.ಬಿ.ವಿ. ರಾಧಾಕೃಷ್ಣ ನಿರೂಪಿಸಿದರು. ಪ್ರೊ.ಜಿ.ಸಿ. ಜಂಪಣ್ಣವರ ವಂದಿಸಿದರು.