ಮುದಗಲ್ಲಗೆ ಸನ್ಮಾನ
ಗದಗ: ಈಚೆಗೆ ನಡೆದ ನಗರಸಭೆಯ ಚುನಾವಣೆಯಲ್ಲಿ ಆಯ್ಕೆಯಾದ ಮೇಘಾ ಮುದಗಲ್ಲ ಅವರನ್ನು ಶಂಕರಾಚಾರ್ಯ ಯುವಕ ಮಂಡಳದ ವತಿಯಿಂದ ಸನ್ಮಾನಿಸಲಾಯಿತು. ರಾಮಚಂದ್ರ ಮೋನೆ, ವಿಜಯಾ ವೈದ್ಯ, ಸುಧಾ ಮೋನೆ, ರಮ್ಯ ಪೂಜಾರ, ದತ್ತಪ್ರಸನ್ನ ಪಾಟೀಲ, ರಾಮಚಂದ್ರ ಪೂಜಾರ, ಜಿ.ವ್ಹಿ. ಕೌಜಲಗಿ, ರವಿ ಪೂಜಾರ, ದತ್ತಂಭಟ್ಟ ತೆಂಬದಮನಿ, ಮಾಲತೇಶಭಟ್ಟ ಜೋಶಿ, ರಮೇಶ. ಪೂಜಾರ, ಎಸ್.ಎಲ್. ಕುಲಕರ್ಣಿ, ಸುನೀಲ ತೆಂಬದಮನಿ, ಆನಂದ ಕುಲಕರ್ಣಿ, ಸಂತೋಷ ಕುಲಕರ್ಣಿ ಮುಂತಾದವರು ಹಾಜರಿದ್ದರು.
ಇಂದು ವಾರ್ಷಿಕ ಸ್ನೇಹ ಸಮ್ಮೇಳನ
ಗದಗ: ಜ. ತೋಂಟದಾರ್ಯ ವಿದ್ಯಾಪೀಠದ ಬಸವೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಏ. 5ರಂದು ಬೆಳಗ್ಗೆ 10 ಗಂಟೆಗೆ ನಗರದ ತೋಂಟದ ಸಿದ್ಧಲಿಂಗೇಶ್ವರ ಕಲ್ಯಾಣ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ. ಶಾಸಕ ಶ್ರೀಶೈಲಪ್ಪ ಬಿದರೂರ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಹಂಪಿಯ ಕವಿವಿಯ ಕುಲಪತಿ ಡಾ,ಹಿ.ಚಿ. ಬೋರಲಿಂಗಯ್ಯ ಹಾಗೂ ಜ. ತೋಂಟದಾರ್ಯ ವಿದ್ಯಾಪೀಠದ ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟರ ಆಗಮಿಸುವರು ಎಂದು ಕಾಲೇಜಿನ ಪ್ರಾಚಾರ್ಯ ಬಿ.ಬಿ. ಗೌಡರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಕ್ಕಳ ನೀತಿ ಕಥೆಗೆ ಆಹ್ವಾನ
ಗದಗ: ಇಲ್ಲಿನ ಮೆಹಬೂಬ ಪ್ರಕಾಶನ ರಾಜ್ಯ ಮಟ್ಟದ ಸ್ವರಚಿತ ಮಕ್ಕಳ ನೀತಿ ಕಥಾ ಸ್ಪರ್ಧೆಯನ್ನು ಸಹಕಾರ ತತ್ವದ ಅಡಿಯಲ್ಲಿ ಹಮ್ಮಿಕೊಂಡಿದೆ. ಮಕ್ಕಳ ನೀತಿ ಕಥೆಗಳು, ದೇಶಪ್ರೇಮ, ನಾಡು-ನುಡಿಯ ಪ್ರೇಮ, ಸ್ನೇಹ, ಜಾಣ್ಮೆ, ಪ್ರೀತಿ, ತ್ಯಾಗ, ಮಕ್ಕಳ ಜಾಣ್ಮೆ, ಸಾಧನೆ, ರೀತಿ-ನೀತಿ, ಬಲಿದಾನ ಕುರಿತು ಮಕ್ಕಳ ನೀತಿ ಕಥೆಗಳನ್ನು ಬರೆದು ಕಳುಹಿಸಬೇಕು. ಪ್ರತಿ ಕಥೆ 250 ಪದಗಳು ಮೀರದಂತಿರಲಿ. ಗರಿಷ್ಠ ಎರಡು ಕಥೆ ಕಳುಹಿಸಬಹುದು. ಪ್ರತ್ಯೇಕ ಹಾಳೆಯಲ್ಲಿ ಕಥೆಗಾರರ ಹೆಸರು, ವಿಳಾಸ, ಪರಿಚಯ, ದೂರವಾಣಿ ಸಂಖ್ಯೆ, ಭಾವಚಿತ್ರ ಲಗತ್ತಿಸಿ, ಏ. 15ರೊಳಗಾಗಿ ಸಂಪಾದಕರು, ತಯಬ್ ಅಲಿ ಹೊಂಬಳ, ಕಲ್ಮೇಶ್ವರ ಬೆರಳಚ್ಚು ವಿದ್ಯಾಲಯ, ಹಾತಲಗೇರಿ ನಾಕಾ, ಜೆ.ಟಿ. ಕಾಲೇಜು ರಸ್ತೆ, ಗದಗ-582101 ಇಲ್ಲಿಗೆ ಕಳಿಸಬೇಕು. ಅತ್ಯುತ್ತಮವಾದ ಮೂರು ಕಥೆಗಳ ಲೇಖಕರಿಗೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.
ನೀರು ಪೂರೈಕೆ ಮಾಹಿತಿ
ಗದಗ: ನಗರದ ಬಲೂನ್ ಆಫೀಸ್, ಮುಳಗುಂದ ರಸ್ತೆ, ಕೃಷ್ಣ ಹೊಂಬಾಳಿ ಲೈನ್, ಸ್ಟೇಡಿಯಂ ಸುತ್ತಮುತ್ತ, ಕೆ.ಸಿ. ರಾಣಿ ರಸ್ತೆ, ಸೋನಿಯವರ ಲೈನ್, ಟ್ಯಾಗೋರ ರಸ್ತೆ ಅರ್ಧ ಭಾಗ, ವಕೀಲ ಚಾಳ ಅರ್ಧ ಭಾಗ, ವಿವೇಕಾನಂದ ರಸ್ತೆಯ ಕೆಲವು ಭಾಗಗಳಲ್ಲಿ ಶುಕ್ರವಾರ ತುಂಗಭದ್ರಾ ನದಿ ನೀರು ಪೂರೈಕೆ ಮಾಡಲಾಗುವುದು ಎಂದು ನಗರಸಭೆಯ ಪ್ರಕಟಣೆ ತಿಳಿಸಿದೆ.
ಅಕ್ರಮ ಸಾರಾಯಿ: ಆರೋಪಿ ವಶ
ಶಿರಹಟ್ಟಿ: ತಾಲೂಕಿನ ಕೆರಳ್ಳಿ ತಾಂಡೆಯಲ್ಲಿ ಗುರುವಾರ ಸಂಜೆ ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನಿಂದ 17 ಬಾಕ್ಸ್ ಸಾರಾಯಿ ಹಾಗೂ ರು. 34,700 ನಗದು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಶಿವಪ್ಪ ದಾರೆಪ್ಪ ಲಮಾಣಿ ಎಂದು ಗುರುತಿಸಲಾಗಿದೆ. ಘಟನೆ ಕುರಿತಂತೆ ಶಿರಹಟ್ಟಿ ಠಾಣೆ ಪಿಎಸ್ಐ ವಿಕಾಸ ಪಿ. ಲಮಾಣಿ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.