ಬಣವೆ ಭಸ್ಮ: ಧನಸಹಾಯ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಏ. 5
ಸ್ಥಳೀಯ ಲಂಬಾಣಿ ತಾಂಡಾ ಬಳಿ ಈಚೆಗೆ ಲಿಂಬಣ್ಣ ರಾಠೋಡ ಮತ್ತು ಈಶಪ್ಪ ಮಾಳೊತ್ತರ ಎಂಬುವರಿಗೆ ಸೇರಿದ ರು. 50 ಸಾವಿರ ಮೌಲ್ಯದ 2 ಮೇವಿನ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಹೋಗಿದ್ದು, ಮಾಜಿ ಶಾಸಕ ಜಿ.ಎಸ್. ಪಾಟೀಲ ರೈತರ ಕುಂಟುಂಬಕ್ಕೆ ಧನಸಹಾಯ ನೀಡಿ, ಸಾಂತ್ವನ ಹೇಳಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆವರಿಸಿರುವ ಭೀಕರ ಬರಗಾಲದಿಂದಾಗಿ ರೈತರಿಗೆ ದುಡಿಯಲು ಕೆಲಸವಿಲ್ಲದೇ ಪರದಾಡುವಂತಹ ಸ್ಥಿತಿಯಲ್ಲಿದ್ದರೆ, ಇತ್ತ ಜಾನುವಾರುಗಳಿಗೆ ಹೊಟ್ಟು, ಮೇವಿಲ್ಲದೆ ಕಸಾಯಿ ಖಾನೆಗೆ ಸೇರುತ್ತಿವೆ. ಇಂತಹ ಸಂದರ್ಭದಲ್ಲಿ ಆದ ಈ ಬೆಂಕಿ ಅನಾಹುತ ರೈತರನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡಿದೆ. ಕೂಡಲೇ ತಾಲೂಕಾಡಳಿತ ರೈತರ ನೆರವಿಗೆ ಧಾವಿಸಿ, ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಗಜೇಂದ್ರಗಡ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ವೀರಣ್ಣ ಸೊನ್ನದ, ಸುಭಾನಸಾಬ್ ಆರಗಿದ್ದಿ, ಪುರಸಭಾ ಸದಸ್ಯೆ ಶಾರದಾ ರಾಠೋಡ, ಮುರ್ತುಜಾ ಡಾಲಾಯತ್, ಕೊಟ್ರೇಶ ಚಿಲಕಾ, ಪರಶುರಾಮ ಕಲಾಲ, ಅಪ್ಪು ಮತ್ತಿಕಟ್ಟಿ, ಶಶಿಧರ ಹೂಗಾರ, ಪ್ರಶಾಂತ ರಾಠೋಡ, ಪುರಸಭೆ ಮಾಜಿ ಸದಸ್ಯೆ ಗಿರಿಜಾಬಾಯಿ ಗುಗಲೋತ್ತರ ಹಾಜರಿದ್ದರು.