ಅಭಿವೃದ್ಧಿ ಪರಿಗಣಿಸಿ ಸಿ.ಸಿ. ಪಾಟೀಲ್ಗೆ ಮತನೀಡಿ
ಕನ್ನಡಪ್ರಭ ವಾರ್ತೆ, ನರಗುಂದ, ಏ. 6
ರಾಜ್ಯ ಬಿಜೆಪಿ ಸರ್ಕಾರ ಕಳೆದ 5 ವರ್ಷಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಮಾನದಂಡವಾಗಿ ಪರಿಗಣಿಸಿ ಪಕ್ಷದ ಅಭ್ಯರ್ಥಿಯಾದ ಸಿ.ಸಿ. ಪಾಟೀಲರಿಗೆ ಮತ ನೀಡುವಂತೆ ಜಿಪಂ ಅಧ್ಯಕ್ಷ ಎಂ.ಎಸ್. ಪಾಟೀಲ ಹೇಳಿದರು.
ಅವರು ಶನಿವಾರ ನರಗುಂದ ವಿಧಾನಸಭಾ ಮತಕ್ಷೇತ್ರದ ಚಿಕ್ಕನರಗುಂದ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಸಿ. ಪಾಟೀಲ್ ಪರ ಪ್ರಚಾರ ನಡೆಸಿ ಮಾತನಾಡಿದರು. ನರಗುಂದ ಮತಕ್ಷೇತ್ರದಲ್ಲಿ ಹಿಂದೆಂದೂ ಆಗದ ಅಭಿವೃದ್ಧಿ ಕಾರ್ಯಗಳನ್ನು ಮಾಜಿ ಸಚಿವ, ಶಾಸಕ ಸಿ.ಸಿ. ಪಾಟೀಲರು ಕೈಗೊಂಡಿದ್ದಾರೆ. ರಸ್ತೆ, ಕುಡಿವ ನೀರು, ಚರಂಡಿ ಸೇರಿದಂತೆ ಇನ್ನಿತರೆ ಮೂಲ ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಕ್ಷೇತ್ರದಲ್ಲಾದ ಅಭಿವೃದ್ಧಿ ಕಾರ್ಯಗಳನ್ನೇ ಮಾನದಂಡವನ್ನಾಗಿಟ್ಟುಕೊಂಡು ಮತ ನೀಡುವಂತೆ ಕೋರಿದರು. ಗುರಪ್ಪ ಆದೆಪ್ಪನವರ, ಸುರೇಶ ಸಾತನ್ನವರ, ವಿ.ವೈ. ಕುರಹಟ್ಟಿ, ಪಡಿಯಪ್ಪ ಮರಿಯಣ್ಣವರ, ಶಿವಪ್ಪ, ಟಿ.ಎಸ್. ಚನ್ನಪ್ಪಗೌಡ್ರ, ಅಶೋಕ ನೋಪಂತ, ಅನಿಲ ಧರಿಯಣ್ಣವರ, ಮುತ್ತಣ್ಣ ಜ್ಞಾನೋಪಂತ, ಸಂಗಣ್ಣ ಚವಡಿ, ತಿಪ್ಪಣ್ಣ ಕಲಹಾಳ, ಈರಣ್ಣ ಹೊಂಗಲ, ಜಿ.ಬಿ. ಸಾತನ್ನವರ, ಸೋಮು ಹೊಂಗಲ, ಮಹೇಶ ಅರಿಬೆಂಚಿ, ರವಿ ಗಾಣಿಗೇರ, ಮಹಾದೇವಪ್ಪ ತಡಹಾಳ, ತಾಪಂ ಸದಸ್ಯೆ ವಿದ್ಯಾವತಿ ಭೂಮಣ್ಣವರ ಹಾಗೂ ಗ್ರಾಪಂ ಸದಸ್ಯರು ಪಾಲ್ಗೊಂಡಿದ್ದರು.