ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಇಂದು ವಿದ್ಯಾರ್ಥಿ ಸಂಘ ಉದ್ಘಾಟನೆ

Vishwanath S
Updated On : 9 Apr 2013, 10:45 am

ಗದಗ: ಸ್ಥಳೀಯ ಡಿ.ಜಿ.ಎಂ. ಆಯುರ್ವೇದ ಮೆಡಿಕಲ್ ಕಾಲೇಜಿನ 2013 ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆಯು ಏ. 9ರ ಬೆಳಗ್ಗೆ 10 ಗಂಟೆಗೆ ಮಹಾವಿದ್ಯಾಲಯದಲ್ಲಿ ಜರುಗಲಿದೆ. ಕಾರ್ಯಕ್ರಮದ ಸಾನ್ನಿಧ್ಯವನ್ನು ಶಿವಾನಂದ ಮಠದ ಅಭಿನವ ಶಿವಾನಂದ ಶ್ರೀಗಳು ವಹಿಸುವರು. ಉದ್ಘಾಟನೆಯನ್ನು ಕರ್ನಾಟಕ ಆಂದೋಲನದ ಅಧ್ಯಕ್ಷ ಡಾ. ಸತ್ಯಮೂರ್ತಿ ಭಟ್ ನೆರವೇರಿಸುವರು. ಅಧ್ಯಕ್ಷತೆಯನ್ನು ಡಿ.ಜಿ.ಎಂ. ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜಿ.ಬಿ. ಪಾಟೀಲ ವಹಿಸುವರು. ಅತಿಥಿಗಳಾಗಿ ಡಾ. ಎಂ.ವಿ. ಹೊಳ್ಳಿ ಆಗಮಿಸುವರು. ಇದೇ ಸಂದರ್ಭದಲ್ಲಿ ವಿಶ್ವ ಆರೋಗ್ಯ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಪಾಲ್ಗೊಳ್ಳುವಂತೆ ವಿದ್ಯಾರ್ಥಿ ಸಂಘಟನೆಯ ಕಾರ್ಯಾಧ್ಯಕ್ಷ ಡಾ. ಎಂ.ವಿ. ಐಹೊಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿದ್ಯುತ್ ವ್ಯತ್ಯಯ
ಗದಗ:
ಗದಗ-ಬೆಟಗೇರಿ ಅವಳಿ ನಗರದ ವಿವಿಧ ಭಾಗಗಳಲ್ಲಿ ಖ-ಆಕಿಉಖಕಿ ಯೋಜನೆಯಲ್ಲಿ ದುರಸ್ತಿ ಹೊಂದಿದ ಕಂಬಗಳನ್ನು ಬದಲಿಸುವ ಕೆಲಸ ಪ್ರಗತಿಯಲ್ಲಿದ್ದು, ಈ ಕೆಲಸದ ನಿಮಿತ್ತ ಏ. 8 ರಿಂದ 1 ತಿಂಗಳವರೆಗೆ ಕೆಲಸ ಕೈಗೊಳ್ಳುತ್ತಿರುವ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಕಾರಣ ಸಾರ್ವಜನಿಕರು ಪ್ರಕಟಣೆಯನ್ನು ಗಮನಿಸಿ ಹೆಸ್ಕಾದೊಂದಿಗೆ ಸಹಕರಿಸುವಂತೆ ಹೆಸ್ಕಾಂನ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಾಬು ಜಗಜೀವನರಾಮ್ ಆದರ್ಶ ಪಾಲಿಸಿ: ಬಳ್ಳಾರಿ
ಗದಗ:
ಹಸಿರು ಕ್ರಾಂತಿಯ ಹರಿಕಾರ, ಡಾ. ಬಾಬು ಜಗಜೀವನರಾಮ್ ಅವರ ವಿಚಾರ, ದೇಶ ಪ್ರೇಮ, ರಾಷ್ಟ್ರದ ಪ್ರಗತಿಗಾಗಿ ಅವರು ಕಂಡ ಕನಸು ಹಾಗೂ ಕೃಷಿ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅಪಾರ. ಅವರ ತತ್ವ ಚಿಂತನೆ, ವಿಚಾರಗಳನ್ನು ಸರ್ವರೂ ಪಾಲಿಸಿದಾಗ ಮಾತ್ರ ಜಯಂತಿ ಕಾರ್ಯಕ್ರಮ ಸಾರ್ಥಕ ಎಂದು ಜಿಲ್ಲಾ ದಲಿತ ಮುಖಂಡ ಎಸ್.ಎನ್. ಬಳ್ಳಾರಿ ಹೇಳಿದರು. ಅವರು ಶುಕ್ರವಾರ ನಗರದ ದಲಿತ ಸಂಘರ್ಷ ಸಮಿತಿ ಕಚೇರಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಗದಗ ಶಾಖೆ ಹಾಗೂ ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ ಗದಗ ಆಶ್ರಯದಲ್ಲಿ ನಡೆದ ಡಾ. ಬಾಬು ಜಗಜೀವನರಾಮ್ 106ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅತಿಥಿಗಳಾಗಿ ಆಗಮಿಸಿದ್ದ ಸತೀಶ ಹೂಲಿ ಮಾತನಾಡಿ, ಬಾಬು ಜಗಜೀವನರಾಮ್ ಜೀವನ ಕುರಿತು ಮಾತನಾಡಿದರು.  ಅಧ್ಯಕ್ಷತೆ ವಹಿಸಿದ್ದ ದಸಂಸ ಸಂಚಾಲಕ ಮಾರುತಿ ಗುಡಿಮನಿ ಮಾತನಾಡಿ, ಬಾಬು ಜಗಜೀವನರಾಮ ವ್ಯಕ್ತಿತ್ವ, ಆದರ್ಶ ಇಂದಿನ ಯುವಕರಿಗೆ ಮಾದರಿಯಾಗಿದ್ದು, ಶ್ರಮಪಟ್ಟರೆ ಅಸಾಧ್ಯವಾದುದು ಯಾವುದು ಇಲ್ಲ ಎಂಬುವುದಕ್ಕೆ ಬಾಬು ಜಗಜೀವನರಾಮ್ ಅವರೇ ಸಾಕ್ಷಿ ಎಂದರು. ಕಾರ್ಯಕ್ರಮದಲ್ಲಿ ಜೈಭೀಮ್ ಅಟೋ ಸಂಘದ ಅಧ್ಯಕ್ಷ ಪರುಶುರಾಮ ಪೂಜಾರ, ಶಹರ ಸಂಚಾಲಕ ಯುವರಾಜ ಬಳ್ಳಾರಿ, ದಲಿತ ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ವಿನಾಯಕ ಬಳ್ಳಾರಿ, ಪ್ರಕಾಶ ಹಾದಿಮನಿ, ರವಿ ಹಾದಿಮನಿ, ಬಸವರಾಜ ಶಿಂಗಾಡಿ ವೈ.ಡಿ. ಮುಳ್ಯಾಳ ಮುಂತಾದವರು ಇದ್ದರು. ಅಂಬೇಡ್ಕರ್ ಅಧ್ಯಯನ ಕೇಂದ್ರದ ಅಧ್ಯಕ್ಷ ಸಂತೋಷ ಬಳ್ಳಾರಿ ಸ್ವಾಗತಿಸಿ, ನಿರೂಪಿಸಿದರು. ಮಂಜುನಾಥ ಪೂಜಾರ ವಂದಿಸಿದರು.

ಡೋಣಿ: ಇಂದಿನಿಂದ ಜಾತ್ರೆ
ಗದಗ:
ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ಪುರಾತನ ಹಾಗೂ ಪವಾಡ ಪ್ರಸಿದ್ಧಿಯ ಹಾಲಸೋಮೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮಗಳು ಏ. 9 ರಿಂದ 14ರ ವರೆಗೆ ನಡೆಯಲಿವೆ. ಏ. 9 ರಂದು ಮಧ್ಯಾಹ್ನ 3 ಗಂಟೆಗೆ ಉಜ್ಜಯನಿಯ ಜ. ಸಿದ್ದಲಿಂಗ ಶಿವಾಚಾರ್ಯ ಭಗವತ್ಪಾದಂಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ನೆರವೇರುವುದು. ಕುಂಭಮೇಳವೂ ಜರುಗಲಿದ್ದು, ಸಕಲ ವಾದ್ಯಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಜರುಗಿ, ನಂತರ ಕಳಸಾರೋಹಣ ಹಾಗೂ ಧರ್ಮಸಭೆ ನಡೆಯಲಿದೆ. ಏ. 10 ರಂದು ರಾತ್ರಿ 8 ಗಂಟೆಗೆ ಹಾಲೇಶ್ವರರು ಆಗಮಿಸುವರು. ಏ. 11ರ ಬೆಳಗ್ಗೆ 11.45 ಗಂಟೆಗೆ ಅಯ್ಯಾಚಾರ ಹಾಗೂ ಭಕ್ತರಿಗೆ ದೀಕ್ಷೆ. ನಂತರ ಸಾಮೂಹಿಕ ವಿವಾಹಗಳು ಜರುಗಲಿವೆ. ವೀರೇಶ್ವರ ಶಿವಾಚಾರ್ಯ ಶ್ರೀಗಳಿಂದ ಮುಳ್ಳುಗದ್ದುಗೆ ಮಹೋತ್ಸವ ನಡೆಯಲಿದೆ. ಏ. 12 ರಂದು ಸಂಜೆ 4 ಗಂಟೆಗೆ ರಥೋತ್ಸವ. ರಾತ್ರಿ 8 ಗಂಟೆಗೆ ಜಾನಪದ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಡೋಣಿ ಹಾಲಸೋಮೇಶ್ವರ ಶ್ರೀಗಳು, ಹಾಲವಿಶ್ವರಾಧ್ಯ ಹಾಲಸ್ವಾಮಿಗಳು, ದೊಡ್ಡ ಹಾಲಸ್ವಾಮಿಗಳು, ಅಭಿನವ ಹಾಲವೀರಪ್ಪಜ್ಜ ಶ್ರೀಗಳು, ಅಭಿಷೇಕ ಹಾಲಸ್ವಾಮಿಗಳು, ಉಮಾಪತಿ ಹಾಲಸ್ವಾಮಿಗಳು, ಮಳೆಯೋಗೀಶ್ವರ ಶ್ರೀಗಳು, ನಂದಿವೇರಿಮಠದ ಶಿವಕುಮಾರ ಶ್ರೀಗಳು, ಗುರುಮೂರ್ತಿ ಶ್ರೀಗಳು ಭಾಗವಹಿಸುವರು. ಏ. 13 ರಂದು ರಾತ್ರಿ 8 ಗಂಟೆಗೆ ಕಡುಬಿನ ಕಾಳಗ ನಡೆಯಲಿದೆ. ಏ. 14 ರಂದು ರಾತ್ರಿ 10ಕ್ಕೆ ಗ್ರಾಮದೇವತೆ ದೊಡ್ಡಾಟ ಕಲಾಮೇಳದಿಂದ ಸಂಪೂರ್ಣ ರಾಮಾಯಣ ಬಯಲಾಟ ಪ್ರದರ್ಶನಗೊಳ್ಳಲಿದೆ. ಜಾತ್ರಾ ಮಹೋತ್ಸವದಲ್ಲಿ ಮುಖಂಡರು ಭಾಗವಹಿಸಲಿದ್ದಾರೆಂದು ಮಂಡಳಿ ತಿಳಿಸಿದೆ.

 ನೀರು ಪೂರೈಕೆ ಮಾಹಿತಿ
ಗದಗ:
ನಗರದ ಈಶ್ವರ ಬಡಾವಣೆ, ಮೇಟಿ ವಕೀಲರ ಮನೆ, ನಿಸರ್ಗ ಬಡಾವಣೆ, ಅಣ್ಣಿಗೇರಿ ಲೈನ್, ಕಟ್ಟಿಮನಿಯವರ ಲೈನ್, ಬೂದಿಹಾಳ ಲೈನ್, ಕಳಸಾಪುರ ರೋಡನ ಉಳಿದ ಭಾಗಗಳಲ್ಲಿ ಮಂಗಳವಾರ ತುಂಗಭದ್ರಾ ನದಿ ನೀರು ಪೂರೈಕೆ ಮಾಡಲಾಗುವುದು ಎಂದು ನಗರಸಭೆಯ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement