ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ಬಿಜೆಪಿ ಅಮಾನತಿನ ದಾಖಲೆ ತಲುಪಿಲ್ಲ

Vishwanath S
Updated On : 9 Apr 2013, 10:47 am

ಗದಗ: ಬಿಜೆಪಿ ನನ್ನನ್ನು ಅಮಾನತು ಮಾಡಿರುವ ವಿಷಯವನ್ನು ಕೇವಲ ಮಾಧ್ಯಮಗಳಲ್ಲಿಯೇ ಗಮನಿಸಿದ್ದೇ ನೆ. ಈ ಕುರಿತು ನನಗೆ ಯಾವುದೇ ಅಧಿಕೃತ ಪತ್ರ ಬಂದಿಲ್ಲ. ಹಾಗಾಗಿ ಈಗಲೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ಹಾವೇರಿ ಸಂಸದ ಶಿವಕುಮಾರ ಉದಾಸಿ ಹೇಳಿದರು.
ಬಿಜೆಪಿ ಕ್ರಮದ ಕುರಿತು 'ಕನ್ನಡಪ್ರಭ' ಅವರನ್ನು ಸಂಪರ್ಕಿಸಿದಾಗ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಈ ರೀತಿಯ ಗೊಂದಲಗಳನ್ನು ರಾಜ್ಯ ಬಿಜೆಪಿ ನಾಯಕರು ಕಳೆದ ಎರಡುವರೆ ತಿಂಗಳಿಂದ ನಡೆಸುತ್ತಲೇ ಬಂದಿದ್ದಾರೆ. ಪದೇ ಪದೇ ಮಾಧ್ಯಮಗಳಲ್ಲಿ ಈ ರೀತಿಯ ಸುದ್ದಿ ಹರಿಬಿಡುತ್ತಿದ್ದಾರೆ. ಇವುಗಳಿಗೆ ನಾನು ಪ್ರತಿಕ್ರಿಯೆ ನೀಡಲು ಹೇಗೆ ಸಾಧ್ಯ. ಅವರು ತೆಗೆದುಕೊಂಡಿರುವ ಕ್ರಮದ ಬಗ್ಗೆ ನನಗೆ ಲಿಖಿತ ದಾಖಲೆ ನನಗೆ ನೀಡಿಲ್ಲ ಎಂದರು.
ಇಂದು ಬಿ.ವೈ. ರಾಘವೇಂದ್ರ ಹಾಗೂ ನಿಮ್ಮ ಮೇಲೆ ತೆಗೆದುಕೊಂಡಿರುವ ಕ್ರಮದ ಬಗ್ಗೆ ಕೇಳಿದಾಗ, ಈ ರೀತಿಯ ಹೇಳಿಕೆ ನೀಡುವವರು ಮೊದಲು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕಿದೆ. ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎನ್ನುವ ಕುರಿತು ಅವರಲ್ಲಿಯೇ ಸ್ಪಷ್ಟತೆ ಇಲ್ಲ ಎಂದು ಬಿಜೆಪಿಯ ರಾಜ್ಯಾಧ್ಯಕ್ಷರನ್ನು ಅವರು ಪರೋಕ್ಷವಾಗಿ ಟೀಕಿಸಿದರು.
ಉಚ್ಚಾಟಿಸಲಿ: ಬಿಜೆಪಿಯವರು ದಿನಕ್ಕೊಂದು ಗೊಂದಲಕಾರಿ ಹೇಳಿಕೆ ನೀಡುವುದನ್ನು ಬಿಟ್ಟು, ನಮ್ಮ ಮೇಲೆ ಶಿಸ್ತಿನ ಕ್ರಮ ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದರೆ ನಮ್ಮನ್ನು ಅಮಾನತು ಮಾಡುವುದು ಬೇಡ. ನೇರವಾಗಿ ಪಕ್ಷದಿಂದಲೇ ಉಚ್ಚಾಟಣೆ ಮಾಡಿಲಿ. ಅದನ್ನು ಬಿಟ್ಟು ತಮಗೆ ಬೇಕೆಂದಾಗಲೆಲ್ಲ ಈ ವಿಷಯ ಬಳಕೆ ಮಾಡಿಕೊಂಡು ಮತ್ತೆ ಸುಮ್ಮನಾಗುವುದು ಸರಿಯಾದ ಕ್ರಮವಲ್ಲ ಎಂದ ಅವರು, ನಾನು ಮಂಗಳವಾರ ದೆಹಲಿಗೆ ಹೋಗುತ್ತಿದ್ದೇನೆ. ಅಲ್ಲಿನ ನನ್ನ ಕಚೇರಿಯ ವಿಳಾಸಕ್ಕೆ ಅಮಾನತಿನ ಪ್ರತಿಯನ್ನು ರವಾನಿಸಿರುವರೋ, ಇಲ್ಲವೋ ಎಂದು ಪರಿಶೀಲಿಸಿ ಪ್ರತಿಕ್ರಿಯೆ ನೀಡುತ್ತೇನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement