ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ
ರೋಣ: ತಾಲೂಕಿನ ಅರಹುಣಸಿ, ಕುರಹಟ್ಟಿ, ಕಲ್ಲಿಗನೂರ ಮತ್ತು ರೋಣ ಪಟ್ಟಣದ ನೂರಾರು ಕಾರ್ಯಕರ್ತರು ಶನಿವಾರ ಬಿಜೆಪಿ ತೊರೆದು ರೋಣ ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಐ.ಎಸ್. ಪಾಟೀಲ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು. ಐ.ಎಸ್. ಪಾಟೀಲ, ಗದಗ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವ್ಹಿ.ಆರ್. ಗುಡಿಸಾಗರ, ಮಿಥುನ್ ಪಾಟೀಲ, ಪ್ರಶಾಂತ ಪಾಟೀಲ, ಯುಸುಪ್ ಇಟಗಿ, ವೀರಯ್ಯ ಸೋಮನಕಟ್ಟಿಮಠ, ಸಂಗು ನವಲಗುಂದ, ಸುರೇಶ ಜಗ್ಗಲ, ಕೆ.ಕೆ. ಮುಲ್ಲಾ, ಪಾಲಾಕ್ಷಗೌಡ ಕರಕನಗೌಡ್ರ, ಮಲ್ಲನಗೌಡ ಪಾಟೀಲ, ಅಪ್ಪು ಗಿರಡ್ಡಿ, ಕಂಟೆಪ್ಪಗೌಡ ಕರಕನಗೌಡ್ರ, ಶರಣಪ್ಪಗೌಡ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.