ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗದಗ

ರೋಣದಲ್ಲಿ ಕಾಂಗ್ರೆಸ್‌ಗೆ ಜಯ: ಪಾಟೀಲ್ ವಿಶ್ವಾಸ

Vishwanath S
Updated On : 9 Apr 2013, 10:46 am

ಗಜೇಂದ್ರಗಡ: ರಾಜ್ಯದ ಜನತೆ ಬಿಜೆಪಿ ದುರಾಡಳಿತದಿಂದ ರೋಸಿ ಹೋದ ಪರಿಣಾಮ ಈ ಬಾರಿ ಕಾಂಗ್ರೆಸ್‌ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ಈ ನಿಟ್ಟಿನಲ್ಲಿ ರೋಣ ಕ್ಷೇತ್ರದ ಮತದಾರರು ಕಾಂಗ್ರೆಸ್ ಪಕ್ಷ ಕೈ ಹಿಡಿಯಲಿದ್ದಾರೆ ಎಂದು ಮಾಜಿ ಸಂಸದ ಆರ್.ಎಸ್. ಪಾಟೀಲ ವಿಶ್ವಾಸ ವ್ಯಕ್ತಪಡಿಸಿದರು.
ಸೋಮವಾರ ಸ್ಥಳೀಯ ಕಾಂಗ್ರೆಸ್ ಜನಸಂಪರ್ಕ ಕಾರ್ಯಾಲಯದಲ್ಲಿ ಸರ್ಜಾಪುರ, ನಿಡಗುಂದಿ ಗ್ರಾಮಗಳ ನೂರಾರು ಬಿಜೆಪಿ ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ನಂತರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್. ಪಾಟೀಲ ಮಾತನಾಡಿ, ರೋಣ ಮತಕ್ಷೇತ್ರದಲ್ಲಿ ಈ ಬಾರಿ ಬಿಜೆಪಿಗೆ ಸೋಲಿನ ರುಚಿ ತೋರಿಸುತ್ತೇವೆ ಎಂದು ಕ್ಷೇತ್ರ ಜನತೆ ಪಣತೊಟ್ಟಿದ್ದಾರೆ. ಸಚಿವ ಕಳಕಪ್ಪ ಬಂಡಿ ಸೋಲಿನ ಭೀತಿಯಿಂದ ಮತದಾರರಿಗೆ ಸುಳ್ಳಿನ ಕಂತೆಗಳನ್ನು ಕಟ್ಟಲು ಹೊರಟಿದ್ದಾರೆ ಎಂದರು. ಸರ್ಜಾಪುರದ ಶರಣಗೌಡ ಪಾಟೀಲ, ಯಲ್ಲಪ್ಪ ಕುರಿ, ಪಮ್ಮಣ್ಣ ಲಮಾಣಿ, ಅಂದಪ್ಪ ನಾಗನೂರ, ಶಂಕರಗೌಡ ಪಾಟೀಲ, ಚಂದ್ರಶೇಖರ ನಾಗನೂರ, ಯಲ್ಲಪ್ಪ ಬೊಮ್ಮಸಾಗರ ಕಾಂಗ್ರೆಸ್ ಸೇರಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಸೊನ್ನದ, ಚಂಬಣ್ಣ ಚವಡಿ, ಮೋಹನಸಾ ರಾಯಬಾಗಿ, ಗಿರೀಶ ರಂಗ್ರೇಜಿ, ತಾಪಂ ಸದಸ್ಯ ಅಂದಪ್ಪ ಬಿಚ್ಚೂರ, ಮುರ್ತುಜಾ ಡಾಲಾಯತ್, ಎಫ್.ಎಸ್. ಕರಿದುರುಗನವರ, ವೀರೇಶ ಬಿಚ್ಚೂರ, ಮಾರುತಿ ಕಲ್ಲೋಡ್ಡರ, ಕೋಟ್ರೇಶ ಚಿಲಕಾ, ವಿ.ಬಿ. ಹಪ್ಪಳದ, ಶಶಿಧರ ಹೂಗಾರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement