ಸಿ.ಸಿ. ಪಾಟೀಲ್ ಆರೋಗ್ಯಕ್ಕಾಗಿ ಪ್ರಾರ್ಥಿಸಿ ವಿಶೇಷ ಪೂಜೆ
ನರಗುಂದ: ಮೆಣಸಗಿ ಗ್ರಾಮದಲ್ಲಿ ಗನ್‌ಮ್ಯಾನ್ ಅಚಾತುರ್ಯದಿಂದಾಗಿ ಹಾರಿದ ಗುಂಡೇಟಿನಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಸಚಿವ, ಶಾಸಕ ಸಿ.ಸಿ.ಪಾಟೀಲ ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸಿ, ತಾಲೂಕಿನ ಯಾವಗಲ್ ಗ್ರಾಮದ ಅವರ ಅಭಿಮಾನಿ ಬಳಗ, ಯುವಕ ಮಂಡಳ, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ರುದ್ರಾಭಿಷೇಕ ಸಲ್ಲಿಸಿದರು.
ಸಿ.ಸಿ. ಪಾಟೀಲ ಅಭಿಮಾನಿ ಬಳಗದ ಅಧ್ಯಕ್ಷ ಚಂದ್ರಗೌಡ ಕಡದಳ್ಳಿ, ಗೌರವಾಧ್ಯಕ್ಷ ಮಲ್ಲಯ್ಯ ಕಾಡದೇವರಮಠ, ಬಸವರಾಜ ಜೈನರ, ತಾಪಂ ಸದಸ್ಯ ಶಿವಾನಂದ ಕಮತಿ, ವಿ.ಆರ್. ಮುಲ್ಕಿಪಾಟೀಲ, ಈರಣ್ಣ ಕಬಾಡ್ರ, ಈರಪ್ಪ ಗಾಣಿಗೇರ, ನಿಂಗಪ್ಪ ಹಂಪಣ್ಣವರ, ಶೇಖಪ್ಪ ಸತ್ತಿಗೇರಿ, ರಾಮಣ್ಣ ಹೊಂಬಳ, ಕಲ್ಲನಗೌಡ ಪೊಲೀಸಪಾಟೀಲ, ಶಿವಪ್ಪ ಘಾಳಿ, ಎಸ್.ಎಂ. ಕಬಾಡ್ರ, ಕಲ್ಲಪ್ಪ ಹಂಪಣ್ಣವರ, ಬಸಪ್ಪ ಬಳಿಗೇರ, ಮುತ್ತು ಶೀಪರಮಟ್ಟಿ, ಬುಡ್ಡಣ್ಣ ಬೊದ್ಲೇಖಾನ, ಹನುಮಂತ ವಡ್ಡರ, ಶಂಕರಗೌಡ ಕಡದಳ್ಳಿ, ಮುದಕಣ್ಣ ಹದ್ಲಿ ಮುಂತಾದವರು ಪಾಲ್ಗೊಂಡಿದ್ದರು.