ಇಂದು ಲಕ್ಷ ದೀಪೋತ್ಸವ
ನರಗುಂದ: ತಾಲೂಕಿನ ಸಂಕಧಾಳ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಜ. ಶಿವಾನಂದ ಶ್ರೀಗಳ ಮಠದ ಉದ್ಘಾಟನೆ ಮತ್ತು ಕಳಸಾರೋಹಣ ಹಾಗೂ ಶಿವಾನಂದ ಶ್ರೀಗಳ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ಏ. 10 ರ ರಾತ್ರಿ 8 ಗಂಟೆಗೆ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಗದಗನ ಶಿವಾನಂದ ಮಠದ ಜ. ಶಿವಾನಂದ ಶ್ರೀ, ಹರಲಕಟ್ಟಿ ಶಿವಾನಂದ ಮಠದ ನಿಜಗುಣ ಶ್ರೀ, ಸಂಗಳದ ಶಿವಾನಂದ ಮಠದ ರಾಚೋಟೇಶ್ವರ ಶ್ರೀ, ದಾಟನಾಳ ಶಿವಾನಂದ ಮಠದ ಬಸವರಾಜ ಶ್ರೀ, ಧಾರವಾಡ ಶಿವಾನಂದ ಮಠದ ಮಡಿವಾಳೇಶ್ವರ ಶ್ರೀ, ದಾದನಹಟ್ಟಿ ಶಿವಾನಂದ ಮಠದ ನಿಜಾನಂದ ಶ್ರೀ, ಕಲಗೇರಿ ಚಂದ್ರಶೇಖರ ಶ್ರೀಗಳು, ಶಿಶ್ವಿನಹಳ್ಳಿ ಶಾಂತಮ್ಮ ತಾಯಿಯವರು, ಸಂಕಧಾಳ ಶಿವಪುತ್ರಯ್ಯ ಶ್ರೀಗಳು ಮುಂತಾದವರು ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.